Shardul Thakur Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಆಟಗಾರ: ಇಲ್ಲಿದೆ ಫೋಟೋಸ್
TV9 Web | Updated By: ಝಾಹಿರ್ ಯೂಸುಫ್
Updated on:
Feb 27, 2023 | 11:03 PM
Shardul Thakur Wedding Photos: ಟೀಮ್ ಇಂಡಿಯಾ ಟೆಸ್ಟ್ ತಂಡದಿಂದ ಹೊರಗುಳಿದಿರುವ ಶಾರ್ದೂಲ್ ಠಾಕೂರ್, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆಗೆ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.
1 / 8
ಟೀಮ್ ಇಂಡಿಯಾದ ಆಲ್ರೌಂಡರ್ ಶಾರ್ದೂಲ್ ಠಾಕೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಮವಾರ ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮರಾಠ ಸಂಪ್ರದಾಯದಂತೆ ತಮ್ಮ ಬಹುಕಾಲದ ಗೆಳತಿ ಮಿತಾಲಿ ಪಾರುಲ್ಕರ್ ಅವರೊಂದಿಗೆ ಸಪ್ತಪದಿ ತುಳಿದರು.
2 / 8
ಈ ವಿವಾಹ ಕಾರ್ಯಕ್ರಮದಲ್ಲಿ ಶಾರ್ದೂಲ್ ಠಾಕೂರ್ ಅವರ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು.
3 / 8
ಇನ್ನು ಭಾನುವಾರ ನಡೆದ ಸಂಗೀತ್ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಕಾಣಿಸಿಕೊಂಡಿದ್ದರು.
4 / 8
ಇವರಲ್ಲದೆ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಮತ್ತು ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಕೂಡ ಸಂಗೀತ್ ಸಮಾರಂಭದಲ್ಲಿ ಭಾಗವಹಿಸಿದ್ದರು.
5 / 8
ಹಾಗೆಯೇ ಮದುವೆ ಸಮಾರಂಭದಲ್ಲಿ ಟೀಮ್ ಇಂಡಿಯಾ ಆಟಗಾರ ದೀಪಕ್ ಚಹರ್ ಅವರ ಪತ್ನಿ ಮಾಲ್ತಿ ಚಹರ್ ಕೂಡ ಕಾಣಿಸಿಕೊಂಡಿದ್ದರು.
6 / 8
ಇನ್ನು ಕೆಕೆಆರ್ ತಂಡದ ಮ್ಯಾನೇಜ್‌ಮೆಂಟ್ ಸದಸ್ಯ ಅಭಿಷೇಕ್ ನಾಯರ್ ಮತ್ತು ಮುಂಬೈ ಆಟಗಾರ ಸಿದ್ಧೇಶ್ ಲಾಡ್ ಸೇರಿದಂತೆ ಇತರರು ಸಹ ಶಾರ್ದೂಲ್ ಠಾಕೂರ್ ವಿವಾಹಕ್ಕೆ ಸಾಕ್ಷಿಯಾದರು.
7 / 8
ಮಿತಾಲಿ ಪಾರುಲ್ಕರ್ ಉದ್ಯಮಿಯಾಗಿದ್ದು, ದಿ ಬೇಕ್ಸ್ ಎಂಬ ಸಂಸ್ಥೆಯ ಸ್ಥಾಪಕಿ. ಬೇಕರಿ ತಿನಿಸುಗಳ ಉದ್ಯಮವನ್ನು ಹೊಂದಿರುವ ಮಿತಾಲಿ ಆಲ್ ದಿ ಜಾಝ್ - ಐಷಾರಾಮಿ ಬೇಕರ್ಸ್ ಸಂಸ್ಥೆಯ ಮೂಲಕ ಮುಂಬೈನಾದ್ಯಂತ ವ್ಯವಹಾರಗಳನ್ನು ನಡೆಸುತ್ತಿದ್ದಾರೆ.
8 / 8
ಸದ್ಯ ಟೀಮ್ ಇಂಡಿಯಾ ಟೆಸ್ಟ್ ತಂಡದಿಂದ ಹೊರಗುಳಿದಿರುವ ಶಾರ್ದೂಲ್ ಠಾಕೂರ್, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆಗೆ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.