
ಹಲವು ವರ್ಷಗಳಿಂದ ಟೀಂ ಇಂಡಿಯಾದಲ್ಲಿ ಆಡುತ್ತಿದ್ದರೂ, ಇದುವರೆಗೂ ಖಾಯಂ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್, ಇದೀಗ ಸೂರ್ಯಕುಮಾರ್ ಯಾದವ್ ನಾಯಕತ್ವದ ಟಿ20 ತಂಡದಲ್ಲಿ ಖಾಯಂ ಆರಂಭಿಕನಾಗಿ ಸ್ಥಾನ ಪಡೆಯುವುತ್ತ ಹೆಜ್ಜೆ ಇಟ್ಟಿದ್ದಾರೆ. ಆಡಿರುವ ಐದು ಇನ್ನಿಂಗ್ಸ್‌ಗಳಲ್ಲಿ 3 ಶತಕ ಸಿಡಿಸಿರುವ ಸಂಜುಗೆ ಭಾರತ ತಂಡದಲ್ಲಿ ಸದ್ಯಕ್ಕೆ ಸ್ಥಾನ ಖಾಯಂ ಆಗಿದೆ.

ಕೆಲವು ದಿನಗಳ ಹಿಂದೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 3-1 ಅಂತರದಿಂದ ಗೆದ್ದುಕೊಂಡಿತ್ತು. ಭಾರತ ತಂಡದ ಈ ಗೆಲುವಿನಲ್ಲಿ ಸಂಜು ಅವರ ಪಾತ್ರ ಅಪಾರವಾಗಿತ್ತು. ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಸಂಜು ಆಡಿದ 4 ಪಂದ್ಯಗಳಲ್ಲಿ 2 ಭರ್ಜರಿ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದರು.

ಇದಲ್ಲದೆ ಸಂಜು ಆಡಿರುವ ಕಳೆದ 5 ಇನ್ನಿಂಗ್ಸ್‌ಗಳಲ್ಲಿ 3 ಶತಕಗಳನ್ನು ಬಾರಿಸಿದ್ದಾರೆ. ಹೀಗಾಗಿ ಸಂಜು ಅವರ ಈ ಅದ್ಭುತ ಫಾರ್ಮ್ ಅನ್ನು ಗಮನಿಸಿರುವ ಕೇರಳ ಕ್ರಿಕೆಟ್ ಸಂಸ್ಥೆ, ಈ ವಿಕೆಟ್‌ಕೀಪರ್ ಬ್ಯಾಟ್ಸ್ಮನ್ಗೆ ನಾಯಕತ್ವ ಪಟ್ಟ ನೀಡಿದೆ. ವಾಸ್ತವವಾಗಿ ಸಂಜು 23 ರಿಂದ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳ ತಂಡವನ್ನು ಮುನ್ನಡೆಸಲಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯು ಇದೇ ನವೆಂಬರ್ 23 ರಿಂದ ಆರಂಭವಾಗಲಿದ್ದು, ಡಿಸೆಂಬರ್ 15 ರವರೆಗೆ ನಡೆಯಲಿದೆ. ಈ ಸರಣಿಯಲ್ಲಿ ಸಂಜು ಕೇರಳ ತಂಡವನ್ನು ಮುನ್ನಡೆಸುವುದನ್ನು ಕಾಣಬಹುದಾಗಿದೆ. ಟೀಂ ಇಂಡಿಯಾ ಮುಂದಿನ ಜನವರಿಯವರೆಗೆ ಯಾವುದೇ ವೈಟ್ ಬಾಲ್ ಪಂದ್ಯವನ್ನು ಆಡುವುದಿಲ್ಲ. ಇದರಿಂದಾಗಿ ಇಡೀ ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಗೆ ಸ್ಯಾಮ್ಸನ್ ಲಭ್ಯರಿರಲಿದ್ದಾರೆ.

ಕೇರಳ ತಂಡ: ಸಂಜು ಸ್ಯಾಮ್ಸನ್ (ನಾಯಕ), ಸಚಿನ್ ಬೇಬಿ, ರೋಹನ್ ಕುನ್ನುಮಲ್, ಜಲಜ್ ಸಕ್ಸೇನಾ, ವಿಷ್ಣು ವಿನೋದ್, ಮೊಹಮ್ಮದ್ ಅಜರುದ್ದೀನ್, ಬಾಸಿಲ್ ಥಂಪಿ, ಎಸ್ ನಿಜಾರ್, ಅಬ್ದುಲ್ ಬಸಿತ್, ಎ ಸ್ಕಾರಿಯಾ, ಅಜ್ನಾಸ್ ಇಎಮ್, ಸಿಜೋಮನ್ ಜೋಸೆಫ್, ಮಿಧುನ್ ಎಸ್, ವೈಶಾಖ್ ಚಂದ್ರನ್, ವಿನೋದ್ ಕುಮಾರ್ ಸಿವಿ, ಬಾಸಿಲ್ ಎನ್‌ಪಿ, ಶರಫುದ್ದೀನ್ ಎನ್‌ಎಂ, ನಿಧೀಶ್ ಎಂಡಿ.