ಇಷ್ಟರಲ್ಲೇ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಶಿಖರ್ ಧವನ್- ಸೋಫಿ ಶೈನ್

Updated on: Jan 06, 2026 | 9:42 PM

Shikhar Dhawan and Sophie Shine Wedding: ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದು, ಫೆಬ್ರವರಿಯಲ್ಲಿ ಗೆಳತಿ ಸೋಫಿ ಶೈನ್ ಅವರನ್ನು ವರಿಸಲಿದ್ದಾರೆ. ದೆಹಲಿ-ಎನ್‌ಸಿಆರ್‌ನಲ್ಲಿ ಖಾಸಗಿ ಸಮಾರಂಭ ನಡೆಯಲಿದೆ. ಐರಿಶ್ ಪ್ರಜೆಯಾಗಿರುವ ಸೋಫಿ ಶೈನ್ ಧವನ್ ಫೌಂಡೇಶನ್ ಮುನ್ನಡೆಸುತ್ತಿದ್ದಾರೆ. ಈ ಹಿಂದೆ ಆಯೇಷಾ ಮುಖರ್ಜಿಯೊಂದಿಗೆ ವಿಚ್ಛೇದನ ಪಡೆದಿದ್ದ ಧವನ್, ಈಗ ಸೋಫಿಯೊಂದಿಗೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.

1 / 5
ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ತಮ್ಮ ವೈಯಕ್ತಿಕ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಶಿಖರ್ ಧವನ್ ಫೆಬ್ರವರಿಯಲ್ಲಿ ತಮ್ಮ ದೀರ್ಘಕಾಲದ ಗೆಳತಿ ಸೋಫಿ ಶೈನ್ ಅವರನ್ನು ವರಿಸಲಿದ್ದಾರೆ. ಫೆಬ್ರವರಿ ಮೂರನೇ ವಾರದಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ವಿವಾಹ ನಡೆಯಲಿದ್ದು, ಕ್ರಿಕೆಟ್ ಮತ್ತು ಬಾಲಿವುಡ್ ಜಗತ್ತಿನ ಅನೇಕ ಪ್ರಮುಖ ವ್ಯಕ್ತಿಗಳು ಭಾಗವಹಿಸುವ ನಿರೀಕ್ಷೆಯಿದೆ.

2 / 5
ವಿವಾಹದ ಸಿದ್ಧತೆಗಳು ಈಗಾಗಲೇ ಭರದಿಂದ ಸಾಗಿವೆ ವರದಿಯಾಗಿದೆ. ಆದಾಗ್ಯೂ ಈ ಸುದ್ದಿಯ ಬಗ್ಗೆ ಇದುವರೆಗೂ ಧವನ್ ಆಗಲಿ ಅವರ ಕುಟುಂಬವಾಗಲಿ ಅಥವಾ ಪ್ರೇಯಸಿಯಾಗಲಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಸಧ್ಯದ ಮಾಹಿತಿ ಪ್ರಕಾರ, ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸುವ ಖಾಸಗಿ ಸಮಾರಂಭವಾಗಿರಲಿದೆ ಎಂದು ವರದಿಯಾಗಿದೆ.

3 / 5
ಇನ್ನು ಧವನ್ ಅವರನ್ನು ವರಿಸುತ್ತಿರುವ ಸೋಫಿ ಶೈನ್ ಐರಿಶ್ ಪ್ರಜೆಯಾಗಿದ್ದು, ಲಿಮೆರಿಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಸೋಫಿ ಇನ್‌ಸ್ಟಾಗ್ರಾಮ್‌ನಲ್ಲಿ 343,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ, ಅವರು ಶಿಖರ್ ಅವರೊಂದಿಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿದ್ದಾರೆ.

4 / 5
ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ಪರಸ್ಪರ ಭೇಟಿಯಾದ ಇವರಿಬ್ಬರ ನಡುವೆ ಕಾಲ ಕ್ರಮೇಣ ಪ್ರೀತಿ ಶುರುವಾಗಿದೆ. ಇದೀಗ ಇಬ್ಬರೂ ಕಳೆದ ಒಂದು ವರ್ಷದಿಂದ ಒಟ್ಟಿಗೆ ವಾಸಿಸುತ್ತಿದ್ದು, ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ. ಪ್ರಸ್ತುತ ಸೋಫಿ ಶಿಖರ್ ಧವನ್ ಅವರ ಫೌಂಡೇಶನ್ ಅನ್ನು ಮುನ್ನಡೆಸುತ್ತಿದ್ದಾರೆ.

5 / 5
ಶಿಖರ್ ಧವನ್ ಈ ಹಿಂದೆ ಆಸ್ಟ್ರೇಲಿಯಾ ಮೂಲದ ಆಯೇಷಾ ಮುಖರ್ಜಿ ಅವರನ್ನು ವಿವಾಹವಾಗಿದ್ದರು. ಈ ದಂಪತಿಗಳಿಗೆ ಜೋರಾವರ್ ಧವನ್ ಹೆಸರಿನ 11 ವರ್ಷದ ಮಗನಿದ್ದಾನೆ. ಆದಾಗ್ಯೂ ದಂಪತಿಗಳಿಬ್ಬರ ನಡುವೆ ಹೊಂದಾಣಿಕೆಯ ಸಮಸ್ಯೆಯಿಂದಾಗಿ 2023 ರಲ್ಲಿ ಕಾನೂನು ಮುಖಾಂತರ ವಿಚ್ಛೇದನ ಪಡೆದು ಪರಸ್ಪರ ಬೇರೆ ಬೇರೆ ವಾಸಿಸುತ್ತಿದ್ದಾರೆ. ಆದಾಗ್ಯೂ ಧವನ್ ತಮ್ಮ ಮಗನನ್ನು ವರ್ಷಕೊಮ್ಮೆ ಭೇಟಿಯಾಗಿ ಅವನೊಂದಿಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.