100ನೇ ಪಂದ್ಯದ ಸೋಲಿನೊಂದಿಗೆ ದಿಮುತ್ ಕರುಣರತ್ನೆ ವಿದಾಯ

Updated on: Feb 09, 2025 | 11:54 AM

Dimuth Karunaratne: ಶ್ರೀಲಂಕಾ ತಂಡದ ಎಡಗೈ ಆರಂಭಿಕ ಆಟಗಾರ ದಿಮುತ್ ಕರುಣರತ್ನೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಅಂತ್ಯಗೊಳಿಸಿದ್ದಾರೆ. ಲಂಕಾ ಪರ 237 ಇನಿಂಗ್ಸ್ ಆಡಿರುವ ಅವರು ಒಟ್ಟು 8538 ರನ್ ಕಲೆಹಾಕಿದ್ದಾರೆ. ಈ ಮೂಲಕ ತಮ್ಮ 36ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​​ಗೆ ವಿದಾಯ ಹೇಳಿದ್ದಾರೆ.

1 / 5
ಶ್ರೀಲಂಕಾ ತಂಡದ ಸ್ಟಾರ್ ಆಟಗಾರ ದಿಮುತ್ ಕರುಣರತ್ನೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಗಾಲೆ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ ದಿಮುತ್ ಇಂಟರ್​ನ್ಯಾಷನಲ್​ ಕೆರಿಯರ್ ಅಂತ್ಯಗೊಳಿಸಿದ್ದಾರೆ. ವಿಶೇಷ ಎಂದರೆ ಇದು ದಿಮುತ್ ಕರುಣರತ್ನೆ ಅವರ 100ನೇ ಟೆಸ್ಟ್ ಪಂದ್ಯವಾಗಿತ್ತು.

2 / 5
ಈ ಸ್ಮರಣೀಯ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ದಿಮುತ್ ಮೊದಲ ಇನಿಂಗ್ಸ್​ನಲ್ಲಿ 36 ರನ್​ಗಳಿಸಿದರೆ, ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 14 ರನ್​ ಬಾರಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ತಮ್ಮ 100ನೇ ಪಂದ್ಯದಲ್ಲಿ ಕೇವಲ 40 ರನ್​ ಮಾತ್ರ ಕಲೆಹಾಕಿದ್ದಾರೆ. ಇನ್ನು ಈ ಪಂದ್ಯದಲ್ಲಿ ಶ್ರೀಲಂಕಾ ತಂಡವು 9 ವಿಕೆಟ್​ಗಳ ಹೀನಾಯ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಲಂಕಾ ದಾಂಡಿಗ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್​ಗೆ ಗುಡ್ ಬೈ ಹೇಳಿದ್ದಾರೆ.

3 / 5
36 ವರ್ಷದ ದಿಮುತ್ ಕರುಣರತ್ನೆ ಶ್ರೀಲಂಕಾ ಪರ ಒಟ್ಟು 100 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 191 ಇನಿಂಗ್ಸ್ ಆಡಿರುವ ಅವರು 1 ದ್ವಿಶತಕ, 16 ಶತಕಗಳೊಂದಿಗೆ ಒಟ್ಟು 7222 ರನ್ ಕಲೆಹಾಕಿದ್ದಾರೆ. ಹಾಗೆಯೇ 39 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.

4 / 5
ಇನ್ನು ಶ್ರೀಲಂಕಾ ಪರ 50 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ದಿಮುತ್ ಕರುಣರತ್ನೆ 46 ಇನಿಂಗ್ಸ್​ಗಳಿಂದ ಒಟ್ಟು 1316 ರನ್ ಕಲೆಹಾಕಿದ್ದಾರೆ. ಈ ವೇಳೆ ಒಂದು ಶತಕ ಹಾಗೂ 11 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದಾಗ್ಯೂ ಅವರು ಲಂಕಾ ಪರ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿಲ್ಲ.

5 / 5
2011 ರಲ್ಲಿ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದ ದಿಮುತ್ ಕರುಣರತ್ನೆ ಶ್ರೀಲಂಕಾ ಪರ ಒಟ್ಟು 237 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 17 ಶತಕ ಹಾಗೂ 50 ಅರ್ಧಶತಕಗಳೊಂದಿಗೆ ಒಟ್ಟು 8538 ರನ್ ಕಲೆಹಾಕಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ ಶ್ರೀಲಂಕಾದ 12ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಸಾಧನೆಯೊಂದಿಗೆ ದಿಮುತ್ ಅಂತಾರಾಷ್ಟ್ರೀಯ ವೃತ್ತಿಜೀವನ ಅಂತ್ಯಗೊಳಿಸಿದ್ದಾರೆ.

Published On - 11:53 am, Sun, 9 February 25