Asia Cup Final: ಟ್ರೋಫಿ ಎತ್ತಿ ಹಿಡಿಯುವ ಮುನ್ನ ಪೋಸ್ಟ್ ಮ್ಯಾಚ್​ನಲ್ಲಿ ರೋಹಿತ್ ಶರ್ಮಾ ಹೇಳಿದ್ದೇನು ನೋಡಿ

|

Updated on: Sep 18, 2023 | 7:35 AM

Rohit Sharma Post Match, IND vs SL Asia Cup Final: ಶ್ರೀಲಂಕಾ ವಿರುದ್ಧದ ಏಷ್ಯಾಕಪ್ ಫೈನಲ್ ಪಂದ್ಯ ಮುಗಿದ ಬಳಿಕ ಟ್ರೋಫಿ ಪಡೆದುಕೊಳ್ಳುವ ಮುನ್ನ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಆಟಗಾರರು ನೀಡಿದ ಪ್ರದರ್ಶನವನ್ನು ಹಿಟ್​ಮ್ಯಾನ್ ಹಾಡಿಹೊಗಳಿದ್ದಾರೆ.

1 / 7
ಏಷ್ಯಾಕಪ್ 2023 ಫೈನಲ್​ನಲ್ಲಿ ಊಹೆಗೂ ನಿಲುಕದ ರೀತಿ ಪ್ರದರ್ಶನ ತೋರಿದ ಭಾರತ ಕ್ರಿಕೆಟ್ ತಂಡ ಪ್ರಶಸ್ತಿ ಗೆದ್ದು ಬೀಗಿದೆ. ಕೊಲಂಬೊದ ಆರ್. ಪ್ರೇಮದಾ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಭಾರತ-ಶ್ರೀಲಂಕಾ ಫೈನಲ್ ಪಂದ್ಯ 2 ಗಂಟೆಗಳ ಒಳಗೆ ಮುಕ್ತಾಯಗೊಂಡಿತು. ಮೊಹಮ್ಮದ್ ಸಿರಾಜ್ 6 ವಿಕೆಟ್ ಕಿತ್ತು ಹೀರೋ ಆದರು.

2 / 7
ಪಂದ್ಯ ಮುಗಿದ ಬಳಿಕ ಟ್ರೋಫಿ ಪಡೆದುಕೊಳ್ಳುವ ಮುನ್ನ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಆಟಗಾರರು ನೀಡಿದ ಪ್ರದರ್ಶನವನ್ನು ಹಿಟ್​ಮ್ಯಾನ್ ಹಾಡಿಹೊಗಳಿದ್ದಾರೆ.

3 / 7
ಇದೊಂದು ಅದ್ಭುತ ಪ್ರದರ್ಶನವಾಗಿದೆ. ಫೈನಲ್​ನಲ್ಲಿ ನಿಮ್ಮನ್ನು ನೀವು ತಯಾರು ಮಾಡಿಕೊಂಡು ಈರೀತಿ ಪ್ರದರ್ಶನ ತೋರುವುದು ಸುಲಭವಲ್ಲ. ಬೌಲಿಂಗ್​ನಲ್ಲಿ ಅತ್ಯುತ್ತಮ ಆರಂಭ ಪಡೆದುಕೊಂಡು ಬ್ಯಾಟಿಂಗ್​ನಲ್ಲಿ ಉತ್ತಮವಾಗಿ ಮುಕ್ತಾಯ ಮಾಡಿದೆವು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

4 / 7
ನಮ್ಮ ವೇಗದ ಬೌಲರ್​ಗಳು ತುಂಬಾ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾರೆ. ಇದು ನಾವು ಹೆಮ್ಮೆ ಪಡುವ ವಿಷಯ. ವೇಗಿಗಳಿಗೆ ತಾವೇನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟತೆ ಇದೆ. ಅದನ್ನು ನೋಡಲು ಚೆನ್ನಾಗಿರುತ್ತದೆ. ಈರೀತಿಯ ಪ್ರದರ್ಶನವನ್ನು ನಾವು ದೀರ್ಘಕಾಲದ ವರೆಗೆ ಮುಂದುವರೆಸುತ್ತೇವೆ - ರೋಹಿತ್ ಶರ್ಮಾ.

5 / 7
ಇಂದಿನ ಪಂದ್ಯದಲ್ಲಿ ಕ್ರೆಡಿಟ್ ಮೊಹಮ್ಮದ್ ಸಿರಾಜ್​ಗೆ ಸಲ್ಲಬೇಕು. ವೇಗಿಗಳು ಚೆಂಡನ್ನು ಗಾಳಿಯಲ್ಲಿ ಬಿಟ್ಟು ಪಿಚ್​ನ ಹೊರಗೆ ಚಲಿಸುವಂತೆ ಮಾಡುವುದು ಅಪರೂಪ. ಈ ಟೂರ್ನಿಯಲ್ಲಿ ನಾವು ಏನೆಲ್ಲ ಸಾಧಿಸಬೇಕು ಎಂದುಕೊಂಡಿದ್ದೆವೊ ಅದನ್ನೆಲ್ಲ ಮಾಡಿದ್ದೇವೆ. ಮುಂಬರುವ ವಿಶ್ವಕಪ್ ಅನ್ನು ಎದುರು ನೋಡುತ್ತಿದ್ದೇವೆ ಎಂಬುದು ರೋಹಿತ್ ಮಾತು.

6 / 7
ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಹಾರ್ದಿಕ್ ಪಾಂಡ್ಯ-ಇಶಾನ್ ಕಿಶನ್ ಬ್ಯಾಟಿಂಗ್ ಮಾಡಿದ ರೀತಿ, ನಂತರ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಶತಕ, ಶುಭ್​ಮನ್ ಗಿಲ್ ಬ್ಯಾಟಿಂಗ್ ಮಾಡಿದ ರೀತಿ ಅತ್ಯುತ್ತಮವಾಗಿತ್ತು. ನಮ್ಮ ಆಟಗಾರರು ವಿವಿಧ ಹಂತಗಳಲ್ಲಿ ತಂಡಕ್ಕೆ ಅಗತ್ಯ ಕೊಡುಗೆ ಸಲ್ಲಿಸಿದ್ದಾರೆ ಎಂದು ರೋಹಿತ್ ಹೇಳಿದ್ದಾರೆ.

7 / 7
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಮೊಹಮ್ಮದ್ ಸಿರಾಜ್ (21 ರನ್​ಗೆ 6 ವಿಕೆಟ್) ಬೌಲಿಂಗ್ ದಾಳಿಗೆ ತತ್ತರಿಸಿ 50 ರನ್​ಗಳಿಗೆ ಆಲೌಟ್ ಆಯಿತು. ಭಾರತ ಕೇವಲ 6.1 ಓವರ್​ಗಳಲ್ಲಿ ಗುರಿ ಮುಟ್ಟಿ ಎಂಟನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.