Shikhar Dhawan’s Net Worth: ದುಬಾರಿ ಕಾರುಗಳು, ಐಷರಾಮಿ ಬಂಗಲೆ.. ಶಿಖರ್ ಧವನ್ ಎಷ್ಟು ಕೋಟಿಯ ಒಡೆಯ ಗೊತ್ತಾ?
Shikhar Dhawan's Net Worth: 2008 ರಿಂದಲೂ ಐಪಿಎಲ್ ಆಡುತ್ತಿರುವ ಧವನ್ಗೆ ಪ್ರತಿ ಆವೃತ್ತಿಯಲ್ಲೂ ಕೋಟಿ ಕೋಟಿ ಆದಾಯ ಹರಿದುಬಂದಿದೆ. ಪ್ರಸ್ತುತ ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಧವನ್ಗೆ ಈ ಫ್ರಾಂಚೈಸಿ 8.25 ಕೋಟಿ ರೂ. ಸಂಭಾವನೆ ನೀಡುತ್ತಿದೆ. ಒಟ್ಟಾರೆಯಾಗಿ ಧವನ್ ಅವರ ನಿವ್ವಳ ಮೌಲ್ಯ ಸುಮಾರು 125 ಕೋಟಿ ಎಂದು ಹೇಳಲಾಗುತ್ತದೆ.
1 / 8
ಟೀಂ ಇಂಡಿಯಾದ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. 2010 ರಲ್ಲಿ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಧವನ್, ಟೀಂ ಇಂಡಿಯಾ ಪರ ಒಟ್ಟು 34 ಟೆಸ್ಟ್ ಹಾಗೂ 68 ಅಂತಾರಾಷ್ಟ್ರೀಯ ಟಿ20 ಪಂದ್ಯ ಹಾಗೂ 167 ಏಕದಿನ ಪಂದ್ಯಗಳನ್ನು ಆಡಿದ್ದರು.
2 / 8
ಕೊನೆಯದಾಗಿ ಟೀಂ ಇಂಡಿಯಾ ಪರ 2022 ರ ಡಿಸೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧ ಏಕದಿನ ಪಂದ್ಯವನ್ನು ಆಡಿದ್ದ ಧವನ್ಗೆ ಆ ಬಳಿಕ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹಾಗೆಯೇ ಟಿ20 ಯಲ್ಲಿ ಕೊನೆಯ ಬಾರಿಗೆ 2018 ರಲ್ಲಿ ಟೀಂ ಇಂಡಿಯಾ ಪರ ಆಡುವ ಅವಕಾಶ ಧವನ್ಗೆ ಸಿಕ್ಕಿತ್ತು. ಟೆಸ್ಟ್ನಲ್ಲೂ ಧವನ್ ಪಯಣ 2021 ರಲ್ಲಿ ಅಂತ್ಯಗೊಂಡಿತ್ತು.
3 / 8
ಆ ನಂತರ ಕಳಪೆ ಪ್ರದರ್ಶನ ಹಾಗೂ ಇಂಜುರಿ ಸಮಸ್ಯೆಗೆ ತುತ್ತಾದ ಧವನ್ ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ತಂಡದಲ್ಲಿ ಅವಕಾಶ ಪಡೆಯುವ ಸಲುವಾಗಿ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಧವನ್ಗೆ ತಂಡದಲ್ಲಿ ಅವಕಾಶ ಸಿಗಲಿಲ್ಲ.
4 / 8
ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಧವನ್ ಬಳಿ ಎಷ್ಟು ಆಸ್ತಿ ಎಂಬುದನ್ನು ಗೂಗಲ್ನಲ್ಲಿ ಅತಿ ಹೆಚ್ಚು ಜನರು ಹುಡುಕುತ್ತಿದ್ದಾರೆ. ಅದಕ್ಕೆಲ್ಲ ಉತ್ತರ ಇಲ್ಲಿದೆ. ವರದಿಗಳ ಪ್ರಕಾರ, ಟೀಂ ಇಂಡಿಯಾದ ಶ್ರೀಮಂತ ಕ್ರಿಕೆಟಿಗರಲ್ಲಿ ಶಿಖರ್ ಧವನ್ ಅವರ ಹೆಸರು ಕೂಡ ಬರುತ್ತದೆ. ಕಳೆದ ಹಲವು ವರ್ಷಗಳಿಂದ ಧವನ್ಗೆ ಬಿಸಿಸಿಐ ಮತ್ತು ಐಪಿಎಲ್‌ನಿಂದ ಸಾಕಷ್ಟು ಹಣ ಹರಿದುಬಂದಿದೆ. ಅವರ ತಿಂಗಳ ಸಂಪಾದನೆಯೇ ಲಕ್ಷಗಟ್ಟಲೆ ಇದ್ದು, ಒಟ್ಟು ನಿವ್ವಳ ಮೌಲ್ಯದ ವಿವರ ಇಲ್ಲಿದೆ.
5 / 8
ಕಳೆದ ಹಲವಾರು ವರ್ಷಗಳಲ್ಲಿ, ಶಿಖರ್ ಧವನ್ ಅನೇಕ ದೊಡ್ಡ ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡಿದ್ದಾರೆ. ಇಲ್ಲಿಯವರೆಗೆ ಧವನ್ ರಿಲಯನ್ಸ್ ಜಿಯೋ, ಮ್ಯೂಚುವಲ್ ಫಂಡ್ಸ್ ಸಾಹಿ ಹೈ, ನೆರೋಲಾಕ್ ಪೇಂಟ್ಸ್ ಮತ್ತು ಏರಿಯಲ್ ಮುಂತಾದ ದೊಡ್ಡ ಬ್ರಾಂಡ್‌ಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಇದಲ್ಲದೆ, ಡ್ರೀಮ್ 11 ಮತ್ತು ಫೀವರ್ ಎಫ್‌ಎಂ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬ್ರಾಂಡ್‌ಗಳಿಂದ ಧವನ್ಗೆ ಪ್ರತಿ ತಿಂಗಳು ಸುಮಾರು 30 ಲಕ್ಷ ರೂ. ಆದಾಯ ಹರಿದುಬರಲಿದೆ.
6 / 8
ಶಿಖರ್ ಧವನ್ ದೆಹಲಿಯಲ್ಲಿ ಐಷಾರಾಮಿ ಬಂಗಲೆಯನ್ನೂ ಹೊಂದಿದ್ದು, ಇದರ ಬೆಲೆ ಸುಮಾರು 6 ಕೋಟಿ ಎಂದು ಹೇಳಲಾಗಿದೆ. ದೆಹಲಿ ಮಾತ್ರವಲ್ಲದೆ, ಗುರುಗ್ರಾಮ್ ಮತ್ತು ಮುಂಬೈನಲ್ಲಿ ಅವರ ಹೆಸರಿನಲ್ಲಿ ಅನೇಕ ಆಸ್ತಿಗಳಿವೆ. ಭಾರತದ ಹೊರಗೆ, ಅಂದರೆ ಆಸ್ಟ್ರೇಲಿಯಾದಲ್ಲೂ ಧವನ್ ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿದ್ದು, ಅದರ ಮೌಲ್ಯವು ಕೋಟಿಗಳಲ್ಲಿದೆ ಎಂದು ಹೇಳಲಾಗುತ್ತದೆ.
7 / 8
ಐಷಾರಾಮಿ ಬಂಗಲೆಯಲ್ಲದೆ, ಶಿಖರ್ ಧವನ್ ಅನೇಕ ಐಷಾರಾಮಿ ಕಾರುಗಳ ಸಂಗ್ರಹವನ್ನು ಸಹ ಹೊಂದಿದ್ದಾರೆ. ಅವರು Audi A6 ನಿಂದ BMW 6 GT ಮತ್ತು ರೇಂಜ್ ರೋವರ್ ವರೆಗಿನ ಸ್ಪೋರ್ಟ್ಸ್ ಕಾರುಗಳನ್ನು ಹೊಂದಿದ್ದಾರೆ.
8 / 8
ಇದಲ್ಲದೆ 2008 ರಿಂದಲೂ ಐಪಿಎಲ್ ಆಡುತ್ತಿರುವ ಧವನ್ಗೆ ಪ್ರತಿ ಆವೃತ್ತಿಯಲ್ಲೂ ಕೋಟಿ ಕೋಟಿ ಆದಾಯ ಹರಿದುಬಂದಿದೆ. ಪ್ರಸ್ತುತ ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಧವನ್ಗೆ ಈ ಫ್ರಾಂಚೈಸಿ 8.25 ಕೋಟಿ ರೂ. ಸಂಭಾವನೆ ನೀಡುತ್ತಿದೆ. ಒಟ್ಟಾರೆಯಾಗಿ ಧವನ್ ಅವರ ನಿವ್ವಳ ಮೌಲ್ಯ ಸುಮಾರು 125 ಕೋಟಿ ಎಂದು ಹೇಳಲಾಗುತ್ತದೆ.