ಟಿ20 ವಿಶ್ವಕಪ್‌ಗೆ ಈ 10 ಆಟಗಾರರು ಫೈನಲ್ ಆಗಿದ್ದಾರೆ ಎಂದ ರೋಹಿತ್ ಶರ್ಮಾ: ಯಾರೆಲ್ಲ ಗೊತ್ತೇ?

|

Updated on: Jan 19, 2024 | 8:37 AM

India Squad for ICC T20I World Cup 2024: ಐಸಿಸಿ ಟಿT20 ವಿಶ್ವಕಪ್ 2024 ಅನ್ನು USA ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಿವೆ. ಒಂದು ಟ್ರೋಫಿಗಾಗಿ ಒಟ್ಟು 20 ತಂಡಗಳು ಸ್ಪರ್ಧಿಸಲಿವೆ. ಹೀಗಿರುವಾಗ ಇದೀಗ, ಅಫ್ಘಾನ್ ವಿರುದ್ಧದ ಸರಣಿ ಬಳಿಕ ರೋಹಿತ್ ಶರ್ಮಾ ಟಿ20 ವಿಶ್ವಕಪ್ ಬಗ್ಗೆ ಕೆಲ ಮಾತುಗಳನ್ನು ಆಡಿದ್ದಾರೆ.

1 / 7
ಟೀಮ್ ಇಂಡಿಯಾ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಟಿ20 ಪಂದ್ಯ ಎರಡನೇ ಸೂಪರ್ ಓವರ್​ನಲ್ಲಿ ಅಂತ್ಯಕಂಡು ಭಾರತ ಗೆಲುವು ಸಾಧಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.

2 / 7
ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಇಬ್ಬರೂ ಐದನೇ ವಿಕೆಟ್‌ಗೆ 190 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ರೋಹಿತ್ ಔಟಾಗದೆ 121 ಮತ್ತು ರಿಂಕು 69 ರನ್ ಗಳಿಸಿದರು. ಇದು ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಭಾರತದ ಕೊನೆಯ ಟಿ20 ಪಂದ್ಯವಾಗಿತ್ತು.

3 / 7
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ 14 ತಿಂಗಳ ನಂತರ ಮತ್ತು ವಿಶ್ವಕಪ್‌ಗೆ ಮುನ್ನ ಈ ಸರಣಿಯನ್ನು ಕ್ಲೀನ್​ಸ್ವೀಪ್ ಮಾಡಿರುವುದು ತಂಡಕ್ಕೆ ಸಂತಸದ ಸುದ್ದಿ. ಪಂದ್ಯದ ನಂತರ, ರೋಹಿತ್ ಶರ್ಮಾ ಅವರು ಮಾಜಿ ಸಹ ಆಟಗಾರರಾದ ಜಹೀರ್ ಖಾನ್, ಪ್ರಗ್ಯಾನ್ ಓಜಾ ಮತ್ತು ಇತರರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಟಿ20 ವಿಶ್ವಕಪ್ ಕುರಿತು ಮಾತನಾಡಿದ್ದಾರೆ.

4 / 7
ಐಸಿಸಿ ಟಿ20 ವಿಶ್ವಕಪ್ 2024 ಅನ್ನು USA ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಿವೆ. ಒಂದು ಟ್ರೋಫಿಗಾಗಿ ಒಟ್ಟು 20 ತಂಡಗಳು ಸ್ಪರ್ಧಿಸಲಿವೆ. ಈ ಸ್ಪರ್ಧೆಯನ್ನು ಜೂನ್ 1 ರಿಂದ 29 ರವರೆಗೆ ಆಯೋಜಿಸಲಾಗಿದೆ. ತಲಾ 5-5 ರಂತೆ 20 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ.

5 / 7
ಟೀಮ್ ಇಂಡಿಯಾ ಎ ಗುಂಪಿನಲ್ಲಿದೆ. ಭಾರತದ ಜೊತೆ ಪಾಕಿಸ್ತಾನ, ಐರ್ಲೆಂಡ್, ಕೆನಡಾ ಮತ್ತು ಯುಎಸ್‌ ತಂಡ ಕೂಡ ಇದೆ. ಅಫ್ಘಾನ್ ವಿರುದ್ಧದ ಸರಣಿ ಬಳಿಕ ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್ ಬಗ್ಗೆ ಕೆಲ ಮಾತುಗಳನ್ನು ಆಡಿದ್ದು ಅವರು ಏನು ಹೇಳಿದ್ದಾರೆ ನೋಡೋಣ.

6 / 7
''ಮುಂಬರುವ ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾ ಪ್ರಬಲ ಸ್ಪರ್ಧಿಯಾಗಿದೆ. ಟಿ20 ವಿಶ್ವಕಪ್ ಗೆಲ್ಲಲು ಪ್ರಯತ್ನಿಸುತ್ತೇವೆ. ಆದರೆ ಮಾತನಾಡುವುದರಿಂದ ಏನೂ ಆಗುವುದಿಲ್ಲ. ಅದಕ್ಕಾಗಿ ಏನು ಸಿದ್ಧತೆ ಮಾಡಿಕೊಳ್ಳಬೇಕು''. ಒಂದಿಷ್ಟು ತಯಾರು ಆಗಿದೆ ಎಂಬ ಬಗ್ಗೆಯೂ ರೋಹಿತ್ ಹೇಳಿದ್ದಾರೆ.

7 / 7
ಟಿ20 ವಿಶ್ವಕಪ್‌ಗಾಗಿ ನಾವು ಇನ್ನೂ 15 ಆಟಗಾರರ ಹೆಸರನ್ನು ಅಂತಿಮಗೊಳಿಸಿಲ್ಲ. ಆದರೆ ತಲೆಯಲ್ಲಿ 8 ರಿಂದ 10 ಜನರ ಹೆಸರುಗಳಿವೆ, ಅವರು ತಂಡದಲ್ಲಿರಬಹುದು" ಎಂದು ರೋಹಿತ್ ಹೇಳಿದ್ದಾರೆ. ಆದರೆ, ಅವರು ಯಾರು ಎಂಬುದನ್ನು ಬಹಿರಂಗ ಪಡಿಸಿಲ್ಲ. ಈ ಮೂಲಕ ಟಿ20 ವಿಶ್ವಕಪ್ ಗೆ 15 ಆಟಗಾರರ ಪೈಕಿ 8-10 ಆಟಗಾರರು ಫೈನಲ್ ಆಗಿದ್ದಾರೆ. 5 ಸ್ಲಾಟ್ ಖಾಲಿಯಿದೆ. ಐಪಿಎಲ್ ಪ್ರದರ್ಶನದ ಬಳಿಕ ಆ 5 ಜನರ ಬಗ್ಗೆ ನಿರ್ಧಾರ ಕೈಗೊಳ್ಳಬಹುದು.