15 ಎಸೆತಗಳಲ್ಲಿ ಅರ್ಧಶತಕ..! ಅಭಿಷೇಕ್ ಓವರ್​ನಲ್ಲಿ ಸತತ 6 ಬೌಂಡರಿ ಬಾರಿಸಿದ ಸರ್ಫರಾಜ್

Updated on: Jan 08, 2026 | 6:51 PM

Sarfaraz Khan's Record-Breaking Fastest Fifty: ವಿಜಯ್ ಹಜಾರೆ ಟ್ರೋಫಿಯಲ್ಲಿ ಸರ್ಫರಾಜ್ ಖಾನ್ ಪಂಜಾಬ್ ವಿರುದ್ಧ ಕೇವಲ 15 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಹೊಸ ದಾಖಲೆ ಬರೆದರು. 20 ಎಸೆತಗಳಲ್ಲಿ 62 ರನ್ ಗಳಿಸಿದ ಅವರು, ಒಂದು ಓವರ್‌ನಲ್ಲಿ 30 ರನ್ ಚಚ್ಚಿದರು. ಈ ಟೂರ್ನಿಯಲ್ಲಿ ಅವರು ಇದುವರೆಗೆ 5 ಇನ್ನಿಂಗ್ಸ್‌ಗಳಲ್ಲಿ 303 ರನ್ ಗಳಿಸಿ, ಮುಂಬೈ ತಂಡಕ್ಕೆ ಭರವಸೆ ಮೂಡಿಸಿದ್ದಾರೆ. ಅವರ ಪ್ರದರ್ಶನ ಗಮನಾರ್ಹವಾಗಿದೆ.

1 / 6
ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸರ್ಫರಾಜ್ ಖಾನ್ ಪಂಜಾಬ್ ವಿರುದ್ಧದ ಪಂದ್ಯದಲ್ಲೂ ಸ್ಫೋಟಕ ಅರ್ಧಶತಕ ಸಿಡಿಸಿದ್ದಾರೆ. ಜೈಪುರದಲ್ಲಿ ನಡೆದ ಈ ಪಂದ್ಯದಲ್ಲಿ ಪಂಜಾಬ್ ನೀಡಿದ 216 ರನ್​ಗಳ ಗುರಿ ಬೆನ್ನಟ್ಟಿದ ಮುಂಬೈ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸರ್ಫರಾಜ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

2 / 6
ತಮ್ಮ ಈ ಇನ್ನಿಂಗ್ಸ್​ನಲ್ಲಿ ಕೇವಲ 20 ಎಸೆತಗಳನ್ನು ಎದುರಿಸಿದ ಸರ್ಫರಾಜ್ 7 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 62 ರನ್ ಬಾರಿಸಿ ಪೆವಿಲಿಯನ್‌ ಸೇರಿಕೊಂಡರು. ಸರ್ಫರಾಜ್ ಅವರ ಈ ಅರ್ಧಶತಕದ ಹೈಲೇಟ್ಸ್ ಏನೆಂದರೆ, ಪಂಜಾಬ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಬೌಲ್ ಮಾಡಿದ ಒಂದು ಓವರ್​ನ 6 ಎಸೆತಗಳನ್ನು ಬೌಂಡರಿಗಟ್ಟಿದರು. ಈ ಮೂಲಕ ಅಭಿಷೇಕ್ ಅವರ ಒಂದು ಓವರ್‌ನಲ್ಲಿ ಸರ್ಫರಾಜ್ 30 ರನ್ ಕಲೆಹಾಕಿದರು.

3 / 6
 ಕ್ರೀಸ್‌ಗೆ ಬಂದ ತಕ್ಷಣ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದ ಸರ್ಫರಾಜ್ ಖಾನ್, ಹರ್‌ಪ್ರೀತ್ ಬ್ರಾರ್ ಎಸೆದ ಐದು ಎಸೆತಗಳಲ್ಲಿ 19 ರನ್ ಕಲೆಹಾಕಿದರು. ನಂತರ ಅಭಿಷೇಕ್ ಶರ್ಮಾ ಎಸೆದ ಆರು ಎಸೆತಗಳಲ್ಲಿ ಆರು ಬೌಂಡರಿಗಳನ್ನು ಹೊಡೆದರು.

4 / 6
ಅಭಿಷೇಕ್ ಓವರ್‌ನಲ್ಲಿ ಅವರು ಮೂರು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳನ್ನು ಬಾರಿಸಿದರು, ಆ ಓವರ್‌ನಲ್ಲಿ ಮೂವತ್ತು ರನ್ ಬಂದವು. ಈ ಮೂಲಕ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸರ್ಫರಾಜ್, ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ನಿರ್ಮಿಸಿದರು.

5 / 6
ಪಂಜಾಬ್ ವಿರುದ್ಧ ಸರ್ಫರಾಜ್ ಖಾನ್ 20 ಎಸೆತಗಳಲ್ಲಿ 62 ರನ್ ಗಳಿಸಿದರು. ಅವರು 7 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದರು. ಈ ಟೂರ್ನಮೆಂಟ್‌ನಲ್ಲಿ ಸರ್ಫರಾಜ್ ಇಲ್ಲಿಯವರೆಗೆ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಆಡಿರುವ 5 ಇನ್ನಿಂಗ್ಸ್‌ಗಳಲ್ಲಿ 80 ಕ್ಕಿಂತ ಹೆಚ್ಚು ಸರಾಸರಿಯೊಂದಿಗೆ 303 ರನ್ ಗಳಿಸಿದ್ದಾರೆ.

6 / 6
ವಿಜಯ್ ಹಜಾರೆ ಟ್ರೋಫಿಯಲ್ಲಿ ಸರ್ಫರಾಜ್ ಖಾನ್ ರನ್ ಮೇಲೆ ರನ್ ಗಳಿಸುತ್ತಿದ್ದರೆ, ಅಭಿಷೇಕ್ ಶರ್ಮಾ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಈ ಪಂದ್ಯದಲ್ಲಿ ಅಭಿಷೇಕ್ 10 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ಔಟಾದರು. ಮುಂಬೈ ವಿರುದ್ಧ ಪ್ರಭ್ಸಿಮ್ರನ್ ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಅನ್ಮೋಲ್‌ಪ್ರೀತ್ 57 ರನ್ ಗಳಿಸಿದರೆ, ರಮಣದೀಪ್ ಸಿಂಗ್ 72 ರನ್ ಗಳಿಸಿ ಪಂಜಾಬ್ 200 ರನ್ ದಾಟಲು ಸಹಾಯ ಮಾಡಿದರು. ಅಂತಿಮವಾಗಿ ಈ ಪಂದ್ಯವನ್ನು ಪಂಜಾಬ್ ಒಂದು ರನ್‌ನಿಂದ ಗೆದ್ದುಕೊಂಡಿತು.