ನಾಯಕತ್ವ ಸಿಕ್ಕ ಬಳಿಕ ಸೂರ್ಯನ ಬ್ಯಾಟ್ ಸೈಲೆಂಟ್
Suryakumar Yadav: ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ 19 ಪಂದ್ಯಗಳನ್ನಾಡಿದೆ. ಈ ವೇಳೆ ಭಾರತ ತಂಡವು 16 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಆದರೆ ಈ ಗೆಲುವಿನಲ್ಲಿ ಸೂರ್ಯನ ಬ್ಯಾಟ್ನಿಂದ ನಿರೀಕ್ಷಿತ ಕೊಡುಗೆ ಮೂಡಿಬಂದಿಲ್ಲ. ಏಕೆಂದರೆ ಕಳೆದ 12 ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಕಲೆಹಾಕಿರುವುದು 242 ರನ್ಗಳು ಮಾತ್ರ.
1 / 5
ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಟಿ20 ಕ್ರಿಕೆಟ್ನಲ್ಲಿ ರುದ್ರನರ್ತನ ತೋರಿದ್ದ ಸೂರ್ಯ ಇದೀಗ ರನ್ಗಳಿಸಲು ಪರದಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಅವರು ಕಳೆದ 10 ಇನಿಂಗ್ಸ್ಗಳಲ್ಲಿ ಕಲೆಹಾಕಿರುವ ಒಟ್ಟು ಸ್ಕೋರ್.
2 / 5
ಟಿ20 ವಿಶ್ವಕಪ್ 2024ರ ಬಳಿಕ ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಸೂರ್ಯ 12 ಪಂದ್ಯಗಳನ್ನಾಡಿದ್ದಾರೆ. ಆದರೆ ಒಮ್ಮೆಯೂ 360 ಡಿಗ್ರಿ ನರ್ತನ ತೋರಿಲ್ಲ ಎಂಬುದು ವಿಶೇಷ. ಏಕೆಂದರೆ ಈ 12 ಇನಿಂಗ್ಸ್ಗಳಲ್ಲಿ ಅವರು ಕಲೆಹಾಕಿರುವ ರನ್ ಸರಾಸರಿ ಕೇವಲ 24.50 ಮಾತ್ರ.
3 / 5
ಅಂದರೆ ಕಳೆದ 12 ಇನಿಂಗ್ಸ್ಗಳಿಂದ ಸೂರ್ಯಕುಮಾರ್ ಯಾದವ್ 242 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. 2022 ರಲ್ಲಿ 1164 ರನ್ ಬಾರಿಸಿದ್ದ ಸೂರ್ಯ, 2023 ರಲ್ಲಿ 17 ಇನಿಂಗ್ಸ್ಗಳಿಂದ 773 ರನ್ ಕಲೆಹಾಕಿದ್ದರು. ಆದರೀಗ 12 ಇನಿಂಗ್ಸ್ ಆಡಿದರೂ ಸೂರ್ಯನಿಗೆ 250 ರನ್ಗಳಿಸಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.
4 / 5
ಇದೀಗ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೊನ್ನೆಗೆ ಔಟಾಗಿದ್ದ ಸೂರ್ಯ, ದ್ವಿತೀಯ ಪಂದ್ಯದಲ್ಲಿ ಕೇವಲ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ 2025 ರಲ್ಲೂ ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ ಮುಂದುವರೆಸಿದ್ದಾರೆ.
5 / 5
ಇನ್ನು ಸೂರ್ಯಕುಮಾರ್ ಯಾದವ್ ಫಾರ್ಮ್ ಅವರ ಹದಗೆಡಲು ಪ್ರಮುಖ ಕಾರಣ ಅವರ ಮೇಲಿರುವ ಹೆಚ್ಚುವರಿ ಜವಾಬ್ದಾರಿ ಎಂದು ವಿಶ್ಲೇಷಿಸಲಾಗುತ್ತಿದೆ. ಅಂದರೆ ಟಿ20 ವಿಶ್ವ ಚಾಂಪಿಯನ್ ತಂಡವನ್ನು ಮುನ್ನಡೆಸುತ್ತಿರುವ ಒತ್ತಡ ಅವರ ಮೇಲಿದ್ದು, ಇದರಿಂದಾಗಿ ರನ್ಗಳಿಸಲು ಪರದಾಡುತ್ತಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳಲ್ಲಿ ವಿಫಲರಾಗಿರುವ ಸೂರ್ಯ ಮುಂದಿನ 3 ಪಂದ್ಯಗಳ ಮೂಲಕ ಹಳೆಯ ಲಯಕ್ಕೆ ಮರಳಲಿದ್ದಾರಾ ಕಾದು ನೋಡಬೇಕಿದೆ.