Smriti Mandhana: ದೇಶಕ್ಕಾಗಿ ಲಕ್ಷ ಲಕ್ಷ ಆಫರ್ ತಿರಸ್ಕರಿಸಿದ ಸ್ಮೃತಿ ಮಂಧನಾ..!
TV9 Web | Updated By: ಝಾಹಿರ್ ಯೂಸುಫ್
Updated on:
Sep 13, 2022 | 2:12 PM
Smriti Mandhana: ಸ್ಮೃತಿ ಮಂಧನಾ ಫೆಬ್ರವರಿಯಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಕಳೆದ ತಿಂಗಳ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಿಂಚಿದ್ದ ಮಂಧನಾ ಆ ಬಳಿಕ ದಿ ಹಂಡ್ರೆಡ್ ಲೀಗ್ನಲ್ಲಿ ಕಾಣಿಸಕೊಂಡಿದ್ದರು.
1 / 5
ಭಾರತದ ಸ್ಟಾರ್ ಮಹಿಳಾ ಆಟಗಾರ್ತಿ ಸ್ಮೃತಿ ಮಂಧನಾ ಲಕ್ಷ ಮೊತ್ತದ ಆಫರ್ ತಿರಸ್ಕರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದು ಕೂಡ ಬಿಗ್ ಬ್ಯಾಷ್ ಲೀಗ್ನ ಲಕ್ಷಗಳ ಆಫರ್ ಎಂಬುದು ವಿಶೇಷ.
2 / 5
ಸ್ಮೃತಿ ಮಂಧನಾ ಫೆಬ್ರವರಿಯಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಕಳೆದ ತಿಂಗಳ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಿಂಚಿದ್ದ ಮಂಧನಾ ಆ ಬಳಿಕ ದಿ ಹಂಡ್ರೆಡ್ ಲೀಗ್ನಲ್ಲಿ ಕಾಣಿಸಕೊಂಡಿದ್ದರು. ಇದೀಗ ಆತಿಥೇಯ ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಯ ಭಾಗವಾಗಿದ್ದಾರೆ.
3 / 5
ಆದರೆ ಇದರ ನಡುವೆ ಬಿಗ್ ಬ್ಯಾಷ್ ಲೀಗ್‌ನಿಂದ ಮಂಧನಾಗೆ ಬಿಗ್ ಆಫರ್ ಬಂದಿದೆ. ಆದರೆ ಮುಂಬರುವ ಸರಣಿಗಳಿಗಾಗಿ ಭಾರತದ ಪರ ಸ್ಮೃತಿ ಮಂಧನಾ ಈ ಆಫರ್ಗಳನ್ನು ತಿರಸ್ಕರಿಸಿದ್ದಾರೆ. ಇಂಗ್ಲೆಂಡ್ ಸರಣಿ ಬಳಿಕ ಫಿಟ್ನೆಸ್ನತ್ತ ಗಮನಹರಿಸಿ ಟೀಮ್ ಇಂಡಿಯಾ ಪರ ಭರ್ಜರಿ ಪ್ರದರ್ಶನ ಮಂಧನಾ ಬಿಗ್ ಬ್ಯಾಷ್ ಲೀಗ್‌ನಿಂದ ಹಿಂದೆ ಸರಿದಿದ್ದಾರೆ.
4 / 5
ಭಾರತಕ್ಕಾಗಿ ಆಡುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಲು ನಾನು ಬಯಸುವುದಿಲ್ಲ. ಹೀಗಾಗಿ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಿಂದ ಹೊರಬರಲು ನಿರ್ಧರಿಸಿದ್ದೇನೆ ಎಂದು ಸ್ಮೃತಿ ಮಂಧನಾ ಹೇಳಿದ್ದಾರೆ.
5 / 5
ನಾನು ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ದೇಶಕ್ಕಾಗಿ ಆಡಲು ಬಯಸುತ್ತೇನೆ. ದೇಶಕ್ಕಾಗಿ 100 ಪ್ರತಿಶತವನ್ನು ನೀಡಲು ಇಚ್ಛಿಸುತ್ತೇನೆ. ಹಾಗಾಗಿ ಬಿಗ್ ಬ್ಯಾಷ್ ಲೀಗ್ನಲ್ಲಿ ಕಾಣಿಸಿಕೊಳ್ಳದೇ, ಅವಧಿಯಲ್ಲಿ ಫಿಟ್ನೆಸ್ನತ್ತ ಗಮನಹರಿಸುತ್ತೇನೆ. ಈ ಮೂಲಕ ದೇಶದ ಗೆಲುವಿಗಾಗಿ 100 ಪ್ರತಿಶತವನ್ನು ನೀಡಲು ಬಯಸುತ್ತೇನೆ ಎಂದು ಸ್ಮೃತಿ ಮಂಧಾನ ತಿಳಿಸಿದ್ದಾರೆ.
Published On - 2:10 pm, Tue, 13 September 22