SRH vs LSG: W,W,W,W.. ಸನ್‌ರೈಸರ್ಸ್​ಗೆ ಆರಂಭದಲ್ಲೇ ಮರ್ಮಾಘಾತ

Updated on: Apr 05, 2026 | 4:21 PM

SRH Crumbles to 4/26 Against LSG : ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್‌ ತಂಡವು ಆರಂಭದಲ್ಲೇ ಆಘಾತಕ್ಕೊಳಗಾಗಿದೆ. ಮೊದಲು ಬೌಲಿಂಗ್ ಆಯ್ದುಕೊಂಡ ಲಕ್ನೋ, ಕೇವಲ 26 ರನ್‌ಗಳಿಗೆ ಸನ್‌ರೈಸರ್ಸ್‌ನ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿತು. ಮೊಹಮ್ಮದ್ ಶಮಿ ಅವರ ಮಾರಕ ಬೌಲಿಂಗ್‌ನಿಂದ ಅಭಿಷೇಕ್ ಮತ್ತು ಟ್ರಾವಿಸ್ ಹೆಡ್ ಬೇಗನೆ ವಿಕೆಟ್ ಒಪ್ಪಿಸಿದರು. ಸನ್‌ರೈಸರ್ಸ್‌ನ ನಾಯಕ ಇಶಾನ್ ಕಿಶನ್ ಕೂಡ ಅಲ್ಪ ಮೊತ್ತಕ್ಕೆ ಔಟಾಗಿದ್ದಾರೆ.

1 / 5
ತವರಿನಲ್ಲಿ ತನ್ನ ಮೊದಲ ಪಂದ್ಯವನ್ನಾಡುತ್ತಿರುವ ಸನ್‌ರೈಸರ್ಸ್ ಹೈದರಾಬಾದ್‌ ತಂಡ, ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಆರಂಭಿಸಿದ ಸನ್‌ರೈಸರ್ಸ್ ತಂಡಕ್ಕೆ ಆರಂಭದಲ್ಲೇ 4 ಆಘಾತಗಳು ಎದುರಾಗಿವೆ.

ತವರಿನಲ್ಲಿ ತನ್ನ ಮೊದಲ ಪಂದ್ಯವನ್ನಾಡುತ್ತಿರುವ ಸನ್‌ರೈಸರ್ಸ್ ಹೈದರಾಬಾದ್‌ ತಂಡ, ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಆರಂಭಿಸಿದ ಸನ್‌ರೈಸರ್ಸ್ ತಂಡಕ್ಕೆ ಆರಂಭದಲ್ಲೇ 4 ಆಘಾತಗಳು ಎದುರಾಗಿವೆ.

2 / 5

ಲೀಗ್​ನಲ್ಲಿ ಮೂರನೇ ಪಂದ್ಯವನ್ನಾಡುತ್ತಿರುವಸನ್‌ರೈಸರ್ಸ್ ತಂಡಕ್ಕೆ ಮೊದಲ ಪಂದ್ಯಸಲ್ಲಿ ಸಾಧಾರಣ ಆರಂಭ ಸಿಕ್ಕಿತ್ತು. ಆದರೆ ಎರಡನೇ ಪಂದ್ಯದಲ್ಲಿ ಆರಂಭಿಕರಿಬ್ಬರು ಅಬ್ಬರಿಸಿದ್ದರು. ಹೀಗಾಗಿ ಮೂರನೇ ಪಂದ್ಯದಲ್ಲೂ ಅದನ್ನೇ ನಿರೀಕ್ಷಿಸಲಾಗಿತ್ತು. ಆದರೆ ಮೂರನೇ ಪಂದ್ಯದಲ್ಲಿ ಎಲ್ಲಾ ಲೆಕ್ಕಾಚಾರಗಳನ್ನು ಲಕ್ನೋ ವೇಗಿ ಮೊಹಮ್ಮದ್ ಶಮಿ ಬುಡಮೇಲು ಮಾಡಿದರು.

3 / 5

ಲಕ್ನೋ ಪರ ಬೌಲಿಂಗ್ ಆರಂಭಿಸಿದ ಮೊಹಮ್ಮದ್ ಶಮಿ ಮೊದಲ ಓವರ್​ನಲ್ಲೇ ಅಭಿಷೇಕ್ ವಿಕೆಟ್ ಉರುಳಿಸಿದರು. ಅಭಿಷೇಕ್​ಗೆ ಈ ಪಂದ್ಯದಲ್ಲಿ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ. ಶಮಿ ಎಸೆದ ಈ ಓವರ್​ನ ಕೊನೆಯ ಎಸೆತದಲ್ಲಿ ಅಭಿಷೇಕ್, ಸ್ಲಿಪ್​ನಲ್ಲಿ ನಿಂತಿದ್ದ ಫಿಲ್ಡರ್​ಗೆ ಖ್ಯಾಚಿತ್ತು ನಿರ್ಗಮಿಸಿದರು. ಆಗ ತಂಡದ ಮೊತ್ತ ಕೇವಲ 1 ರನ್ ಆಗಿತ್ತು.

4 / 5

ಇನ್ನಿಂಗ್ಸ್​ನ ಮೂರನೇ ಓವರ್​ನಲ್ಲಿ ಮತ್ತೆ ದಾಳಿಗಿಳಿದ ಶಮಿ, ಈ ಓವರ್​ನಲ್ಲಿ ಮತ್ತೊಬ್ಬ ಆರಂಭಿಕ ಟ್ರಾವಿಸ್ ಹೆಡ್​ಗೆ ಖೆಡ್ಡಾ ತೊಡಿದರು. ಶಮಿಯ ನಿಧಾನಗತಿಯ ಎಸೆತವನ್ನು ಅರಿಯದ ಹೆಡ್, ಖ್ಯಾಚಿತ್ತು ಔಟಾದರು. ಆಗ ತಂಡದ ಮೊತ್ತ ಕೇವಲ 8 ರನ್​ಗಳಾಗಿತ್ತು.

5 / 5

ಶಮಿ ಬಳಿಕ ಬೌಲಿಂಗ್​ಗೆ ಬಂದ ಪ್ರಿನ್ಸ್ ಯಾದವ್, ಈ ಓವರ್​ನ ಮೂರನೇ ಎಸೆತದಲ್ಲಿ ಎಸ್​ಆರ್​ಎಚ್ ನಾಯಕ ಇಶಾನ್ ಕಿಶನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಕಿಶನ್ ಕೇವಲ 1 ರನ್ ಬಾರಿಸಿ ಔಟಾದರು. ಸನ್‌ರೈಸರ್ಸ್ ಪರ ಮೊದಲ ಪಂದ್ಯವನ್ನಾಡಿದ ಲಿವಿಂಗ್​ಸ್ಟೋನ್ ಕೂಡ 14 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಸನ್‌ರೈಸರ್ಸ್ ತಂಡ 26 ರನ್​​ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು.

Loading...
Unable to load recommendations.
Follow Us