SA vs PAK: ಪಾಕ್ ವಿರುದ್ಧ ಚೊಚ್ಚಲ ದ್ವಿಶತಕ ಸಿಡಿಸಿ 10 ವರ್ಷಗಳ ಬರ ನೀಗಿಸಿದ ರಿಕಲ್ಟನ್

|

Updated on: Jan 04, 2025 | 5:56 PM

Ryan Rickelton's Double Century: ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರಿಯಾನ್ ರಿಕಲ್ಟನ್ ಪಾಕಿಸ್ತಾನದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ದ್ವಿಶತಕ ಸಿಡಿಸಿದ್ದಾರೆ. ಇದು ಅವರ ವೃತ್ತಿಜೀವನದ ಮೊದಲ ದ್ವಿಶತಕ ಹಾಗೂ ಈ ವರ್ಷದ ಮೊದಲ ದ್ವಿಶತಕವಾಗಿದೆ. ಈ ಭರ್ಜರಿ ಇನ್ನಿಂಗ್ಸ್‌ನಿಂದಾಗಿ ದಕ್ಷಿಣ ಆಫ್ರಿಕಾ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಮೊತ್ತವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ನಾಯಕ ತೆಂಬ ಬವುಮಾ ಕೂಡ ಶತಕ ಸಿಡಿಸಿದ್ದಾರೆ.

1 / 5
ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡ ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಆಫ್ರಕಾ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 450 ಕ್ಕೂ ಹೆಚ್ಚು ರನ್ ಮಾಡಿ ಇನ್ನಿಂಗ್ಸ್ ಮುಂದುವರೆಸಿದೆ. ತಂಡ ಇಷ್ಟು ಬೃಹತ್ ಮೊತ್ತ ಕಲೆಹಾಕುವಲ್ಲಿ ಆರಂಭಿಕ ರಿಯಾನ್ ರಿಕಲ್ಟನ್ ಅವರ ಪಾತ್ರ ಅಪಾರವಾಗಿದೆ.

2 / 5
ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ರಿಯಾನ್ ರಿಕಲ್ಟನ್ ತಮ್ಮ ವೃತ್ತಿಜೀವನದ ಹಾಗೂ ಈ ವರ್ಷದ ಮೊದಲ ದ್ವಿಶತಕವನ್ನು ಸಿಡಿಸಿದ ದಾಖಲೆ ಬರೆದಿದ್ದಾರೆ. ಪಂದ್ಯದ ಎರಡನೇ ದಿನ ರಿಕಲ್ಟನ್ 266 ಎಸೆತಗಳಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ದ್ವಿಶತಕವನ್ನು ಪೂರೈಸಿದರು. ಇದರಲ್ಲಿ 24 ಬೌಂಡರಿ ಮತ್ತು 1 ಸಿಕ್ಸರ್ ಕೂಡ ಸೇರಿದೆ.

3 / 5
ಇದರೊಂದಿಗೆ 9 ವರ್ಷಗಳ ನಂತರ ದಕ್ಷಿಣ ಆಫ್ರಿಕಾದ ಆಟಗಾರನೊಬ್ಬ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ದಾಖಲೆಯನ್ನು ರಿಕಲ್ಟನ್ ಬರೆದಿದ್ದಾರೆ. ಇದಕ್ಕೂ ಮೊದಲು ಕೇಪ್ ಟೌನ್‌ನಲ್ಲಿ ನಡೆದ ಹೊಸ ವರ್ಷದ ಟೆಸ್ಟ್‌ನಲ್ಲಿ ಹಶೀಮ್ ಆಮ್ಲಾ ದ್ವಿಶತಕ ಸಿಡಿಸಿದ್ದರು. ಅಷ್ಟೇ ಅಲ್ಲ, ಪಾಕಿಸ್ತಾನದ ವಿರುದ್ಧ ದ್ವಿಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರಿಕಲ್ಟನ್ ಪಾತ್ರರಾಗಿದ್ದಾರೆ.

4 / 5
ಇದಲ್ಲದೆ ರಿಕಲ್ಟನ್ ಚೊಚ್ಚಲ ದ್ವಿಶತಕವನ್ನು ಪೂರ್ಣಗೊಳಿಸುವ ಮೂಲಕ, ಕಳೆದ ಹತ್ತು ವರ್ಷಗಳಲ್ಲಿ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ಪ್ರೋಟಿಯಸ್ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ ಗ್ರೇಮ್ ಸ್ಮಿತ್ ಕೊನೆಯ ಬಾರಿಗೆ 2013 ರಲ್ಲಿ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದು ಈ ಸಾಧನೆ ಮಾಡಿದ್ದರು. ಸ್ಮಿತ್ ಕೂಡ ಪಾಕಿಸ್ತಾನ ವಿರುದ್ಧವೇ 16 ಬೌಂಡರಿ ಸಹಿತ 234 ರನ್‌ ಕಲೆಹಾಕಿದ್ದರು.

5 / 5
ಪಂದ್ಯದ ವಿಚಾರಕ್ಕೆ ಬರುವುದಾದರೆ ಎರಡನೇ ದಿನದಾಟವನ್ನು ಮುಂದುವರೆಸಿರುವ ದಕ್ಷಿಣ ಆಫ್ರಿಕಾ ತಂಡ ಈ ಸುದ್ದಿ ಬರೆಯುವ ಹೊತ್ತಿಗೆ 6 ವಿಕೆಟ್ ಕಳೆದುಕೊಂಡು 477 ರನ್ ಕಲೆಹಾಕಿದೆ. ತಂಡದ ಪರ ರಿಕಲ್ಟನ್ ಅಜೇಯ 233 ರನ್ ಬಾರಿಸಿ ಕ್ರೀಸ್​ನಲ್ಲಿದ್ದಾರೆ. ಇವರಲ್ಲದೆ ನಾಯಕ ತೆಂಬ ಬವುಮಾ ಕೂಡ ಈ ಪಂದ್ಯದಲ್ಲಿ 106 ರನ್​ಗಳ ಶತಕದ ಇನ್ನಿಂಗ್ಸ್ ಆಡಿದ್ದಾರೆ.