Stuart Broad: ವಿಶ್ವ ದಾಖಲೆಯೊಂದಿಗೆ ವಿದಾಯ ಹೇಳಿದ ಸ್ಟುವರ್ಟ್ ಬ್ರಾಡ್
TV9 Web | Updated By: ಝಾಹಿರ್ ಯೂಸುಫ್
Updated on:
Aug 01, 2023 | 6:06 PM
Stuart Broad Records: ಇಂಗ್ಲೆಂಡ್ ಪರ 167 ಟೆಸ್ಟ್ ಪಂದ್ಯಗಳನ್ನಾಡಿರುವ ಸ್ಟುವರ್ಟ್ ಬ್ರಾಡ್ ಒಟ್ಟು 604 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಆಂಗ್ಲೆಂಡ್ ಪರ ಅತ್ಯಧಿಕ ಟೆಸ್ಟ್ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.
1 / 5
Ashes 2023: ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಆ್ಯಶಸ್ ಸರಣಿಯ 5ನೇ ಟೆಸ್ಟ್ ಪಂದ್ಯದ ಮೂಲಕ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಅದು ಕೂಡ ವಿಶ್ವ ದಾಖಲೆಯೊಂದಿಗೆ ಎಂಬುದು ವಿಶೇಷ.
2 / 5
ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆತದ 81ನೇ ಓವರ್ನ ಕೊನೆಯ ಎಸೆತದಲ್ಲಿ ಸ್ಟುವರ್ಟ್ ಬ್ರಾಡ್ ಭರ್ಜರಿ ಸಿಕ್ಸ್ ಸಿಡಿಸಿದ್ದರು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಬ್ರಾಡ್ ಎದುರಿಸಿದ ಕೊನೆಯ ಬಾಲ್ ಆಗಿತ್ತು. ಅಂದರೆ ತಮ್ಮ ಕೆರಿಯರ್ನ ಕೊನೆಯ ಬಾಲ್ನಲ್ಲಿ ಬ್ರಾಡ್ ಸಿಕ್ಸ್ ಬಾರಿಸಿದ್ದರು.
3 / 5
ಇದಾದ ಬಳಿಕ ಆಸ್ಟ್ರೇಲಿಯಾ ತಂಡದ ದ್ವಿತೀಯ ಇನಿಂಗ್ಸ್ನ ಕೊನೆಯ ಎರಡು ವಿಕೆಟ್ಗಳನ್ನು ಉರುಳಿಸಿದ್ದು ಸ್ಟುವರ್ಟ್ ಬ್ರಾಡ್. 91ನೇ ಓವರ್ನ ಕೊನೆಯ ಎಸೆತದಲ್ಲಿ ಟಾಡ್ ಮರ್ಫಿ ವಿಕೆಟ್ ಪಡೆದ ಬ್ರಾಡ್, 95ನೇ ಓವರ್ನ 4 ಎಸೆತದಲ್ಲಿ ಅಲೆಕ್ಸ್ ಕ್ಯಾರಿ ವಿಕೆಟ್ ಉರುಳಿಸಿದ್ದರು.
4 / 5
ಈ ವಿಕೆಟ್ನೊಂದಿಗೆ ಇಂಗ್ಲೆಂಡ್ ತಂಡವು 49 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಇದರೊಂದಿಗೆ ವಿಶೇಷ ವಿಶ್ವ ದಾಖಲೆ ಕೂಡ ಸ್ಟುವರ್ಟ್ ಬ್ರಾಡ್ ಪಾಲಾಯಿತು.
5 / 5
ಅಂದರೆ ವಿದಾಯ ಪಂದ್ಯದಲ್ಲಿ ಎದುರಿಸಿದ ಕೊನೆಯ ಬಾಲ್ನಲ್ಲಿ ಸಿಕ್ಸ್ ಸಿಡಿಸಿದ ಹಾಗೂ ಬೌಲಿಂಗ್ನಲ್ಲಿ ಅಂತಿಮ ಎಸೆತದಲ್ಲಿ ವಿಕೆಟ್ ಪಡೆದ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಬ್ರಾಡ್ ಪಾಲಾಗಿದೆ. ಈ ಮೂಲಕ ತಮ್ಮ ಕಡೆಯ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಹೊಸ ವಿಶ್ವದಾಖಲೆಯೊಂದಿಗೆ ವಿದಾಯ ಹೇಳಿರುವುದು ವಿಶೇಷ.