ಕೊನೆಯ ಓವರ್​ನಲ್ಲಿ ಕೇವಲ 8 ರನ್​ಗಳ ಅವಶ್ಯಕತೆ: ಪಂದ್ಯದ ಚಿತ್ರಣ ಬದಲಿಸಿದ ಗ್ಲೆನ್ ಫಿಲಿಪ್ಸ್

|

Updated on: Nov 11, 2024 | 10:32 AM

Sri Lanka vs New Zealand: ಶ್ರೀಲಂಕಾ ಮತ್ತು ನ್ಯೂಝಿಲೆಂಡ್ ನಡುವಣ 2 ಪಂದ್ಯಗಳ ಟಿ20 ಸರಣಿಯು ಸಮಬಲದಲ್ಲಿ ಕೊನೆಯಗೊಂಡಿದೆ. ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಆತಿಥೇಯ ಶ್ರೀಲಂಕಾ ತಂಡ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ನ್ಯೂಝಿಲೆಂಡ್ ಗೆಲುವು ದಾಖಲಿಸಿದೆ.

1 / 5
ಶ್ರೀಲಂಕಾ ಮತ್ತು ನ್ಯೂಝಿಲೆಂಡ್ ನಡುವಣ 2ನೇ ಟಿ20 ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ಹೋರಾಟದಲ್ಲಿ ಕಿವೀಸ್ ಪಡೆ ರೋಚಕ ಜಯ ಸಾಧಿಸುವಲ್ಲಿ ಸಫಲವಾಗಿದೆ. ದಂಬುಲ್ಲಾದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ನ್ಯೂಝಿಲೆಂಡ್ ಅನ್ನು ಬ್ಯಾಟಿಂಗ್​​ಗೆ ಆಹ್ವಾನಿಸಿದ್ದರು.

2 / 5
ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ಪರ ಆರಂಭಿಕ ಆಟಗಾರ ವಿಲ್ ಯಂಗ್ 30 ರನ್ ಬಾರಿಸಿದರೆ, ಮಿಚೆಲ್ ಸ್ಯಾಂಟ್ನರ್ 19 ರನ್ ಕಲೆಹಾಕಿದರು. ಇನ್ನು ಕೊನೆಯ ಹಂತದಲ್ಲಿ ಜೋಶ್ ಕಾರ್ಲ್ಸನ್ 24 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ನ್ಯೂಝಿಲೆಂಡ್ ತಂಡವು 19.3 ಓವರ್​ಗಳಲ್ಲಿ 108 ರನ್​ಗಳಿಸಿ ಆಲೌಟ್ ಆಯಿತು.

3 / 5
109 ರನ್​ಗಳ ಸುಲಭ ಗುರಿ ಪಡೆದ ಶ್ರೀಲಂಕಾ ತಂಡಕ್ಕೆ ಪಾತುಮ್ ನಿಸ್ಸಂಕಾ (52) ಉತ್ತಮ ಆರಂಭ ಒದಗಿಸಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ವೈಫಲ್ಯದಿಂದಾಗಿ ಶ್ರೀಲಂಕಾ ತಂಡವು ಸಂಕಷ್ಟಕ್ಕೆ ಸಿಲುಕಿತು. ಇದಾಗ್ಯೂ ಕೊನೆಯ ಓವರ್​ನಲ್ಲಿ ಕೇವಲ 8 ರನ್​ಗಳ ಗುರಿ ಪಡೆದಿದ್ದರು.

4 / 5
ಅತ್ತ ನ್ಯೂಝಿಲೆಂಡ್ ತಂಡದ ಹಂಗಾಮಿ ನಾಯಕ ಮಿಚೆಲ್ ಸ್ಯಾಂಟ್ನರ್ ಚೆಂಡನ್ನು ಸ್ಪಿನ್ನರ್ ಗ್ಲೆನ್ ಫಿಲಿಪ್ಸ್ ಕೈಗಿತ್ತರು. ಅದರಂತೆ 20ನೇ ಓವರ್​ನ ಎಸೆದ ಫಿಲಿಪ್ಸ್ ಮೊದಲ ಎಸೆತದಲ್ಲಿ ಒಂದು ರನ್ ನೀಡಿದರು. 2ನೇ ಎಸೆತದಲ್ಲಿ ನಿಸ್ಸಂಕಾ ಅವರ ವಿಕೆಟ್ ಕಬಳಿಸಿದರು. ಇನ್ನು 3ನೇ ಎಸೆತದಲ್ಲಿ ಮಥೀಶ ಪತಿರಾಣರನ್ನು ಔಟ್ ಮಾಡಿದರು. 4ನೇ ಎಸೆತದಲ್ಲಿ ಒಂದು ರನ್ ನೀಡಿದರು. 5ನೇ ಎಸೆತದಲ್ಲಿ ಮಹೀಶ್ ತೀಕ್ಷಣ ಅವರ ವಿಕೆಟ್ ಕಬಳಿಸಿದರು.

5 / 5
ಈ ಮೂಲಕ ಕೊನೆಯ ಓವರ್​ನಲ್ಲಿ ಕೇವಲ 2 ರನ್ ನೀಡಿ ಗ್ಲೆನ್ ಫಿಲಿಪ್ಸ್ ನ್ಯೂಝಿಲೆಂಡ್ ತಂಡಕ್ಕೆ 5 ರನ್​ಗಳ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಎರಡು ಪಂದ್ಯಗಳ ಟಿ20 ಸರಣಿಯು 1-1 ಅಂತರದಿಂದ ಸಮಬಲದಲ್ಲಿ ಕೊನೆಗೊಂಡಿದೆ. ಇದಕ್ಕೂ ಮುನ್ನ ನಡೆದ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡ 4 ವಿಕೆಟ್​ಗಳ ಜಯ ಸಾಧಿಸಿತ್ತು. ಇದೀಗ 2ನೇ ಪಂದ್ಯದಲ್ಲಿ ಕಿವೀಸ್ ಪಡೆ 5 ರನ್​ಗಳ ರೋಚಕ ಜಯ ಸಾಧಿಸಿ ಸರಣಿ ಸೋಲನ್ನು ತಪ್ಪಿಸಿಕೊಂಡಿದೆ.