6,6,6,6,6,6: ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಶಾರುಖ್ ಖಾನ್

Updated on: Jul 28, 2024 | 11:34 AM

TNPL 2024: ಶಾರುಖ್ ಖಾನ್ ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ ಲೈಕಾ ಕೋವೈ ಕಿಂಗ್ಸ್ ತಂಡದ ನಾಯಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಇನ್ನು ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿರುವ ಶಾರುಖ್ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾದ್ಯತೆಯಿದೆ. ಹೀಗಾಗಿ ತಮಿಳುನಾಡು ಮೂಲದ ಸ್ಪೋಟಕ ದಾಂಡಿಗನ ಖರೀದಿಗೆ ಕೆಲ ಫ್ರಾಂಚೈಸಿಗಳು ಹೆಚ್ಚಿನ ಆಸಕ್ತಿವಹಿಸಬಹುದು.

1 / 6
ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ ಶಾರುಖ್ ಖಾನ್ ಸ್ಪೋಟಕ ಅರ್ಧಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ಟೂರ್ನಿಯ 25ನೇ ಪಂದ್ಯದಲ್ಲಿ ಸೇಲಂ ಸ್ಪಾರ್ಟನ್ಸ್ vs ಲೈಕಾ ಕೋವೈ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಲೈಕಾ ಕೋವೈ ಕಿಂಗ್ಸ್ ತಂಡದ ನಾಯಕ ಶಾರುಖ್ ಖಾನ್ ಬೌಲಿಂಗ್ ಆಯ್ದುಕೊಂಡರು.

2 / 6
ಅದರಂತೆ ಇನಿಂಗ್ಸ್ ಆರಂಭಿಸಿದ ಸೇಲಂ ಸ್ಪಾರ್ಟನ್ಸ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕರಾದ ವಿಶಾಲ್ ವೈದ್ಯ (36) ಹಾಗೂ ಅಭಿಷೇಕ್ (20) ಉತ್ತಮ ಅಡಿಪಾಯ ಹಾಕಿಕೊಟ್ಟರೆ, ಅಂತಿಮ ಹಂತದಲ್ಲಿ ಕಣಕ್ಕಿಳಿದ ಹರೀಶ್ ಕುಮಾರ್ 19 ಎಸೆತಗಳಲ್ಲಿ 5 ಸಿಕ್ಸ್​ನೊಂದಿಗೆ 42 ರನ್​ ಚಚ್ಚಿದರು. ಈ ಮೂಲಕ ಸೇಲಂ ಸ್ಪಾರ್ಟನ್ಸ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.

3 / 6
172 ರನ್​ಗಳ ಕಠಿಣ ಗುರಿ ಪಡೆದ ಲೈಕಾ ಕೋವೈ ಕಿಂಗ್ಸ್ ತಂಡಕ್ಕೆ ಸಂಜಯ್ (48) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ 22 ರನ್​ಗಳ ಕೊಡುಗೆ ನೀಡಿದರು. ಇದಾಗ್ಯೂ ಸೇಲಂ ಸ್ಪಾರ್ಟನ್ಸ್ ತಂಡವು ಪಂದ್ಯದ ಮೇಲೆ ಹಿಡಿತ ಹೊಂದಿತ್ತು. ಆದರೆ ಯಾವಾಗ ಶಾರುಖ್ ಖಾನ್ ಕಣಕ್ಕಿಳಿದರೋ ಇಡೀ ಪಂದ್ಯದ ಚಿತ್ರಣ ಬದಲಾಯಿತು.

4 / 6
6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾರುಖ್ ಖಾನ್ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದರು. ಸೇಲಂ ಸ್ಪಾರ್ಟನ್ಸ್ ಬೌಲರ್​ಗಳನ್ನು ಮನಸೊ ಇಚ್ಛೆ ದಂಡಿಸಿದ ಶಾರುಖ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್​ಗಳನ್ನು ಅಟ್ಟಿದರು. ಪರಿಣಾಮ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಇದು ಈ ಬಾರಿಯ ಟಿಎನ್​ಪಿಎಲ್​ನ ಅತ್ಯಂತ ವೇಗದ ಅರ್ಧಶತಕ ಎಂಬುದು ವಿಶೇಷ.

5 / 6
ಇನ್ನು 18 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 1 ಫೋರ್​ ಬಾರಿಸಿ ಶಾರುಖ್ ಖಾನ್ (50) ಔಟಾದರು. ಅಷ್ಟರಲ್ಲಾಗಲೇ ಗೆಲುವಿನತ್ತ ಮುಖ ಮಾಡಿದ್ದ ಲೈಕಾ ಕೋವೈ ಕಿಂಗ್ಸ್ ತಂಡವು ಅಂತಿಮ ಓವರ್​ನಲ್ಲಿ 6 ರನ್ ಕಲೆಹಾಕಿ 1 ವಿಕೆಟ್​ನ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ ಶಾರುಖ್ ಖಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

6 / 6
ಅಂದಹಾಗೆ ಶಾರುಖ್ ಖಾನ್ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾರೆ. ಸ್ಪೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾಗಿರುವ ಯುವ ದಾಂಡಿಗ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅದರಂತೆ ಮುಂದಿನ ಸೀಸನ್​ಗಾಗಿ ಶಾರುಖ್ ಖಾನ್ ಅವರನ್ನು ಯಾವ ತಂಡ ಖರೀದಿಸಲಿದೆ ಕಾದು ನೋಡಬೇಕಿದೆ.