Suryakumar Yadav: ಪಾಕಿಸ್ತಾನ ಬ್ಯಾಟರ್ನ ದಾಖಲೆ ಪುಡಿಗಟ್ಟಲು ರೆಡಿಯಾದ ಸೂರ್ಯಕುಮಾರ್: ಕೊಹ್ಲಿ ರೆಕಾರ್ಡ್ ಮೇಲೂ ಕಣ್ಣು
TV9 Web | Updated By: Vinay Bhat
Updated on:
Nov 18, 2022 | 10:46 AM
India vs New Zealand: ಐಸಿಸಿ ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲೇ ಸೂರ್ಯಕುಮಾರ್ ಯಾದವ್ ಮುಂದುವರಿದಿದ್ದಾರೆ. ಈ ವರ್ಷ ಅನೇಕ ದಾಖಲೆಗಳನ್ನು ಪುಡಿಗಟ್ಟಿರುವ ಇವರು ಇದೀಗ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ.
1 / 8
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸೂರ್ಯಕುಮರ್ ಯಾದವ್ ಸದ್ಯ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇದಕ್ಕೆ ಸಾಕ್ಷಿ ಐಸಿಸಿ ನೂತನವಾಗಿ ಬಿಡುಗಡೆ ಮಾಡಿದ ಟಿ20 ಶ್ರೇಯಾಂಕ ಪಟ್ಟಿ. ಐಸಿಸಿ ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲೇ ಸೂರ್ಯ ಮುಂದುವರಿದಿದ್ದಾರೆ. ಈ ವರ್ಷ ಅನೇಕ ದಾಖಲೆಗಳನ್ನು ಪುಡಿಗಟ್ಟಿರುವ ಇವರು ಇದೀಗ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ.
2 / 8
ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರಂತಹ ಸ್ಟಾರ್ ಪ್ಲೇಯರ್ ಅಲಭ್ಯತೆಯಲ್ಲಿ ನ್ಯೂಜಿಲೆಂಡ್ಗೆ ತೆರಳಿರುವ ಭಾರತ ಪರ ಸೂರ್ಯಕುಮಾರ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಇದರ ಜೊತೆಗೆ ವಿಶೇಷ ದಾಖಲೆ ಸೃಷ್ಟಿಸುವ ಅವಕಾಶ ಕೂಡ ಇವರಿಗಿದೆ.
3 / 8
ಸೂರ್ಯಕುಮಾರ್ ಇದುವರೆಗೆ 40 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 1284 ರನ್ ಕಲೆಹಾಕಿದ್ದಾರೆ. ಇದರಲ್ಲಿ 2022ನೇ ವರ್ಷದಲ್ಲೇ 1040 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸೂರ್ಯ ಕೇವಲ 287 ರನ್ ಗಳಿಸಿದರೆ ಪಾಕಿಸ್ತಾನ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ದಾಖಲೆ ಪುಡಿಗಟ್ಟಲಿದ್ದಾರೆ.
4 / 8
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ರಿಜ್ವಾನ್ ಆಗಿದ್ದಾರೆ. ಇವರು 2021ನೇ ವರ್ಷದಲ್ಲಿ 29 ಪಂದ್ಯಗಳಿಂದ 1326ರನ್ ಗಳಿಸಿದ್ದರು. ಸೂರ್ಯ ಇನ್ನು 286 ರನ್ ಕಲೆಹಾಕಿದರೆ ಈ ದಾಖಲೆ ಅಳಿಸಿ ಇದುವರೆಗೆ ಯಾರೂ ಮಾಡಿರದ ವಿಶೇಷ ದಾಖಲೆ ಸೃಷ್ಟಿಸಲಿದ್ದಾರೆ.
5 / 8
ಇದರ ಜೊತೆಗೆ ಕೊಹ್ಲಿ ದಾಖಲೆ ಮೇಲೂ ಸೂರ್ಯ ಕಣ್ಣಿಟ್ಟಿದ್ದಾರೆ. 2016ರಲ್ಲಿ ಬ್ಯಾಟಿಂಗ್‌ನಲ್ಲಿ ಉತ್ತುಂಗದಲ್ಲಿದ್ದ ವಿರಾಟ್ ಕೊಹ್ಲಿ ಐಪಿಎಲ್ ಸೇರಿದಂತೆ ಒಟ್ಟು 31 ಟಿ20 ಪಂದ್ಯಗಳಿಂದ 89.66ರ ಸರಾಸರಿ ಮತ್ತು 147.14 ಸ್ಟ್ರೈಕ್ ರೇಟ್‌ನಲ್ಲಿ 1614 ರನ್ ಗಳಿಸಿದರು. 2016ನೇ ವರ್ಷ ಐಪಿಎಲ್ನಲ್ಲಿ 973 ರನ್ ಗಳಿಸಿದ್ದರು.
6 / 8
2016ರಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಈ ರನ್‌ಗಳು ಒಂದು ಕ್ಯಾಲೆಂಡರ್ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಸದ್ಯ ಸೂರ್ಯ 236 ರನ್ ಗಳಿಸಿದರೆ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಹೊಸ ದಾಖಲೆ ನಿರ್ಮಿಸಲಿದ್ದಾರೆ.
7 / 8
ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಪೈಪೊೀಟಿಗೆ ಬಿದ್ದಂತೆ ರನ್ ಗಳಿಸಿದ್ದ ಸೂರ್ಯಕುಮಾರ್ ಯಾದವ್ ಅವರು 190ರ ಸ್ಟ್ರೈಕ್ ರೇಟ್‌ನಲ್ಲಿ 239 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ 98.66 ರ ಸರಾಸರಿಯಲ್ಲಿ 296 ರನ್ ಗಳಿಸಿದ್ದರು. ಕೊಹ್ಲಿ ಬ್ಯಾಟ್ನಿಂದ 4 ಅರ್ಧಶತಕ ಬಂದಿದ್ದರೆ, ಸೂರ್ಯ ಅವರು 3 ಅರ್ಧಶತಕಗಳೊಂದಿಗೆ ಭಾರತ ಸೆಮಿಫೈನಲ್ ಪ್ರವೇಶಿಸಲು ಸಹಾಯ ಮಾಡಿದ್ದರು.
8 / 8
ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವೆ ಇಂದು ಮೌಂಟ್ ಮೌಂಗನು (Mount Maunganui) ಬೇ ಓವಲ್ ಮೈದಾನದಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುತ್ತಿದ್ದು ಕಿವೀಸ್ ನಾಡಿನಲ್ಲಿ ಶುಭಾರಂಭ ಮಾಡುವ ತವಕದಲ್ಲಿದೆ.