
ಇದೇ ಮೊದಲ ಬಾರಿಗೆ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವಹಿಸಿಕೊಂಡು ತಂಡವನ್ನು ಪೈನಲ್ವರೆಗೂ ಕೊಂಡೊಯ್ದಿದ್ದ ಶ್ರೇಯಸ್ ಅಯ್ಯರ್ ಅವರ ಆಟಕ್ಕೆ ಹಾಗೂ ಅವರ ನಾಯಕತ್ವಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಐಪಿಎಲ್ ಬಳಿಕ ಶ್ರೇಯಸ್ ಅಯ್ಯರ್ಗೆ ಟೀಂ ಇಂಡಿಯಾದ ಕದ ಕೂಡ ತೆರೆಯಲಿದೆ ಎನ್ನಲಾಗುತ್ತಿತ್ತು. ಆದರೆ ಇಂಗ್ಲೆಂಡ್ ಪ್ರವಾಸಕ್ಕೆ ಅಯ್ಯರ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.

ಹೀಗಾಗಿ ಐಪಿಎಲ್ ನಂತರ ಶ್ರೇಯಸ್ ಅಯ್ಯರ್ ಕ್ರಿಕೆಟ್ ಮೈದಾನದಲ್ಲಿ ಬಹಳ ಕಡಿಮೆ ಕಾಣಿಸಿಕೊಂಡಿದ್ದಾರೆ. ಆದರೆ ಇದೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಶ್ರೇಯಸ್ ಅಯ್ಯರ್ ಏಷ್ಯಾಕಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳಿವೆ. ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆದಾರರು ಶ್ರೇಯಸ್ ಅಯ್ಯರ್ ಅವರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಬಹುದು ಎಂಬ ವರದಿಗಳಿವೆ.

Shreyas (2)

ತಂಡಕ್ಕೆ ಅನುಭವದ ಅಗತ್ಯವಿರುವುದರಿಂದ ಶ್ರೇಯಸ್ ಅಯ್ಯರ್ ಏಷ್ಯಾಕಪ್ ಮತ್ತು ಟೆಸ್ಟ್ ಸ್ವರೂಪದಲ್ಲಿ ಪುನರಾಗಮನದ ಮುಂಚೂಣಿಯಲ್ಲಿದ್ದಾರೆ. ಅಯ್ಯರ್ ಅವರಿಗೆ 30 ವರ್ಷ ವಯಸ್ಸಾಗಿದ್ದು ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನ ಒತ್ತಡದ ಅನುಭವವೂ ಇದೆ. ಹೀಗಾಗಿ ಅಯ್ಯರ್ಗೆ ಮಣೆ ಹಾಕಲು ಆಯ್ಕೆದಾರರು ಮುಂದಾಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅಯ್ಯರ್ ಏಷ್ಯಾಕಪ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡುವುದನ್ನು ಕಾಣಬಹುದು. ಸ್ಪಿನ್ ಬೌಲಿಂಗ್ ವಿರುದ್ಧ ಉತ್ತಮವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಅಯ್ಯರ್ಗಿದೆ. ಹೀಗಾಗಿ ಭಾರತದಲ್ಲಿ ನಡೆಯಲ್ಲಿರುವ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಅವರ ಆಯ್ಕೆ ಖಚಿತವೆಂದು ಪರಿಗಣಿಸಲು ಇದೇ ಕಾರಣ. ಪ್ರಸ್ತುತ, ಶ್ರೇಯಸ್ ಅಯ್ಯರ್ ದುಲೀಪ್ ಟ್ರೋಫಿಯಲ್ಲಿ ಪಶ್ಚಿಮ ವಲಯ ತಂಡದ ಪರ ಆಡಲಿದ್ದಾರೆ.

ಶ್ರೇಯಸ್ ಅಯ್ಯರ್ ಐಪಿಎಲ್ 2025 ರಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಪಂದ್ಯಾವಳಿಯಲ್ಲಿ ಅವರು 175 ರ ಸ್ಟ್ರೈಕ್ ರೇಟ್‌ನಲ್ಲಿ 604 ರನ್ ಗಳಿಸಿದರು. ಅಯ್ಯರ್ ಅವರ ಬ್ಯಾಟಿಂಗ್ ಸರಾಸರಿಯೂ 50 ಕ್ಕಿಂತ ಹೆಚ್ಚಿತ್ತು. ಅವರ ನಾಯಕತ್ವದಲ್ಲಿ, ಪಂಜಾಬ್ ಕಿಂಗ್ಸ್ ಐಪಿಎಲ್ ಫೈನಲ್ ತಲುಪಿತ್ತಾದರೂ ಪ್ರಶಸ್ತಿ ಹೋರಾಟದಲ್ಲಿ ಆರ್‌ಸಿಬಿ ವಿರುದ್ಧ ಸೋತಿತು.