ಅಕ್ಷರ್ ಪಟೇಲ್ಗೆ ಓವರ್ ನೀಡದ ಸೂರ್ಯ: ಅನುಮಾನಕ್ಕೆ ಕಾರಣವಾದ ನಾಯಕನ ನಡೆ
South Africa vs India: ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಟೀಮ್ ಇಂಡಿಯಾ ಎರಡನೇ ಮ್ಯಾಚ್ನಲ್ಲಿ ಮುಗ್ಗರಿಸಿದೆ. ಇದೀಗ ಉಭಯ ತಂಡಗಳು ಮೂರನೇ ಪಂದ್ಯಕ್ಕಾಗಿ ಸಜ್ಜಾಗಿದ್ದು, ಈ ಪಂದ್ಯವು ನವೆಂಬರ್ 13 ರಂದು ಸೆಂಚುರಿಯನ್ನಲ್ಲಿ ನಡೆಯಲಿದೆ.
1 / 5
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 4 ಪಂದ್ಯಗಳ ಟಿ20 ಸರಣಿಯ ಮೊದಲೆರಡು ಮ್ಯಾಚ್ಗಳು ಮುಗಿದಿವೆ. ಈ ಎರಡೂ ಪಂದ್ಯಗಳಲ್ಲೂ ಅಕ್ಷರ್ ಪಟೇಲ್ ಕಾಣಿಸಿಕೊಂಡಿದ್ದರು. ಆದರೆ ಈ ಎರಡು ಮ್ಯಾಚ್ಗಳಲ್ಲಿ ಅಕ್ಷರ್ ಎಸೆದಿದ್ದು ಕೇವಲ 2 ಓವರ್ಗಳು ಎಂದರೆ ನಂಬಲೇಬೇಕು.
2 / 5
ಟೀಮ್ ಇಂಡಿಯಾದ ಸ್ಪಿನ್ ಆಲ್ರೌಂಡರ್ ಆಗಿರುವ ಅಕ್ಷರ್ ಪಟೇಲ್ ತಮ್ಮ ಅನಿರೀಕ್ಷಿತ ಎಸೆತಗಳಿಂದ ವಿಕೆಟ್ ಕಬಳಿಸಬಲ್ಲ ಬೌಲರ್. ಇದಾಗ್ಯೂ ಸೂರ್ಯಕುಮಾರ್ ಯಾದವ್ ಅಕ್ಷರ್ ಅವರನ್ನು ಎರಡೂ ಪಂದ್ಯಗಳಲ್ಲಿ ಬಳಸಿಕೊಳ್ಳದಿರುವುದು ಇದೀಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
3 / 5
ಮೊದಲ ಟಿ20 ಪಂದ್ಯದಲ್ಲಿ ಅಕ್ಷರ್ ಪಟೇಲ್ ಕಡೆಯಿಂದ ಸೂರ್ಯಕುಮಾರ್ ಯಾದವ್ ಹಾಕಿಸಿದ್ದು ಕೇವಲ ಒಂದು ಓವರ್ ಮಾತ್ರ. ಅದು ಕೂಡ 6ನೇ ಬೌಲರ್ ಆಗಿ ಬಳಸಿಕೊಂಡಿದ್ದರು. ಅಂದರೆ ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ ಕಡೆಯಿಂದ ಒಟ್ಟು 8 ಓವರ್ಗಳನ್ನು ಹಾಕಿಸಿದ್ದ ಸೂರ್ಯ, ಅನುಭವಿ ಅಕ್ಷರ್ಗೆ ಕೇವಲ ಒಂದು ಓವರ್ ಎಸೆಯಲು ಮಾತ್ರ ಅವಕಾಶ ನೀಡಿದ್ದರು.
4 / 5
ಇನ್ನು ದ್ವಿತೀಯ ಟಿ20 ಪಂದ್ಯದಲ್ಲೂ ಇದು ಪುನರಾವರ್ತನೆಯಾಯಿತು. ವರುಣ್ ಚಕ್ರವರ್ತಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುತ್ತಿದ್ದರೂ, ಅನುಭವಿ ಸ್ಪಿನ್ನರ್ ಅಕ್ಷರ್ ಪಟೇಲ್ ಅವರನ್ನು ಬಳಸಿಕೊಳ್ಳಲು ಸೂರ್ಯಕುಮಾರ್ ಯಾದವ್ ಮುಂದಾಗಲೇ ಇಲ್ಲ. ಅಲ್ಲದೆ ಈ ಪಂದ್ಯದಲ್ಲೂ 6ನೇ ಬೌಲರ್ ಆಗಿ ಬಳಸಿಕೊಂಡು ಕೇವಲ ಒಂದು ಓವರ್ ಮಾತ್ರ ನೀಡಿದ್ದರು. ಪರಿಣಾಮ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 3 ವಿಕೆಟ್ಗಳಿಂದ ಸೋಲಬೇಕಾಯಿತು.
5 / 5
ಅಂದರೆ ಎರಡು ಪಂದ್ಯಗಳಲ್ಲಿ ಅಕ್ಷರ್ ಪಟೇಲ್ ಎಸೆದಿದ್ದು ಕೇವಲ 2 ಓವರ್ಗಳು ಮಾತ್ರ. ಪರಿಪೂರ್ಣ ಸ್ಪಿನ್ ಆಲ್ರೌಂಡರ್ ಆಗಿರುವ ಅಕ್ಷರ್ ಪಟೇಲ್ ಅವರನ್ನು ಆಡುವ ಬಳಗಕ್ಕೆ ಆಯ್ಕೆ ಮಾಡಿ, ನಾಯಕ ಸೂರ್ಯಕುಮಾರ್ ಯಾದವ್ ಓವರ್ ನೀಡುತ್ತಿಲ್ಲವೇಕೆ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದರ ಜೊತೆಗೆ ಟೀಮ್ ಇಂಡಿಯಾ ನಾಯಕ ನಡೆಯು ಅನುಮಾನಕ್ಕೆ ಕಾರಣವಾಗಿದೆ.