IND vs ENG 5th Test: 2019 ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ: ಆರಂಭಿಕನಾಗಿ ರೋಹಿತ್ ಶರ್ಮಾ ನೂತನ ದಾಖಲೆ
Rohit Sharma Record: ರೋಹಿತ್ ಶರ್ಮಾ 58ನೇ ಓವರ್ನ ಕೊನೆಯ ಎಸೆತದಲ್ಲಿ ರನ್ ಗಳಿಸಿ ಶತಕ ಪೂರೈಸಿದರು. ಅವರು 154 ಎಸೆತಗಳಲ್ಲಿ 13 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಜೊತೆಗೆ ಹಲವು ದಾಖಲೆ ಕೂಡ ನಿರ್ಮಿಸಿದರು.
1 / 5
ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅದ್ಭುತ ಶತಕದ ಕೊಡುಗೆ ನೀಡಿದರು. ಈ ಸರಣಿಯಲ್ಲಿ ರೋಹಿತ್ ಅವರ ಎರಡನೇ ಶತಕ ಇದಾಗಿದ್ದು, ಈ ಮೂಲಕ ಟೀಮ್ ಇಂಡಿಯಾ ದೊಡ್ಡ ಸ್ಕೋರ್ ದಾಖಲಿಸುವ ಭರವಸೆಯಲ್ಲಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 8 ವಿಕೆಟ್ ಕಳೆದುಕೊಂಡು 473 ರನ್ ಗಳಿಸಿತ್ತು.
2 / 5
ರೋಹಿತ್ 58ನೇ ಓವರ್ನ ಕೊನೆಯ ಎಸೆತದಲ್ಲಿ ರನ್ ಗಳಿಸಿ ಶತಕ ಪೂರೈಸಿದರು. ಅವರು 154 ಎಸೆತಗಳಲ್ಲಿ 13 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಇಂಗ್ಲೆಂಡ್ ಬೌಲರ್ಗಳ ಬೆಂಡೆತ್ತಿದ ರೋಹಿತ್ ಸ್ಫೋಟಕ ಆಟವಾಡಿದರು. ಜೊತೆಗೆ ಹಲವು ದಾಖಲೆ ಕೂಡ ನಿರ್ಮಿಸಿದರು.
3 / 5
ಈ ಶತಕದೊಂದಿಗೆ, ರೋಹಿತ್ 2019 ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆರಂಭಿಕ ಆಟಗಾರರಾದರು. ರೋಹಿತ್ 2019 ರಿಂದ ಆರಂಭಿಕರಾಗಿ ಒಂಬತ್ತು ಶತಕಗಳನ್ನು ಗಳಿಸಿದ್ದಾರೆ. ಈ ವಿಚಾರದಲ್ಲಿ ಶ್ರೀಲಂಕಾದ ದಿಮುತ್ ಕರುಣಾರತ್ನೆಗೆ ಸಮನಾಗಿದ್ದ ರೋಹಿತ್ ಇದೀಗ ಅವರನ್ನು ಹಿಂದಿಕ್ಕಿದ್ದಾರೆ. ಕರುಣಾರತ್ನೆ 2019 ರಿಂದ ಎಂಟು ಶತಕಗಳನ್ನು ಗಳಿಸಿದ್ದಾರೆ.
4 / 5
ರೋಹಿತ್ ಮತ್ತು ಕರುಣಾರತ್ನ ನಂತರ ಡೇವಿಡ್ ವಾರ್ನರ್, ಟಾಮ್ ಲಾಥಮ್, ಉಸ್ಮಾನ್ ಖ್ವಾಜಾ ಇದ್ದಾರೆ. ಮೂವರೂ ತಲಾ ಐದು ಶತಕ ಬಾರಿಸಿದ್ದಾರೆ. ರೋಹಿತ್ ನಂತರ ಗಿಲ್ ಕೂಡ ಶತಕ ಪೂರೈಸಿದರು. ಇವರಿಬ್ಬರು ಶತಕದ ಜೊತೆಯಾಟ ಆಡಿದರು. ಇಬ್ಬರೂ ತಂಡದ ಮೊತ್ತವನ್ನು 250ರ ಗಡಿ ದಾಟಿಸಿ ಬಿಟ್ಟರು.
5 / 5
ರೋಹಿತ್ ಇಂಗ್ಲೆಂಡ್ ಸರಣಿಯ ಆರಂಭಿಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿರಲಿಲ್ಲ. ಹೈದರಾಬಾದ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 24 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 39 ರನ್ ಗಳಿಸಿದ್ದರು. ಎರಡನೇ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 14 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 13 ರನ್ ಗಳಿಸಿದ್ದರು. ಇದಾದ ಬಳಿಕ ರಾಜ್ ಕೋಟ್ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿ ಫಾರ್ಮ್ಗೆ ಬಂದಿದ್ದರು.