Updated on: Oct 27, 2022 | 9:31 PM
ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರ ಆರ್ಭಟ ಮುಂದುವರೆದಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲೂ ಸೂರ್ಯ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್ನೊಂದಿಗೆ ಅಜೇಯ 51 ರನ್ ಬಾರಿಸಿದರು. ಈ ಭರ್ಜರಿ ಅರ್ಧಶತಕದೊಂದಿಗೆ ಪಾಕಿಸ್ತಾನ್ ಮೊಹಮ್ಮದ್ ರಿಜ್ವಾನ್ ಅವರ ದಾಖಲೆಯನ್ನು ಹಿಂದಿಕ್ಕಿರುವುದು ವಿಶೇಷ.
ಅಂದರೆ 2022 ರಲ್ಲಿ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ರಿಜ್ವಾನ್ ಹೆಸರಿನಲ್ಲಿತ್ತು. ಈ ವರ್ಷ 19 ಇನಿಂಗ್ಸ್ ಆಡಿರುವ ಮೊಹಮ್ಮದ್ ರಿಜ್ವಾನ್ 825 ರನ್ ಬಾರಿಸಿ ರನ್ ಸರದಾರನಾಗಿ ಮೆರೆದಿದ್ದರು.
ಇದೀಗ 25 ಇನಿಂಗ್ಸ್ ಮೂಲಕ ಸೂರ್ಯಕುಮಾರ್ ಯಾದವ್ 867 ರನ್ ಬಾರಿಸಿ ಈ ವರ್ಷ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದಾಗ್ಯೂ ಮೊಹಮ್ಮದ್ ರಿಜ್ವಾನ್ ಹಾಗೂ ಸೂರ್ಯಕುಮಾರ್ ಯಾದವ್ ನಡುವೆ ಕೇವಲ 42 ರನ್ಗಳ ವ್ಯತ್ಯಾಸವಷ್ಟೇ ಇದೆ. ಹೀಗಾಗಿ ಈ ಬಾರಿ ಟಿ20 ವಿಶ್ವಕಪ್ನಲ್ಲಿ ರನ್ ಸರದಾರ ಪಟ್ಟಕ್ಕಾಗಿ ಇಬ್ಬರ ನಡುವಿನ ಪೈಪೋಟಿ ಮುಂದುವರೆಯಲಿದೆ.