ಸೆಂಚುರಿ ಸಿಡಿಸಿ ವಿಶ್ವ ದಾಖಲೆ ಬರೆದ ಸಂಜು ಸ್ಯಾಮ್ಸನ್

| Updated By: ಝಾಹಿರ್ ಯೂಸುಫ್

Updated on: Nov 09, 2024 | 7:30 AM

Sanju Samson Records: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ 111ಕ್ಕೂ ಅಧಿಕ ಶತಕಗಳು ಮೂಡಿ ಬಂದಿವೆ. ಆದರೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ಶತಕ ಬಾರಿಸಿದ್ದು ಕೇವಲ ನಾಲ್ವರು ಬ್ಯಾಟರ್​ಗಳು ಮಾತ್ರ. ಈ ವಿಶ್ವ ದಾಖಲೆ ಬರೆದ ಕೊನೆಯ ಬ್ಯಾಟ್ಸ್​​ಮನ್ ಸಂಜು ಸ್ಯಾಮ್ಸನ್.

1 / 6
ಡರ್ಬನ್​‌‌ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ಸಂಜು ಸ್ಯಾಮ್ಸನ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಇದುವರೆಗೆ ಯಾವುದೇ ಭಾರತೀಯ ಬ್ಯಾಟರ್ ನಿಂದ ಸಾಧ್ಯವಾಗದ ವಿಶ್ವ ದಾಖಲೆ ಎಂಬುದು ವಿಶೇಷ.

2 / 6
ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಕೇವಲ 47 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಸೆಂಚುರಿಯೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ ಮೊದಲ ಭಾರತೀಯ ಎನಿಸಿಕೊಂಡರು. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

3 / 6
ಇದಕ್ಕೂ ಮುನ್ನ ಫ್ರಾನ್ಸ್‌ನ ಗುಸ್ತಾವ್ ಮೆಕೊವ್ (2022), ಸೌತ್ ಆಫ್ರಿಕಾದ ರೈಲಿ ರೊಸ್ಸೊವ್ (2022), ಇಂಗ್ಲೆಂಡ್‌ನ ಫಿಲ್ ಸಾಲ್ಟ್ (2023) ಮಾತ್ರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ ಎರಡು ಶತಕ ಬಾರಿಸಿದ್ದರು.

4 / 6
ಇದೀಗ ಸತತ ಸೆಂಚುರಿ ಸರದಾರರ ಪಟ್ಟಿಗೆ ಸಂಜು ಸ್ಯಾಮ್ಸನ್ ಸೇರ್ಪಡೆಯಾಗಿದ್ದಾರೆ‌. ಇದಕ್ಕೂ ಮುನ್ನ ಸ್ಯಾಮ್ಸನ್ ಬಾಂಗ್ಲಾದೇಶ್ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ 111 ರನ್ ಗಳ ಶತಕ ಸಿಡಿಸಿದ್ದರು. ಶುಕ್ರವಾರ ಸೌತ್ ಆಫ್ರಿಕಾ ವಿರುದ್ಧ 107 ರನ್ ಬಾರಿಸಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ ಶತಕ ಸಿಡಿಸಿದ ಏಷ್ಯಾದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಈ ವಿಶ್ವ ದಾಖಲೆ ಬರೆದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

5 / 6
ಹಾಗೆಯೇ ಈ ಶತಕದೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ಶತಕ ಬಾರಿಸಿದ ವಿಶ್ವದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಸೌತ್ ಆಫ್ರಿಕಾ ವಿರುದ್ಧ ಅತೀ ವೇಗದ ಸೆಂಚುರಿ ಸಿಡಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಸಂಜು ಸ್ಯಾಮ್ಸನ್ ತಮ್ಮದಾಗಿಸಿಕೊಂಡಿದ್ದಾರೆ.

6 / 6
ಇನ್ನು ಈ ಪಂದ್ಯದಲ್ಲಿ ಸ್ಯಾಮ್ಸನ್​ ಅವರ ಶತಕದ ನೆರವಿನಿಂದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 202 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 17.5 ಓವರ್​ಗಳಲ್ಲಿ 141 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 61 ರನ್​ಗಳ ಭರ್ಜರಿ ಜಯ ಸಾಧಿಸಿದೆ.