RR vs RCB Pitch Report: ಆರ್​ಸಿಬಿ ಸೋತರೆ ಪ್ಲೇ ಆಫ್ ಕನಸು ಭಗ್ನ: ಸವಾಯಿ ಮಾನ್​ಸಿಂಗ್ ಪಿಚ್ ಯಾರಿಗೆ ಹೆಚ್ಚು ಸಹಕಾರಿ?

|

Updated on: May 14, 2023 | 8:29 AM

Sawai Mansingh Stadium Pitch Report: ಎಲ್ಲರ ಚಿತ್ತ ನೆಟ್ಟಿರುವ ರಾಜಸ್ಥಾನ್ ರಾಯಲ್ಸ್ ಹಾಗೂ ಆರ್​ಸಿಬಿ ನಡುವಣ ಪಂದ್ಯ ಮಧ್ಯಾಹ್ನ 3.30ಕ್ಕೆ ಶುರುವಾಗಲಿದೆ. ಸವಾಯಿ ಮಾನ್​ಸಿಂಗ್ ಸ್ಟೇಡಿಯಂ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುತ್ತದೆ.

1 / 7
ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ಸವಾಲೊಡ್ಡುತ್ತಿದೆ. ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಕದನ ಏರ್ಪಡಿಸಲಾಗಿದ್ದು, ಉಭಯ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

2 / 7
ಪಾಯಿಂಟ್ ಟೇಬಲ್​ನಲ್ಲಿ ಆರ್​ಸಿಬಿ ಏಳನೇ ಸ್ಥಾನಕ್ಕೆ ಕುಸಿದಿದೆ. ಆಡಿದ ಹನ್ನೊಂದು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಆರರಲ್ಲಿ ಸೋಲು ಕಂಡು 10 ಅಂಕ ಸಂಪಾದಿಸಿ -0.345 ರನ್​ರೇಟ್ ಹೊಂದಿದೆ. ಇತ್ತ ರಾಜಸ್ಥಾನ್ ಐದನೇ ಸ್ಥಾನದಲ್ಲಿದೆ. ಆಡಿದ 12 ಪಂದ್ಯಗಳಲ್ಲಿ ಆರು ಗೆಲುವು, ಆರು ಸೋಲುಂಡು +0.633ರನ್​ರೇಟ್​ನೊಂದಿಗೆ 12 ಅಂಕ ಸಂಪಾದಿಸಿದೆ.

3 / 7
ಪ್ಲೇ ಆಫ್​ಗೇರುವ ದೃಷ್ಟಿಯಿಂದ ರಾಜಸ್ಥಾನ್-ಆರ್​ಸಿಬಿ ಉಭಯ ತಂಡಗಳಿಗೆ ಈ ಪಂದ್ಯ ಗೆಲ್ಲಲೇಬೇಕು. ಒಂದು ವೇಳೆ ಆರ್​ಸಿಬಿ ಸೋತರೆ ರಾಜಸ್ಥಾನ್ ರಾಯಲ್ಸ್​ಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಇರಲಿದೆ. ಆರ್​ಆರ್ ಸೋತರೆ ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ. ಇನ್ನು ಆರ್​ಸಿಬಿ ಸೋತರೂ ಟೂರ್ನಿಯಿಂದ ಹೊರಬಿದ್ದಂತೆ.

4 / 7
ಎಲ್ಲರ ಚಿತ್ತ ನೆಟ್ಟಿರುವ ಈ ಪಂದ್ಯ ಮಧ್ಯಾಹ್ನ 3.30ಕ್ಕೆ ಶುರುವಾಗಲಿದೆ. ಸವಾಯಿ ಮಾನ್​ಸಿಂಗ್ ಸ್ಟೇಡಿಯಂ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುತ್ತದೆ. ಪಂದ್ಯ ಆರಂಭವಾದ ಕೆಲವು ಓವರ್‌ಗಳಲ್ಲಿ ವೇಗದ ಬೌಲರ್‌ಗಳು ಪ್ರಾಬಲ್ಯ ಸಾಧಿಸಿದರೆ ನಂತರ ಸ್ಪಿನ್ನರ್​ಗಳ ಆಟ ನಡೆಯಲಿದೆ.

5 / 7
ಈ ಮೈದಾನದಲ್ಲಿ ಅತಿ ದೊಡ್ಡ ಬೌಂಡರಿ ಇರುವುದರಿಂದ ದೊಡ್ಡ ಮೊತ್ತ ಕಲೆಹಾಕುವುದು ಕಷ್ಟ. ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡುವುದು ಖಚತ. ಹೀಗಾಗಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಂಭವವಿದೆ.

6 / 7
ಸವಾಯಿ ಮಾನ್​ಸಿಂಗ್ ಮೈದಾನದಲ್ಲಿ ಇದುವರೆಗೂ 50 ಐಪಿಎಲ್ ಪಂದ್ಯಗಳು ನಡೆದಿದ್ದು 17 ಬಾರಿ ಮೊದಲು ಬ್ಯಾಟ್‌ ಮಾಡಿದ್ದ ತಂಡಗಳು ಜಯ ಗಳಿಸಿದ್ದರೆ, 33 ಬಾರಿ ಟಾರ್ಗೆಟ್ ಬೆನ್ನಟ್ಟಿದ ತಂಡಗಳು ಗೆಲುವು ಪಡೆದುಕೊಂಡಿದೆ.

7 / 7
ಉಭಯ ತಂಡಗಳ ಮುಖಾಮುಖಿ ನೋಡುವುದಾದರೆ ಒಟ್ಟು 29 ಪಂದ್ಯಗಳು ನಡೆದಿವೆ. ಇದರಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲುವು 12 ಪಂದ್ಯ ಗೆದ್ದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಮ್ಯಾಚ್​ನಲ್ಲಿ ಗೆಲುವು ಸಾಧಿಸಿ ಪಾರುಪತ್ಯ ಮೆರೆದಿದೆ.