- Kannada News Photo gallery Cricket photos IPL 2023: Dinesh Karthik is not a Wicket Keeper he is a Goal keeper- Kris Srikkanth
IPL 2023: ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಅಲ್ಲ, ಗೋಲ್ ಕೀಪರ್- ಕ್ರಿಸ್ ಶ್ರೀಕಾಂತ್ ವ್ಯಂಗ್ಯ
IPL 2023 Kannada: ಸ್ಪೋಟಕ ಬ್ಯಾಟಿಂಗ್ ನಡೆಸಿದ ಸಾಲ್ಟ್ 45 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ನೊಂದಿಗೆ 87 ರನ್ ಬಾರಿಸಿದರು.
Updated on: May 07, 2023 | 9:22 PM

IPL 2023: ಐಪಿಎಲ್ನ 50ನೇ ಪಂದ್ಯದಲ್ಲಿ ಆರ್ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್ಗಳ ಹೀನಾಯ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಆರ್ಸಿಬಿ ಸೋಲಿಗೆ ವಿಕೆಟ್ ಕೀಪರ್ ಮಾಡಿದ ತಪ್ಪೊಂದು ಮುಖ್ಯ ಕಾರಣ ಎಂದರೆ ತಪ್ಪಾಗಲಾರದು.

ಏಕೆಂದರೆ ವನಿಂದು ಹಸರಂಗ ಎಸೆದ ಪಂದ್ಯದ 4ನೇ ಓವರ್ನ 4ನೇ ಎಸೆತವು ಫಿಲ್ ಸಾಲ್ಟ್ ಅವರ ಬ್ಯಾಟ್ ಅನ್ನು ಸವರಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಕೈ ಸೇರಿತ್ತು. ಆದರೆ ಆ ಕ್ಯಾಚ್ ಅನ್ನು ಕೈಚೆಲ್ಲುವ ಮೂಲಕ ಡಿಕೆ ಸಾಲ್ಟ್ಗೆ ಜೀವದಾನ ನೀಡಿದ್ದರು.

17 ರನ್ಗಳಿಸಿದ್ದಾಗ ಸಿಕ್ಕ ಜೀವದಾನವನ್ನು ಬಳಸಿಕೊಂಡ ಫಿಲ್ ಸಾಲ್ಟ್ ಆ ಬಳಿಕ ಭರ್ಜರಿ ಇನಿಂಗ್ಸ್ ಆಡಿದ್ದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಸಾಲ್ಟ್ 45 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ನೊಂದಿಗೆ 87 ರನ್ ಬಾರಿಸಿದರು. ಅಲ್ಲದೆ ತಂಡವನ್ನು ಗೆಲುವಿನತ್ತ ಕೊಂಡೊಯ್ದು ಸಾಲ್ಟ್ ಔಟಾಗಿದ್ದರು.

ಇದನ್ನೇ ಪ್ರಸ್ತಾಪಿಸಿ ಇದೀಗ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಚಾನೆಲ್ವೊಂದರಲ್ಲಿ ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್ ಅನ್ನು ಟೀಕಿಸಿದ್ದಾರೆ. ಕಾರ್ತಿಕ್ ಬರೀ ವಿಕೆಟ್ ಕೀಪರ್ ಅಲ್ಲ, ಆತ ಗೋಲ್ ಕೀಪರ್. ಏಕೆಂದರೆ ಆತನು ಪ್ರತಿಯೊಂದು ಚೆಂಡು ಕೈ ಬಿಡ್ತಾನೆ...ಹೀಗಾಗಿ ಅವರನ್ನು ವಿಕೆಟ್ ಕೀಪರ್ ಎನ್ನಲು ಸಾಧ್ಯವಿಲ್ಲ ಎಂದು ಶ್ರೀಕಾಂತ್ ವ್ಯಂಗ್ಯವಾಡಿದ್ದಾರೆ.

ಶ್ರೀಕಾಂತ್ ಹೀಗೆ ನೇರವಾಗಿ ಟೀಕೆ ಮಾಡಲು ಮುಖ್ಯ ಕಾರಣ, ಆರ್ಸಿಬಿ ತಂಡದ ಕೆಲ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಕಳಪೆ ವಿಕೆಟ್ ಕೀಪಿಂಗ್ ಪ್ರದರ್ಶಿಸಿದ್ದಾರೆ.

ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಣರೋಚಕ ಪಂದ್ಯದ ಅಂತಿಮ ಎಸೆತವನ್ನು ಎಡಿಯಲು ವಿಫಲರಾಗಿದ್ದರು. ಅತ್ತ ಆ ಪಂದ್ಯದಲ್ಲಿ ಒಂದು ರನ್ ಓಡುವ ಮೂಲಕ ಲಕ್ನೋ ರೋಚಕ ಜಯ ಸಾಧಿಸಿತು.

ಈ ಎಲ್ಲಾ ಕಾರಣಗಳಿಂದಾಗಿ ಇದೀಗ ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್ ಬಗ್ಗೆ ಕೃಷ್ಣಮಾಚಾರಿ ಶ್ರೀಕಾಂತ್ (ಕ್ರಿಸ್ ಶ್ರೀಕಾಂತ್) ಅಪಸ್ವರ ಎತ್ತಿದ್ದಾರೆ. ಅಲ್ಲದೆ ಆರ್ಸಿಬಿ ವಿಕೆಟ್ ಕೀಪರ್ ಅನ್ನು ಹೊಂದಿಲ್ಲ, ಗೋಲ್ ಕೀಪರ್ನ ನಿಲ್ಲಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
























