Smriti Mandhana: ಏಕದಿನ ಕ್ರಿಕೆಟ್​ನಲ್ಲಿ ಮಿಥಾಲಿ ದಾಖಲೆ ಮುರಿದ ಸ್ಮೃತಿ ಮಂಧಾನ! ವಿಶ್ವ ಕ್ರಿಕೆಟ್​ನಲ್ಲಿ 3ನೇ ಸ್ಥಾನ

Updated By: ಪೃಥ್ವಿಶಂಕರ

Updated on: Sep 21, 2022 | 8:16 PM

Smriti Mandhana: ಮಹಿಳಾ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಭಾರತದ ಪುರುಷ ಕ್ರಿಕೆಟಿಗರಲ್ಲಿಯೂ ಮಂಧಾನ ಅನೇಕ ಬ್ಯಾಟ್ಸ್‌ಮನ್‌ಗಳಿಗಿಂತ ಮುಂದಿದ್ದಾರೆ.

1 / 5
ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಮಂಧಾನ ಅವರ ಬ್ಯಾಟ್​ನಿಂದ ನಿರಂತರವಾಗಿ ರನ್ ಗಳಿಸುತ್ತಿದ್ದಾರೆ. ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲೂ ತಮ್ಮ ಅಬ್ಬರ ಮುಂದುವರೆಸಿರುವ ಮಂಧಾನ ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಸಹ ಮಾಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಇನ್ನಿಂಗ್ಸ್ ಆಡಿದ ಸ್ಮೃತಿ ಎರಡನೇ ಏಕದಿನ ಪಂದ್ಯದಲ್ಲೂ ತಂಡಕ್ಕೆ ಉತ್ತಮ ಆರಂಭ ನೀಡಿ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯನ್ನೂ ಬರೆದುಕೊಂಡಿದ್ದಾರೆ.

2 / 5
ಕ್ಯಾಂಟರ್ಬರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಮಂಧಾನ 40 ರನ್ ಗಳಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ 3000 ರನ್ಗಳನ್ನು ಪೂರೈಸಿದರು. ಮಂಧಾನ 3000 ರನ್ ಪೂರೈಸಿದ ಭಾರತದ ಮೂರನೇ ಮಹಿಳಾ ಕ್ರಿಕೆಟಿಗರಾದರು.

3 / 5
ಮಂಧಾನ ಅವರಿಗೂ ಮೊದಲು, ಮಿಥಾಲಿ ರಾಜ್ ಮತ್ತು ಹರ್ಮನ್‌ಪ್ರೀತ್ ಕೌರ್ ಭಾರತದ ಪರ 3000 ರನ್ ಗಳಿಸಿದ್ದರು. ಆದರೆ ಮಂಧಾನ ಈ ಇಬ್ಬರಿಗಿಂತ ಅತ್ಯಂತ ಕಡಿಮೆ ಇನ್ನಿಂಗ್ಸ್​ಗಳಲ್ಲಿ ಈ ದಾಖಲೆ ಮಾಡಿದ ಬ್ಯಾಟರ್ ಎನಿಸಿಕೊಂಡರು. ಮಂಧಾನ ಕೇವಲ 76 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು.

4 / 5
ಅಷ್ಟೇ ಅಲ್ಲ, ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ನಲ್ಲಿ 3000 ರನ್ ಗಳಿಸಿದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ದಾಖಲೆ ಕೇವಲ 62 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟರ್ ಬೆಲಿಂಡಾ ಕ್ಲಾರ್ಕ್ ಹೆಸರಿನಲ್ಲಿದೆ.

5 / 5
ಮಹಿಳಾ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಭಾರತದ ಪುರುಷ ಕ್ರಿಕೆಟಿಗರಲ್ಲಿಯೂ ಮಂಧಾನ ಅನೇಕ ಬ್ಯಾಟ್ಸ್‌ಮನ್‌ಗಳಿಗಿಂತ ಮುಂದಿದ್ದಾರೆ. ಭಾರತದಲ್ಲಿ ಶಿಖರ್ ಧವನ್ (72 ಇನ್ನಿಂಗ್ಸ್) ಮತ್ತು ವಿರಾಟ್ ಕೊಹ್ಲಿ (75 ಇನ್ನಿಂಗ್ಸ್) ಮಾತ್ರ ಅವರಿಗಿಂತ ಮುಂದಿದ್ದಾರೆ.

Published On - 8:16 pm, Wed, 21 September 22