R Ashwin: ‘ಅಶ್ವಿನ್‌ಗೆ 2 ವರ್ಷಗಳ ಹಿಂದೆಯೇ ಟೆಸ್ಟ್ ನಾಯಕತ್ವ ನೀಡಬೇಕಿತ್ತು’; ಗವಾಸ್ಕರ್ ಬೇಸರ..!
R Ashwin: ಅಶ್ವಿನ್ ಅವರ 500 ಟೆಸ್ಟ್ ವಿಕೆಟ್‌ಗಳ ಸಾಧನೆಯನ್ನು ಮನಸಾರೆ ಹೊಗಳಿರುವ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಅಶ್ವಿನ್ ಅದ್ಭುತ ಆಟಗಾರ. ಅವರು ಯಾವಾಗಲೂ ಹೊಸದನ್ನು ಮಾಡಲು ಪ್ರಯತ್ನಿಸುತ್ತಾರೆ. ಅಶ್ವಿನ್ ಟೆಸ್ಟ್ ಕ್ರಿಕೆಟ್‌ನ ನಾಯಕತ್ವಕ್ಕೆ ಅರ್ಹರಾಗಿದ್ದರು. ಆದರೆ ಅವರಿಗೆ ಇದುವರೆಗೂ ಆ ಸ್ಥಾನವನ್ನು ನೀಡಲಾಗಿಲ್ಲ ಎಂದು ಗವಾಸ್ಕರ್ ಬೇಸರ ಹೊರಹಾಕಿದ್ದಾರೆ.
1 / 7
ಒಂದು ಸಮಯದಲ್ಲಿ ಮೂರು ಮಾದರಿಯಲ್ಲಿ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯುತ್ತಿದ್ದ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಸದ್ಯ ಟೆಸ್ಟ್ ತಂಡದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನ ಸ್ಪಿನ್ ಮ್ಯಾಜಿಕ್ನಿಂದ ತಂಡಕ್ಕೆ ಅದೆಷ್ಟೋ ಪಂದ್ಯಗಳನ್ನು ಗೆದ್ದುಕೊಟ್ಟಿರುವ ಅಶ್ವಿನ್‌ಗೆ ಟೆಸ್ಟ್ ತಂಡದ ನಾಯಕತ್ವ ನೀಡಬೇಕು ಎಂಬ ಕೂಗ ಬಹಳ ಹಿಂದೆಯೇ ಕೇಳಿಬಂದಿತ್ತು. ಆದರೆ ಅದು ಸಾಕಾರಗೊಳಲೇ ಇಲ್ಲ.
2 / 7
ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿರುವ ಅಶ್ವಿನ್ ಇತ್ತೀಚೆಗೆ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 500 ವಿಕೆಟ್‌ಗಳನ್ನು ಪೂರೈಸಿದ್ದರು. ಈ ಸಾಧನೆ ಮಾಡಿದ ವಿಶ್ವದ 9ನೇ ಬೌಲರ್ ಎನಿಸಿಕೊಂಡಿದ್ದಾರೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಅಶ್ವಿನ್‌ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಲ್ಲದೆ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನ ಮುಂದಿನ ನಾಯಕರಾಗಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
3 / 7
ಈ ನಡುವೆ ಅಶ್ವಿನ್ ಅವರ 500 ಟೆಸ್ಟ್ ವಿಕೆಟ್‌ಗಳ ಸಾಧನೆಯನ್ನು ಮನಸಾರೆ ಹೊಗಳಿರುವ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಅಶ್ವಿನ್ ಅದ್ಭುತ ಆಟಗಾರ. ಅವರು ಯಾವಾಗಲೂ ಹೊಸದನ್ನು ಮಾಡಲು ಪ್ರಯತ್ನಿಸುತ್ತಾರೆ. ಈ ವಿಶೇಷತೆಯು ಅವರನ್ನು ಇತರ ಆಟಗಾರರಿಗಿಂತ ಭಿನ್ನವಾಗಿಸುತ್ತದೆ. ಅಶ್ವಿನ್ ಟೆಸ್ಟ್ ಕ್ರಿಕೆಟ್‌ನ ನಾಯಕತ್ವಕ್ಕೆ ಅರ್ಹರಾಗಿದ್ದರು. ಆದರೆ ಅವರಿಗೆ ಇದುವರೆಗೂ ಆ ಸ್ಥಾನವನ್ನು ನೀಡಲಾಗಿಲ್ಲ ಎಂದು ಗವಾಸ್ಕರ್ ಬೇಸರ ಹೊರಹಾಕಿದ್ದಾರೆ.
4 / 7
ಮುಂದುವರೆದು ಮಾತನಾಡಿರುವ ಗವಾಸ್ಕರ್, ಎರಡು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ನಾಯಕತ್ವ ತೊರೆದ ನಂತರ ಅಶ್ವಿನ್ ಅವರನ್ನು ನಾಯಕನನ್ನಾಗಿ ಮಾಡಬೇಕಿತ್ತು. ಅಶ್ವಿನ್ ಒಬ್ಬ ಅದ್ಭುತ ಆಟಗಾರ, ಸಂಪೂರ್ಣ ಜವಾಬ್ದಾರಿಯೊಂದಿಗೆ ನಾಯಕನ ಪಾತ್ರವನ್ನು ನಿರ್ವಹಿಸುವ ಸಾಮಥ್ರ್ಯ ಆತನಲ್ಲಿತ್ತು. ರೋಹಿತ್ ಶರ್ಮಾ ಅವರನ್ನು ಎಲ್ಲಾ ಮೂರು ಸ್ವರೂಪಗಳ ನಾಯಕರನ್ನಾಗಿ ಮಾಡಬಾರದಿತ್ತು. ಇದರಿಂದಾಗಿಯೇ ರೋಹಿತ್ ಒತ್ತಡದಲ್ಲಿದ್ದಾರೆ. ರೋಹಿತ್ ಬದಲಿಗೆ ಅಶ್ವಿನ್ ಅವರನ್ನು ಟೆಸ್ಟ್ ನಾಯಕರನ್ನಾಗಿ ಮಾಡಬೇಕಿತ್ತು ಎಂದು ಗವಾಸ್ಕರ್ ಹೇಳಿದ್ದಾರೆ.
5 / 7
ಗವಾಸ್ಕರ್ ಅವರ ಈ ಹೇಳಿಕೆಯು ಟೆಸ್ಟ್ ನಾಯಕತ್ವದ ಬಗ್ಗೆ ಮತ್ತೆ ಚರ್ಚೆಯನ್ನು ಪ್ರಾರಂಭಿಸಿದೆ. ರೋಹಿತ್ ಶರ್ಮಾ ನಂತರ ಮುಂದಿನ ಟೆಸ್ಟ್ ನಾಯಕ ಯಾರು ಎಂಬುದು ಚರ್ಚೆಯ ವಿಷಯವಾಗಿದೆ. ಅಶ್ವಿನ್‌ಗೆ ನಾಯಕತ್ವ ನೀಡಬೇಕು ಎಂಬು ಕೂಗು ಜೋರಾಗಿದೆ. ಆದರೆ ಅಶ್ವಿನ್ ಅವರಿಗೆ ಈಗ 37 ವರ್ಷ, ಆದ್ದರಿಂದ ಇದು ಅವರ ಕ್ರಿಕೆಟ್ ವೃತ್ತಿಜೀವನದ ಕೊನೆಯ ಹಂತವಾಗಿದೆ. ಹೀಗಾಗಿ ಟೆಸ್ಟ್ ನಾಯಕತ್ವವನ್ನು ಅಶ್ವಿನ್‌ಗೆ ಹಸ್ತಾಂತರಿಸುವುದು ಕಷ್ಟ.
6 / 7
ರಾಜ್‌ಕೋಟ್ ಟೆಸ್ಟ್‌ನಲ್ಲಿ ಭಾರತ ಐತಿಹಾಸಿಕ ಗೆಲುವು ದಾಖಲಿಸಿದ್ದು ಮಾತ್ರವಲ್ಲದೆ , ಭಾರತದ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಕೂಡ ತಮ್ಮ ಹೆಸರಿನಲ್ಲಿ ಐತಿಹಾಸಿಕ ದಾಖಲೆಯನ್ನು ದಾಖಲಿಸಿದ್ದಾರೆ. ಅಶ್ವಿನ್ ರಾಜ್ ಕೋಟ್ ಟೆಸ್ಟ್‌ನಲ್ಲಿ 500ನೇ ಟೆಸ್ಟ್ ವಿಕೆಟ್ ಪೂರೈಸಿದ್ದಾರೆ.
7 / 7
ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ವಿಕೆಟ್ ಪಡೆದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಿದ್ದಾರೆ. ಅಶ್ವಿನ್ ಹೊರತುಪಡಿಸಿ ಮಾಜಿ ಅನುಭವಿ ಆಟಗಾರ ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದಾರೆ. ಕುಂಬ್ಳೆ ಅವರ ಹೆಸರಿನಲ್ಲಿ ಒಟ್ಟು 619 ಟೆಸ್ಟ್ ವಿಕೆಟ್‌ಗಳಿವೆ. ಕುಂಬ್ಳೆ 236 ಇನ್ನಿಂಗ್ಸ್‌ಗಳಲ್ಲಿ 619 ವಿಕೆಟ್ ಪಡೆದಿದ್ದಾರೆ.