IPL 2024: ಐಪಿಎಲ್ ಬಹುಮಾನದ ಮೊತ್ತಕ್ಕಿಂತ ಈ ನಾಯಕನ ವೇತನವೇ ಹೆಚ್ಚು..!
IPL 2024: ಈ ಬಾರಿಯ ಐಪಿಎಲ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಮಿನಿ ಹರಾಜಿನಲ್ಲಿ ಪ್ರಮುಖ ಆಟಗಾರನನ್ನು ಖರೀದಿಸಿದ ಹಲವು ಫ್ರಾಂಚೈಸಿಗಳು ಇದರಲ್ಲಿ ಕೆಲವರಿಗೆ ನಾಯಕತ್ವವನ್ನೂ ನೀಡಿವೆ. ಹೊಸದಾಗಿ ನಾಯಕತ್ವ ಪಡೆದಿರುವ ಈ ಆಟಗಾರರು ಐಪಿಎಲ್ನ ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನದ ಮೊತ್ತಕ್ಕಿಂತಲೂ ಅಧಿಕ ಹಣವನ್ನು ಸಂಭಾವನೆ ರೂಪದಲ್ಲಿ ಪಡೆಯಲ್ಲಿದ್ದಾರೆ.
Updated on: Mar 14, 2024 | 9:48 PM

ಈ ಬಾರಿಯ ಐಪಿಎಲ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಮಿನಿ ಹರಾಜಿನಲ್ಲಿ ಪ್ರಮುಖ ಆಟಗಾರನನ್ನು ಖರೀದಿಸಿದ ಹಲವು ಫ್ರಾಂಚೈಸಿಗಳು ಇದರಲ್ಲಿ ಕೆಲವರಿಗೆ ನಾಯಕತ್ವವನ್ನೂ ನೀಡಿವೆ. ಹಾಗೆ ದುಬಾರಿ ಬೆಲೆ ಪಡೆದು ತಂಡ ಸೇರಿಕೊಂಡಿದಲ್ಲದೆ, ನಾಯಕತ್ವವನ್ನು ಪಡೆದಿರುವ ಈ ಆಟಗಾರರು ಐಪಿಎಲ್ನ ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನದ ಮೊತ್ತಕ್ಕಿಂತಲೂ ಅಧಿಕ ಹಣವನ್ನು ಸಂಭಾವನೆ ರೂಪದಲ್ಲಿ ಪಡೆಯಲ್ಲಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಅಧಿಕ ಸಂಭಾವನೆ ಪಡೆಯುತ್ತಿರುವ ನಾಯಕನೆಂದರೆ ಅದು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್. ಕಮ್ಮಿನ್ಸ್ ಆವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಬಾರಿಯ ಹರಾಜಿನಲ್ಲಿ 20.50 ಕೋಟಿ ರೂ. ನೀಡಿ ಖರೀದಿಸಿತ್ತು.

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ನಾಯಕನೆಂದರೆ ಅದು ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿರುವ ಕನ್ನಡಿಗ ಕೆಎಲ್ ರಾಹುಲ್. ರಾಹುಲ್ಗೆ ಲಕ್ನೋ ಫ್ರಾಂಚೈಸಿ 17 ಕೋಟಿ ರೂ ವೇತನ ನೀಡುತ್ತಿದೆ.

ಮೂರನೇ ಸ್ಥಾನದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಇದ್ದು, ವರ್ಷಗಳ ಬಳಿಕ ಐಪಿಎಲ್ ಅಖಾಡಕ್ಕೀಳಿಯುತ್ತಿರುವ ಪಂತ್ಗೆ ಡೆಲ್ಲಿ ಫ್ರಾಂಚೈಸಿ 16 ಕೋಟಿ ಸಂಭಾವನೆ ನೀಡುತ್ತಿದೆ.

ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿರುವ ಹಾರ್ದಿಕ್ ಪಾಂಡ್ಯಗೆ ಈ ಆವೃತ್ತಿಯಿಂದ ಮುಂಬೈ ತಂಡದ ನಾಯಕತ್ವ ಕೂಡ ಸಿಕ್ಕಿದೆ. ರೋಹಿತ್ ಶರ್ಮಾರಿಂದ ನಾಯಕತ್ವ ಪಡೆದುಕೊಂಡಿರುವ ಪಾಂಡ್ಯಗೆ 15 ಕೋಟಿ ರೂ ವೇತನ ಸಿಗಲಿದೆ.

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ಗೆ ಪ್ರತಿ ಆವೃತ್ತಿಗೆ 14 ಕೋಟಿ ರೂ ವೇತನ ನೀಡಲಾಗುತ್ತಿದೆ. ಸಂಜು ನಾಯಕತ್ವದಲ್ಲಿ ತಂಡ ಒಮ್ಮೆ ಮಾತ್ರ ಫೈನಲ್ಗೇರಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ಗೆ ಪ್ರತಿ ಸೀಸನ್ಗೆ 12.25 ಕೋಟಿ ರೂ ವೇತನ ನೀಡಲಾಗುತ್ತಿದೆ. ಪ್ರಸ್ತುತ ಇಂಜುರಿ ಸಮಸ್ಯೆಯಿಂದ ಬಳಲುತ್ತಿರುವ ಶ್ರೇಯಸ್ ಈ ಬಾರಿಯ ಐಪಿಎಲ್ ಆಡುವುದು ಅನುಮಾನವಾಗಿದೆ.

ಐಪಿಎಲ್ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿಗೆ 12 ಕೋಟಿ ರೂ ವೇತನ ನೀಡಲಾಗುತ್ತಿದೆ. ಟೂರ್ನಿ ಆರಂಭಕ್ಕೂ ಮುನ್ನ ಧೋನಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುವೆ ಎಂದು ಹೇಳುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ಗೆ 8.25 ಕೋಟಿ ರೂ ವೇತನ ನೀಡಲಾಗುತ್ತಿದೆ.

ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ಗೆ ಪ್ರತಿ ಆವೃತ್ತಿಗೆ 7 ಕೋಟಿ ರೂ ವೇತನ ನೀಡಲಾಗುತ್ತಿದೆ.

ಈ ಆವೃತ್ತಿಯಿಂದ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವವಹಿಸಿಕೊಂಡಿರುವ ಶುಭ್ಮನ್ ಗಿಲ್ಗೆ ಪ್ರತಿ ಸೀಸನ್ಗೆ 07 ಕೋಟಿ ರೂ ಸಂಭಾವನೆ ನೀಡಲಾಗುತ್ತಿದೆ.




