- Kannada News Photo gallery Cricket photos Rajasthan Royals vs Royal Challengers Bangalore Virat Kohli Faf Duplessis and other RCB Players Practice
RR vs RCB: ರಾಜಸ್ಥಾನ್ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ಆಟಗಾರರ ಭರ್ಜರಿ ಅಭ್ಯಾಸ: ಫೋಟೋ ನೋಡಿ
Rajasthan vs Bangalore: ರಾಜಸ್ಥಾನ್-ಬೆಂಗಳೂರು ತಂಡಗಳಿಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಹೀಗಾಗಿ ಆರ್ಸಿಬಿ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಕೊಹ್ಲಿ, ಫಾಫ್, ಮ್ಯಾಕ್ಸ್ವೆಲ್ ಸೇರಿದಂತೆ ಆರ್ಸಿಬಿ ಪ್ಲೇಯರ್ಸ್ ಪ್ರ್ಯಾಕ್ಟೀಸ್ ನಡೆಸುತ್ತಿದ್ದಾರೆ. (ಫೋಟೋ ಕೃಪೆ; RCB Twitter)
Updated on: May 14, 2023 | 12:44 PM

ಐಪಿಎಲ್ 2023 ರಲ್ಲಿಂದು ಎರಡು ಮಹತ್ವದ ಪಂದ್ಯಗಳು ನಡೆಯಲಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ ಮೊದಲ ಮ್ಯಾಚ್ನಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮತ್ತು ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ಆಗಲಿದೆ.

ಉಭಯ ತಂಡಗಳಿಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಹೀಗಾಗಿ ಆರ್ಸಿಬಿ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಕೊಹ್ಲಿ, ಫಾಫ್, ಮ್ಯಾಕ್ಸ್ವೆಲ್ ಸೇರಿದಂತೆ ಆರ್ಸಿಬಿ ಪ್ಲೇಯರ್ಸ್ ಪ್ರ್ಯಾಕ್ಟೀಸ್ ನಡೆಸುತ್ತಿದ್ದಾರೆ.

ಪ್ಲೇ ಆಫ್ಗೇರುವ ದೃಷ್ಟಿಯಿಂದ ರಾಜಸ್ಥಾನ್-ಆರ್ಸಿಬಿ ಉಭಯ ತಂಡಗಳಿಗೆ ಈ ಪಂದ್ಯ ಗೆಲ್ಲಲೇಬೇಕು. ಒಂದು ವೇಳೆ ಆರ್ಸಿಬಿ ಸೋತರೆ ರಾಜಸ್ಥಾನ್ ಪ್ಲೇಆಫ್ ಪ್ರವೇಶಿಸುವ ಅವಕಾಶ ಇರಲಿದೆ. ಆರ್ಆರ್ ಸೋತರೆ ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ. ಎಲ್ಲಾದರು ಆರ್ಸಿಬಿ ಸೋತರೂ ಟೂರ್ನಿಯಿಂದ ಹೊರಬಿದ್ದಂತೆ.

ಎಲ್ಲರ ಚಿತ್ತ ನೆಟ್ಟಿರುವ ಈ ಪಂದ್ಯ ಮಧ್ಯಾಹ್ನ 3.30ಕ್ಕೆ ಶುರುವಾಗಲಿದೆ. ಜೈಪುರದ ಹವಾಮಾನದ ಬಗ್ಗೆ ನೋಡುವುದಾದರೆ ಪಂದ್ಯಕ್ಕೆ ಯಾವುದೇ ತೊಂದರೆ ಅಟ್ಟಿಪಡಿಸುವ ಸಾಧ್ಯತೆ ಇಲ್ಲ. ಇಂದು ತಾಪಮಾನವು ಸುಮಾರು 37 ಡಿಗ್ರಿ ಸೆಲ್ಸಿಯೆಷ್ಟ್ನಷ್ಟು ಇರಲಿದೆ. ಶೇ. 24 ರಷ್ಟು ಹ್ಯುಮಿಡಿಟಿ ಮತ್ತು 10 km/h ಗಾಳಿಯ ವೇಗವನ್ನು ನಿರೀಕ್ಷಿಸಲಾಗಿದೆ.

ಇನ್ನು ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುತ್ತದೆ. ಪಂದ್ಯ ಆರಂಭವಾದ ಕೆಲವು ಓವರ್‌ಗಳಲ್ಲಿ ವೇಗದ ಬೌಲರ್‌ಗಳು ಪ್ರಾಬಲ್ಯ ಸಾಧಿಸಿದರೆ ನಂತರ ಸ್ಪಿನ್ನರ್ಗಳ ಆಟ ನಡೆಯಲಿದೆ. ಈ ಮೈದಾನದಲ್ಲಿ ಅತಿ ದೊಡ್ಡ ಬೌಂಡರಿ ಇರುವುದರಿಂದ ದೊಡ್ಡ ಮೊತ್ತ ಕಲೆಹಾಕುವುದು ಕಷ್ಟ.

ಉಭಯ ತಂಡಗಳ ಮುಖಾಮುಖಿ ನೋಡುವುದಾದರೆ ಒಟ್ಟು 29 ಪಂದ್ಯಗಳು ನಡೆದಿವೆ. ಇದರಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲುವು 12 ಪಂದ್ಯ ಗೆದ್ದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಮ್ಯಾಚ್ನಲ್ಲಿ ಗೆಲುವು ಸಾಧಿಸಿ ಪಾರುಪತ್ಯ ಮೆರೆದಿದೆ.

ಆರ್ಸಿಬಿ ಪರ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ, ಮ್ಯಾಕ್ಸ್ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಕಡೆಯಿಂದ ಮಾತ್ರ ಕೊಡುಗೆ ಬರುತ್ತಿದೆ. ಮಹಿಪಾಲ್ ಲುಮ್ರೂರ್ ಮತ್ತೊಮ್ಮೆ ಅಬ್ಬರಿಸಬೇಕಿದೆ. ದಿನೇಶ್ ಕಾರ್ತಿಕ್, ಕೇದರ್ ಜಾಧವ್ ಕಡೆಯಿಂದ ಕೂಡ ರನ್ ಬರಬೇಕು.

ಮೊಹಮ್ಮದ್ ಸಿರಾಜ್ ಮತ್ತು ಜೋಶ್ ಹ್ಯಾಜ್ಲೆವುಡ್ ತಂತ್ರದೊಂದಿಗೆ ಬೌಲಿಂಗ್ ಮಾಡಬೇಕು. ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದ ಹರ್ಷಲ್ ಪಟೇಲ್ ನೀರಿನಂತೆ ರನ್ ಹರಿಯ ಬಿಡುತ್ತಿದ್ದಾರೆ. ಹನಿಂದು ಹಸರಂಗ ಮತ್ತು ಕರ್ಣ್ ಶರ್ಮಾ ಕೂಡ ಮಾರಕವಾಗಬೇಕಿದೆ.
























