SRH Retention List for IPL 2025: ಕ್ಲಾಸೆನ್ಗೆ 23 ಕೋಟಿ; ಐವರು ಆಟಗಾರರಿಗೆ ಮಣೆ ಹಾಕಿದ ಹೈದರಾಬಾದ್
Sunrisers Hyderabad Retention Players List for IPL 2025: ಸಿಸಿಐ ನೀಡಿದ ಗಡುವಿಗೂ ಮುನ್ನ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿರುವ ಕಾವ್ಯ ಮಾರನ್ ಒಡೆತನದ ಹೈದರಬಾದ್ ಈ ಬಾರಿ 5 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ. ಇದರಲ್ಲಿ ಹೆನ್ರಿಚ್ ಕ್ಲಾಸೆನ್, ಪ್ಯಾಟ್ ಕಮಿನ್ಸ್, ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಹೆಸರುಗಳಿವೆ.
1 / 6
ಸನ್‌ರೈಸರ್ಸ್ ಫ್ರಾಂಚೈಸಿ, ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಯಾರನ್ನು ಉಳಿಸಿಕೊಳ್ಳಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದರು. ಅದರಂತೆ ಇದೀಗ ಬಿಸಿಸಿಐ ನೀಡಿದ ಗಡುವಿಗೂ ಮುನ್ನ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿರುವ ಕಾವ್ಯ ಮಾರನ್ ಒಡೆತನದ ಹೈದರಬಾದ್ ಈ ಬಾರಿ 5 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ.
2 / 6
ಪ್ಯಾಟ್ ಕಮ್ಮಿನ್ಸ್ ಅವರನ್ನು ಮೊದಲ ಆಯ್ಕೆಯಾಗಿ ಉಳಿಸಿಕೊಂಡಿರುವ ಹೈದರಾಬಾದ್ ಈ ಆಸೀಸ್ ವೇಗಿಗಾಗಿ 18 ಕೋಟಿ ರೂಗಳನ್ನು ಖರ್ಚು ಮಾಡಿದೆ. ಇದರೊಂದಿಗೆ ಮುಂದಿನ ಆವೃತ್ತಿಯಲ್ಲೂ ಕಮ್ಮಿನ್ಸ್ ತಂಡವನ್ನು ಮುನ್ನಡೆಸುವುದನ್ನು ಕಾಣಬಹುದಾಗಿದೆ.
3 / 6
ಎರಡನೇ ಆಯ್ಕೆಯಾಗಿ ಟೀಂ ಇಂಡಿಯಾದ ಯುವ ಸ್ಫೋಟಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾಗೆ ಮಣೆ ಹಾಕಿರುವ ಕಾವ್ಯ ಮಾರನ್, ಈ ಆಲ್ರೌಂಡರ್ಗಾಗಿ 14 ಕೋಟಿ ರೂ ವೇತನ ನೀಡಿದೆ. ಅಭಿಷೇಕ್ ಆರಂಭಿಕ ಆಟಗಾರನಾಗಿದ್ದು, ಸ್ಪಿನ್ನರ್ ಕೂಡ ಆಗಿದ್ದಾರೆ.
4 / 6
ಮೂರನೇ ಆಟಗಾರನಾಗಿ ಮತ್ತೊಬ್ಬ ದೇಶೀ ಯುವ ಆಲ್ರೌಂಡರ್ಗೆ ಗಾಳ ಹಾಕಿರುವ ಹೈದರಾಬಾದ್, ನಿತೀಶ್ ಕುಮಾರ್ ರೆಡ್ಡಿ ಅವರನ್ನು 6 ಕೋಟಿ ರೂಗಳಿಗೆ ತಂಡದಲ್ಲಿ ಉಳಿಸಿಕೊಂಡಿದೆ. ನಿತೀಶ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದು, ವೇಗದ ಬೌಲರ್ ಕೂಡ ಆಗಿದ್ದಾರೆ.
5 / 6
ನಾಲ್ಕನೇ ಆಟಗಾರನಾಗಿ ಆಯ್ಕೆಯಾದರೂ, ದಕ್ಷಿಣ ಆಫ್ರಿಕಾದ ಸ್ಫೊಟಕ ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸೆನ್ಗೆ ಬರೋಬ್ಬರಿ 23 ಕೋಟಿ ರೂಗಳನ್ನು ನೀಡಲಾಗಿದೆ. ಎಲ್ಲಾ ಫ್ರಾಂಚೈಸಿಗಳ ಧಾರಣ ಪಟ್ಟಿಯನ್ನು ಗಮನಿಸಿದಾಗ ಕ್ಲಾಸೆನ್ಗೆ ಅತ್ಯಧಿಕ ಮೊತ್ತ ನೀಡಿ ಉಳಿಸಿಕೊಳ್ಳಲಾಗಿದೆ.
6 / 6
ಕೊನೆಯ ಆಯ್ಕೆಯಾಗಿ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ತಂಡದಲ್ಲಿ ಉಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೆಡ್ರನ್ನು 14 ಕೋಟಿ ರೂ ನೀಡಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
Published On - 5:56 pm, Thu, 31 October 24