Sanju Samson: ಐ ಡೋಂಟ್ ನೋ: ಪಂದ್ಯದ ಬಳಿಕ ಮಾತನಾಡಲೂ ಕಷ್ಟಪಟ್ಟ ಸಂಜು ಸ್ಯಾಮ್ಸನ್

Updated on: May 08, 2023 | 10:11 AM

RR vs SRH, IPL 2023: ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಆಡಿದ ಮಾತುಗಳೇನು ಕೇಳಿ.

1 / 8
ಐಪಿಎಲ್ 2023 ರಲ್ಲಿ ಭಾನುವಾರ ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯ ಕೊನೆಯ ಎಸೆತದ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. 20ನೇ ಓವರ್​ನ 6ನೇ ಎಸೆತದ ನೋ ಬಾಲ್ ಇಡೀ ಪಂದ್ಯದ ಚಿತ್ರಣವನ್ನು ಬದಲಾಯಿಸಿ ಎಸ್​ಆರ್​ಹೆಚ್ 4 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

ಐಪಿಎಲ್ 2023 ರಲ್ಲಿ ಭಾನುವಾರ ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯ ಕೊನೆಯ ಎಸೆತದ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. 20ನೇ ಓವರ್​ನ 6ನೇ ಎಸೆತದ ನೋ ಬಾಲ್ ಇಡೀ ಪಂದ್ಯದ ಚಿತ್ರಣವನ್ನು ಬದಲಾಯಿಸಿ ಎಸ್​ಆರ್​ಹೆಚ್ 4 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

2 / 8

ರಾಜಸ್ಥಾನ್ 20 ಓವರ್​ಗಳಲ್ಲಿ 214 ರನ್ ಕಲೆಹಾಕಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಪಂದ್ಯ ಮುಗಿದ ಬಳಿಕ ಮಾತನಾಡಿದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಕಾಮೆಂಟೇಟರ್ ಕೇಳಿದ ಪ್ರಶ್ನೆಗೆ ಉತ್ತರ ಕೊಡಲಾಗದೆ ಕಷ್ಟಪಟ್ಟರು.

3 / 8

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಕಾಮೆಂಟೇಟರ್ ಸ್ಯಾಮ್ಸನ್ ಅವರಿಗೆ 'ನೀವು ಇನ್ನೂ ಹೆಚ್ಚು ರನ್ ಕಲೆಹಾಕಬೇಕಿತ್ತಾ?', ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಲು ಸಾಧ್ಯವಾಗದೆ ಸ್ಯಾಮ್ಸನ್ ಅವರು, ಇದು ಅದ್ಭುತ ಪ್ರಶ್ನೆ, ಆದರೆ ಇದರ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

4 / 8

ಐಪಿಎಲ್ ನಮಗೆ ಈರೀತಿಯ ಪಂದ್ಯಗಳನ್ನು ಕೊಡುತ್ತದೆ. ಯಾವುದೇ ಕ್ಷಣದಲ್ಲಿ ಪಂದ್ಯವನ್ನು ಗೆದ್ದೆವು ಎಂದು ಅಂದುಕೊಳ್ಳಲು ಸಾಧ್ಯವಿಲ್ಲ. ಬ್ಯಾಟಿಂಗ್ ಬಲಿಷ್ಠವಾಗಿದ್ದರೆ ಯಾವುದೇ ತಂಡ ಗೆಲುವು ಸಾಧಿಸಬಹುದಿತ್ತು. ಆದರೆ, ನನಗೆ ಕೊನೆಯ ಓವರ್​ನಲ್ಲಿ ಸಂದೀಪ್ ಮೇಲೆ ನಂಬಿಕೆಯಿತ್ತು. ಹಿಂದಿನ ಪಂದ್ಯದಲ್ಲೂ ಸಿಎಸ್​ಕೆ ವಿರುದ್ಧ ಈರೀತಿಯ ಸಂದರ್ಭದಲ್ಲಿ ಅವರು ಗೆಲುವು ತಂದುಕೊಟ್ಟಿದ್ದರು. ಈ ಬಾರಿ ಕೂಡ ನಮಗೆ ಅವರು ಯಶಸ್ಸು ತಂದುಕೊಟ್ಟರು. ಆದರೆ, ಅದು ನೋ ಬಾಲ್ ಆಯಿತು - ಸಂಜು ಸ್ಯಾಮ್ಸನ್.

5 / 8

ಇಂತಹ ವಿಕೆಟ್​ನಲ್ಲಿ ನಾವು ಉತ್ತಮವಾಗಿ ಬ್ಯಾಟ್ ಮಾಡಿ ಕಠಿಣ ಟಾರ್ಗೆಟ್ ನೀಡಿದೆವು. ಆದರೆ, ಎಸ್​ಆರ್​ಹೆಚ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು. ಅವರಿಗೆ ಕ್ರೆಡಿಟ್ ಸಲ್ಲಬೇಕು. ಟಾರ್ಗೆಟ್ ಎಷ್ಟೇ ಇದ್ದರೂ ಗೆಲುವು ಸಾಧಿಸಿದಾಗ ಮಾತ್ರ ಖುಷಿ ಆಗುತ್ತದೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

6 / 8

ನಿಜ ಹೇಳಬೇಕೆಂದರೆ ಈ ಟೂರ್ನಮೆಂಟ್​ನಲ್ಲಿ ಆಡುವುದು ಸುಲಭವಲ್ಲ. ಪ್ರತಿಯೊಂದು ಪಂದ್ಯ ಕೂಡ ಮುಖ್ಯ, ಪ್ರತಿ ಪಂದ್ಯದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಬೇಕು. ನಾವು ಇದಕ್ಕಿಂತ ಉತ್ತಮವಾಗಿ ಕಮ್​ಬ್ಯಾಕ್ ಮಾಡಿ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸುತ್ತೇವೆ ಎಂಬುದು ಸ್ಯಾಮ್ಸನ್ ಮಾತು.

7 / 8

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ (35) ಮತ್ತು ಜೋಸ್ ಬಟ್ಲರ್ (95) ಬಿರುಸಿನ ಆರಂಭ ಒದಗಿಸಿದರು. ಬಳಿಕ ಸಂಜು ಸ್ಯಾಮ್ಸನ್ (ಅಜೇಯ 66) ಹಾಗೂ ಬಟ್ಲರ್ ಹೈದರಾಬಾದ್ ಬೌಲರ್​ಗಳ ಬೆಂಡೆತ್ತು ಅರ್ಧಶತಕ ಸಿಡಿಸಿದರು. ಆರ್​ಆರ್​ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು.

8 / 8

ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಪರ ಅನ್ಮೋಲ್​ಪ್ರೀತ್ ಸಿಂಗ್ (33), ಅಭಿಷೇಕ್ ಶರ್ಮಾ (55), ರಾಹುಲ್ ತ್ರಿಪಾಠಿ (47), ಹೆನ್ರಿಚ್ ಕ್ಲಾಸೆನ್ (26), ಗ್ಲೆನ್ ಪಿಲಿಪ್ಸ್ (25) ಹಾಗೂ ಅಬ್ದುಲ್ ಸಮದ್ (ಅಜೇಯ 17) ಅತ್ಯುತ್ತಮ ಬ್ಯಾಟಿಂಗ್ ನಡೆಸಿ ಗೆಲುವು ತಂದುಕೊಟ್ಟರು. ಎಸ್​ಆರ್​ಹೆಚ್ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿ ಜಯ ಸಾಧಿಸಿತು.

Loading...
Unable to load recommendations.
Follow Us