ಕೆಎಲ್ ರಾಹುಲ್: ತಂಡದಿಂದ ಹೊರಬಿದ್ದಿರುವ ಎರಡನೇಯ ಅಚ್ಚರಿಯ ಆಯ್ಕೆಯೆಂದರೆ, ಅದು ಕನ್ನಡಿಗ ಕೆಎಲ್ ರಾಹುಲ್. ವಾಸ್ತವವಾಗಿ ಕಳೆದ ಕೆಲವು ದಿನಗಳಿಂದ ರಾಹುಲ್ ಬಗ್ಗೆ ಈ ರೀತಿಯ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಇದೀಗ ಆ ಸುದ್ದಿ ನಿಜವಾಗಿದ್ದು, ಕನ್ನಡಿಗ ರಾಹುಲ್ ಲಕ್ನೋ ತಂಡದಿಂದ ಹೊರಬಿದ್ದಿದ್ದು, ಅವರೀಗ ಹರಾಜಿನಲ್ಲಿ ಯಾವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.