Suryakumar Yadav: ಸೂರ್ಯನ ಆರ್ಭಟಕ್ಕೆ ರಿಜ್ವಾನ್ ದಾಖಲೆ ಉಡೀಸ್..!

| Updated By: ಝಾಹಿರ್ ಯೂಸುಫ್

Updated on: Oct 27, 2022 | 9:31 PM

T20 World Cup 2022: ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್​ನೊಂದಿಗೆ ಅಜೇಯ 51 ರನ್ ಬಾರಿಸಿದರು.

1 / 5
ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸ್​ಮನ್ ಸೂರ್ಯಕುಮಾರ್ ಯಾದವ್ ಅವರ ಆರ್ಭಟ ಮುಂದುವರೆದಿದೆ. ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆದ ನೆದರ್​ಲ್ಯಾಂಡ್ಸ್​ ವಿರುದ್ಧದ ಪಂದ್ಯದಲ್ಲೂ ಸೂರ್ಯ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

2 / 5
ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್​ನೊಂದಿಗೆ ಅಜೇಯ 51 ರನ್ ಬಾರಿಸಿದರು. ಈ ಭರ್ಜರಿ ಅರ್ಧಶತಕದೊಂದಿಗೆ ಪಾಕಿಸ್ತಾನ್ ಮೊಹಮ್ಮದ್ ರಿಜ್ವಾನ್ ಅವರ ದಾಖಲೆಯನ್ನು ಹಿಂದಿಕ್ಕಿರುವುದು ವಿಶೇಷ.

3 / 5
ಅಂದರೆ 2022 ರಲ್ಲಿ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ದಾಖಲೆ ರಿಜ್ವಾನ್ ಹೆಸರಿನಲ್ಲಿತ್ತು. ಈ ವರ್ಷ 19 ಇನಿಂಗ್ಸ್ ಆಡಿರುವ ಮೊಹಮ್ಮದ್ ರಿಜ್ವಾನ್ 825	 ರನ್ ಬಾರಿಸಿ ರನ್ ಸರದಾರನಾಗಿ ಮೆರೆದಿದ್ದರು.

4 / 5
ಇದೀಗ 25 ಇನಿಂಗ್ಸ್​ ಮೂಲಕ ಸೂರ್ಯಕುಮಾರ್ ಯಾದವ್ 867 ರನ್​ ಬಾರಿಸಿ ಈ ವರ್ಷ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

5 / 5
ಇದಾಗ್ಯೂ ಮೊಹಮ್ಮದ್ ರಿಜ್ವಾನ್ ಹಾಗೂ ಸೂರ್ಯಕುಮಾರ್ ಯಾದವ್ ನಡುವೆ ಕೇವಲ 42 ರನ್​ಗಳ ವ್ಯತ್ಯಾಸವಷ್ಟೇ ಇದೆ. ಹೀಗಾಗಿ ಈ ಬಾರಿ ಟಿ20 ವಿಶ್ವಕಪ್​ನಲ್ಲಿ ರನ್​ ಸರದಾರ ಪಟ್ಟಕ್ಕಾಗಿ ಇಬ್ಬರ ನಡುವಿನ ಪೈಪೋಟಿ ಮುಂದುವರೆಯಲಿದೆ.