KKR vs RCB: ಭರ್ಜರಿ ಗೆಲುವಿನ ಬಳಿಕ ಹೀನಾಯ ಸೋಲು: 123 ರನ್ಗೆ ಆಲೌಟ್ ಆದ ಆರ್ಸಿಬಿ
IPL 20203: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ - ಬೌಲಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಆರ್ಸಿಬಿ 200+ ರನ್ ಬಿಟ್ಟುಕೊಟ್ಟಿತು. ಅಲ್ಲದೆ 123 ರನ್ಗೆ ಆಲೌಟ್ ಆಯಿತು. ಕೆಕೆಆರ್ 81 ರನ್ಗಳ ಅಮೋಘ ಜಯ ಸಾಧಿಸಿತು.
1 / 7
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಮೆರೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇದೀಗ ತಾನಾಡಿದ ದ್ವಿತೀಯ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ.
2 / 7
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ - ಬೌಲಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಆರ್ಸಿಬಿ 200+ ರನ್ ಬಿಟ್ಟುಕೊಟ್ಟಿತು. ಅಲ್ಲದೆ 123 ರನ್ಗೆ ಆಲೌಟ್ ಆಯಿತು. ಕೆಕೆಆರ್ 81 ರನ್ಗಳ ಅಮೋಘ ಜಯ ಸಾಧಿಸಿತು.
3 / 7
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ನಿತೀಶ್ ರಾಣಾ ಪಡೆ ಆರಂಭಿಕ ಆಘಾತದ ಹೊರತಾಗಿಯೂ ಬೃಹತ್ ಮೊತ್ತ ಕಲೆ ಹಾಕಿತು. ರಹಮಾನುಲ್ಲಾ ಅವರು 3 ಸಿಕ್ಸರ್ ಮತ್ತು 4 ಬೌಂಡರಿಗಳ ಮೂಲಕ 57 ರನ್ ಗಳಿಸಿದರು. ವೆಂಕಟೇಶ್ ಅಯ್ಯರ್ (3), ಮಂದೀಪ್ ಸಿಂಗ್(0), ನಿತೀಶ್ ರಾಣಾ (1) ರನ್ ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು.
4 / 7
ರಿಂಕು ಸಿಂಗ್ 3 ಸಿಕ್ಸರ್ ಮತ್ತು 2 ಬೌಂಡರಿ ಸಹಾಯದಿಂದ 46 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ನಂತರ ಶುರುವಾಗಿದ್ದು ಶಾರ್ದೂಲ್ ಠಾಕೂರ್ ಅಬ್ಬರ. 234.48ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಇವರು ಕೇವಲ 29 ಎಸೆತಗಳಲ್ಲಿ 3 ಸಿಕ್ಸರ್, 9 ಬೌಂಡರಿ ಗಳಿಸುವ ಮೂಲಕ 68 ರನ್ ಗಳಿಸಿ ತಂಡ ಬೃಹತ್ ರನ್ ಗಳಿಸುವಲ್ಲಿ ಸಹಕರಿಸಿದರು.
5 / 7
ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ನಾಯಕ ಡು ಪ್ಲೆಸಿಸ್ ಉತ್ತಮ ಆರಂಭ ಒದಗಿಸಿ ಭದ್ರ ಅಡಿಪಾಯ ಹಾಕುವ ಮುನ್ಸೂಚನೆ ನೀಡಿದರು. ಆದರೆ, ಕೊಹ್ಲಿ (21), ಡುಪ್ಲೆಸಿಸ್ (23) ಔಟಾಗಿದ್ದೇ ತಡ ತಂಡದ ದಿಢೀರ್ ಕುಸಿತ ಕಂಡಿತು.
6 / 7
ವರುಣ್ ಚಕ್ರವರ್ತಿ ಅವರು ಒಂದೇ ಓವರ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ (5) ಮತ್ತು ಹರ್ಷಲ್ ಪಟೇಲ್ ಅವರನ್ನು ಶೂನ್ಯಕ್ಕೆ ಪೆವಿಲಿಯನ್ಗೆ ಕಳುಹಿಸಿದರು. ಮೈಕಲ್ ಬ್ರೇಸ್ವೆಲ್ (19) ಕ್ಯಾಚಿತ್ತು ನಿರ್ಗಮಿಸಿದರು. ಶಹಬಾಜ್ ಅಹ್ಮದ್ ಅವರನ್ನು 1 ರನ್ಗೆ ನರೈನ್ ಔಟ್ ಮಾಡಿದರು.
7 / 7
ದಿನೇಶ್ ಕಾರ್ತಿಕ್ (9), ಅನುಜ್ ರಾವತ್ (1) ಮತ್ತು ಕರ್ಣ್ ಶರ್ಮಾ (1), ಆಕಾಶ್ ದೀಪ್ 1, ಡೇವಿಡ್ ವಿಲ್ಲೆ 20 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಆರ್ಸಿಬಿ 17.4 ಓವರ್ಗಳಲ್ಲಿ 123 ರನ್ಗಳಿಗೆ ಸರ್ವಪತನ ಕಂಡಿತು. 81 ರನ್ಗಳ ಜಯದೊಂದಿಗೆ ಕೆಕೆಆರ್ ಟೂರ್ನಿಯಲ್ಲಿ ಚೊಚ್ಚಲ ಗೆಲುವು ಸಾಧಿಸಿದೆ.