T20 World Cup 2022 Point Table: ಟೀಮ್ ಇಂಡಿಯಾ, ಜಿಂಬಾಬ್ವೆಗೆ ಜಯ: ಹೊಸ ಪಾಯಿಂಟ್ ಟೇಬಲ್ ಹೀಗಿದೆ
T20 World Cup 2022 Points Table: ಮಳೆಯ ಕಾರಣ ಪಂದ್ಯವು ರದ್ದಾದರೆ ಉಭಯ ತಂಡಗಳು ತಲಾ ಒಂದೊಂದು ಪಾಯಿಂಟ್ಸ್ ಹಂಚಿಕೊಳ್ಳಬೇಕಾಗುತ್ತದೆ. ಇದರಿಂದ ಸೋಲಿನ ಸುಳಿಯಲ್ಲಿದ್ದ ಜಿಂಬಾಬ್ವೆ ಹಾಗೂ ಅಫ್ಘಾನಿಸ್ತಾನ್ ತಂಡಗಳಿಗೂ 1 ಪಾಯಿಂಟ್ ಸಿಕ್ಕಿದೆ.
Updated on: Oct 27, 2022 | 11:24 PM

ಟಿ20 ವಿಶ್ವಕಪ್ನ ಸೂಪರ್-12 ಸುತ್ತಿನ ಪಂದ್ಯಗಳು ಜರುಗುತ್ತಿದೆ. ಈಗಾಗಲೇ ಎಲ್ಲಾ ತಂಡಗಳು ಎರೆಡೆರಡು ಪಂದ್ಯಗಳನ್ನು ಆಡಿದೆ. ವಿಶೇಷ ಎಂದರೆ ಎರಡು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದೆ. ಹಾಗಾಗಿ ನ್ಯೂಜಿಲೆಂಡ್, ಜಿಂಬಾಬ್ವೆ, ಅಫ್ಘಾನಿಸ್ತಾನ್ ಹಾಗೂ ಸೌತ್ ಆಫ್ರಿಕಾ ತಂಡಗಳು ತಲಾ ಒಂದೊಂದು ಅಂಕ ಪಡೆದುಕೊಂಡಿದೆ.

ಅಂದರೆ ಮಳೆಯ ಕಾರಣ ಪಂದ್ಯವು ರದ್ದಾದರೆ ಉಭಯ ತಂಡಗಳು ತಲಾ ಒಂದೊಂದು ಪಾಯಿಂಟ್ಸ್ ಹಂಚಿಕೊಳ್ಳಬೇಕಾಗುತ್ತದೆ. ಇದರಿಂದ ಸೋಲಿನ ಸುಳಿಯಲ್ಲಿದ್ದ ಜಿಂಬಾಬ್ವೆ ಹಾಗೂ ಅಫ್ಘಾನಿಸ್ತಾನ್ ತಂಡಗಳಿಗೂ 1 ಪಾಯಿಂಟ್ ಸಿಕ್ಕಿದೆ.

ಗ್ರೂಪ್-1 ರಲ್ಲಿ ಆಸ್ಟ್ರೇಲಿಯಾ ತಂಡವನ್ನು ಹೀನಾಯವಾಗಿ ಸೋಲಿಸಿ ಭರ್ಜರಿ ಶುಭಾರಂಭ ಮಾಡಿದ ನ್ಯೂಜಿಲೆಂಡ್ +4.45 ನೆಟ್ ರನ್ ರೇಟ್ ಪಡೆಯುವ ಮೂಲಕ 3 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ಇನ್ನು ಐರ್ಲೆಂಡ್ ವಿರುದ್ಧ ಭರ್ಜರಿಯಾಗಿ ಗೆದ್ದ ಶ್ರೀಲಂಕಾ 2 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಹಾಗೆಯೇ ಅಫ್ಘಾನಿಸ್ತಾನ್ ವಿರುದ್ಧ ಜಯ ಸಾಧಿಸಿದ ಇಂಗ್ಲೆಂಡ್ 2 ಪಾಯಿಂಟ್ನೊಂದಿಗೆ 3ನೇ ಸ್ಥಾನದಲ್ಲಿದೆ.

ಇನ್ನು ಗ್ರೂಪ್-2 ನಲ್ಲಿ ಪಾಕಿಸ್ತಾನ್ ವಿರುದ್ಧ ರೋಚಕ ಜಯ ಸಾಧಿಸಿ +0.05 ನೆಟ್ ರನ್ ರೇಟ್ ಹೊಂದಿದ್ದ ಟೀಮ್ ಇಂಡಿಯಾ ನೆದರ್ಲ್ಯಾಂಡ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ +1.425 ನೆಟ್ ರನ್ ರೇಟ್ನೊಂದಿಗೆ 4 ಪಾಯಿಂಟ್ಸ್ ಕಲೆಹಾಕಿ ಅಗ್ರಸ್ಥಾನ ಅಲಂಕರಿಸಿದೆ. ಇನ್ನು ಬಾಂಗ್ಲಾದೇಶ್ ವಿರುದ್ಧ ಭರ್ಜರಿಯಾಗಿ ಗೆದ್ದಿರುವ ಸೌತ್ ಆಫ್ರಿಕಾ +5.200 ನೆಟ್ ರನ್ ರೇಟ್ ಹೊಂದಿದ್ದು, ಇದಾಗ್ಯೂ 3 ಪಾಯಿಂಟ್ ಕಲೆಹಾಕಿರುವ ಕಾರಣ 2ನೇ ಸ್ಥಾನದಲ್ಲಿದೆ. ಇನ್ನು ಪಾಕಿಸ್ತಾನ್ ತಂಡಕ್ಕೆ ಸೋಲುಣಿಸಿರುವ ಜಿಂಬಾಬ್ವೆ +0.050 ನೆಟ್ ರನ್ ರೇಟ್ನೊಂದಿಗೆ 3ನೇ ಸ್ಥಾನದಲ್ಲಿದೆ.

ಇನ್ನೂ ಎಲ್ಲಾ ತಂಡಗಳಿಗೆ 3 ಪಂದ್ಯಗಳು ಬಾಕಿಯಿದ್ದು, ಈ ಪಂದ್ಯಗಳಲ್ಲಿ ಅತ್ಯಧಿಕ ಜಯ ಸಾಧಿಸಿ 2 ಗ್ರೂಪ್ಗಳ ಪಾಯಿಂಟ್ ಟೇಬಲ್ನಲ್ಲಿ ಮೊದಲೆರಡು ಸ್ಥಾನ ಅಲಂಕರಿಸುವ ನಾಲ್ಕು ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.



















