Jofra Archer RCB: ಆರ್‌ಸಿಬಿ ಬೌಲಿಂಗ್ಗೆ ಬಂತು ಆನೆ ಬಲ: ಟಾಮ್ ಕರನ್ ಬದಲಿಗೆ ಸ್ಪೋಟಕ ವೇಗಿ ಎಂಟ್ರಿ?
IPL 2024: ಆರ್‌ಸಿಬಿ ತಂಡದ ಇಂಗ್ಲಿಷ್ ಆಲ್ ರೌಂಡರ್ ಟಾಮ್ ಕರನ್ ಗಾಯಗೊಂಡಿದ್ದಾರೆ. ಇದೀಗ ಐಪಿಎಲ್ಗೆ ಇವರ ಲಭ್ಯತೆ ಬಗ್ಗೆ ಗೊಂದಲವಿದೆ. ಹೀಗಿರುವಾಗ ಆರ್‌ಸಿಬಿ ತಂಡ ಇಂಗ್ಲೆಂಡ್ ಘಾತಕ ವೇಗಿ ಜೋಫ್ರಾ ಆರ್ಚರ್‌ಗೆ ಸಹಿ ಹಾಕಲು ಮುಂದಾಗಿದೆ ಎಂದು ಹೇಳಲಾಗಿದೆ.
1 / 6
ಐಪಿಎಲ್ 2024ರ ಹೊಸ ಸೀಸನ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ, ಈ ಬಾರಿ ಕೆಲ ಸ್ಟಾರ್ ಆಟಗಾರರು ಇಂಜುರಿ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಆಡಲು ಸಾಧ್ಯವಾಗುತ್ತಿಲ್ಲ. ಇವರ ಜಾಗಕ್ಕೆ ಬದಲಿ ಆಟಗಾರರು ಪ್ರವೇಶಿಸುತ್ತಿದ್ದಾರೆ. ಈ ಸಮಸ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೂಡ ಉದ್ಭವಿಸಿದೆ.
2 / 6
ಆರ್‌ಸಿಬಿ ತಂಡದ ಇಂಗ್ಲಿಷ್ ಆಲ್ ರೌಂಡರ್ ಟಾಮ್ ಕರನ್ ಗಾಯಗೊಂಡಿದ್ದಾರೆ. ಜನವರಿಯಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಟಾಮ್ ಇಂಜುರಿಗೆ ತುತ್ತಾಗಿದ್ದರು. ಇದೀಗ ಐಪಿಎಲ್ಗೆ ಇವರ ಲಭ್ಯತೆ ಬಗ್ಗೆ ಗೊಂದಲವಿದೆ. ಹೀಗಿರುವಾಗ ಆರ್‌ಸಿಬಿ ಮತ್ತೊಬ್ಬ ಮಾರಕ ವೇಗಿಯನ್ನು ಕರೆತರಲು ಮುಂದಾಗಿದೆ ಎಂದು ಹೇಳಲಾಗಿದೆ.
3 / 6
ಫಾಫ್ ಡುಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡ ಇಂಗ್ಲೆಂಡ್ ಘಾತಕ ವೇಗಿ ಜೋಫ್ರಾ ಆರ್ಚರ್‌ಗೆ ಸಹಿ ಹಾಕಲು ಮುಂದಾಗಿದೆ ಎಂದು ಹೇಳಲಾಗಿದೆ. ಜೋಫ್ರಾ ಆರ್ಚರ್ ಕಳೆದ 3 ವರ್ಷಗಳಿಂದ ಐಪಿಎಲ್ ಆಡಿಲ್ಲ. ಸತತವಾಗಿ ಗಾಯಗಳಿಂದ ಬಳಲುತ್ತಿದ್ದಾರೆ. ಆದರೀಗ ಆರ್ಚರ್ ಭಾರತದಲ್ಲಿದ್ದಾರೆ. ಅದುಕೂಡ ಬೆಂಗಳೂರಿನಲ್ಲಿ.
4 / 6
ಆರ್ಚರ್ ಪ್ರಸ್ತುತ ತನ್ನ ಕೌಂಟಿ ಕ್ಲಬ್ ಸಸೆಕ್ಸ್‌ನೊಂದಿಗೆ ಭಾರತ ಪ್ರವಾಸ ಮಾಡುತ್ತಿದ್ದಾರೆ. ಸಸೆಕ್ಸ್ ತಂಡ ಪ್ರಥಮ ದರ್ಜೆ ಪಂದ್ಯಗಳನ್ನು ಆಡಲಿದೆ. ಸದ್ಯ ತಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದೆ. ಹೀಗಿರುವಾಗ ಈ ಋತುವಿನಲ್ಲಿ ಆಡಲು ಆರ್ಚರ್ ಅವರನ್ನು ಆರ್‌ಸಿಬಿ ಸಂಪರ್ಕಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಿದಾಡಿದೆ.
5 / 6
ಆರ್ಚರ್ ಸಸೆಕ್ಸ್ ತಂಡದೊಂದಿಗೆ ಭಾರತಕ್ಕೆ ಬಂದಿದ್ದು ಟಿ20 ವಿಶ್ವಕಪ್‌ಗೆ ತಯಾರಿ ನಡೆಸುವುದಕ್ಕಾಗಿ. ಜೂನ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಅದಕ್ಕೂ ಮುನ್ನ ಆರ್ಚರ್ ಸಂಪೂರ್ಣ ಫಿಟ್ ಆಗಬೇಕು ಎಂದು ಇಂಗ್ಲೆಂಡ್ ನಿರೀಕ್ಷಿಸುತ್ತದೆ. ಇದಕ್ಕೆ ಐಪಿಎಲ್ ಕೂಡ ವೇದಿಕೆ ಆಗುವ ಸಾಧ್ಯತೆ ಇದೆ. ಆದರೆ, ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎಂಬುದು ಇನ್ನಷ್ಟೆ ತಿಳಿದುಬರಬೇಕಿದೆ.
6 / 6
ಐಪಿಎಲ್ 2024ಕ್ಕೆ ಆರ್‌ಸಿಬಿ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಜಯ್‌ಕುಮಾರ್ ವೈಶಾಕ್, ಮನೋಜ್ ಭಾಂಡಗೆ, ಮಯಾಂಕ್ ದಾಗರ್ , ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಅಲ್ಝಾರಿ ಜೋಸೆಫ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ಸ್ವಪ್ನಿಲ್ ಸಿಂಗ್, ಟಾಮ್ ಕರನ್, ಸೌರವ್ ಚೌಹಾಣ್, ಯಶ್ ದಯಾಳ್, ಲಾಕಿ ಫರ್ಗುಸನ್.