Suryakumar Yadav: 50 ಇನಿಂಗ್ಸ್ ಬಳಿಕ ಟಾಪ್-5 ಗೆ ಸೂರ್ಯನ ಎಂಟ್ರಿ..!
TV9 Web | Updated By: ಝಾಹಿರ್ ಯೂಸುಫ್
Updated on:
Aug 14, 2023 | 8:30 PM
Suryakumar Yadav Record: ಈ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್ನಲ್ಲಿ ಮೊದಲ 50 ಇನಿಂಗ್ಸ್ಗಳ ಬಳಿಕ ಅತೀ ಹೆಚ್ಚು ರನ್ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಟಾಪ್-5 ನಲ್ಲಿ ಕಾಣಿಸಿಕೊಂಡಿದ್ದಾರೆ.
1 / 8
ವೆಸ್ಟ್ ಇಂಡೀಸ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತದ ಪರ ಸೂರ್ಯ ಅರ್ಧಶತಕ ಸಿಡಿಸಿದರು.
2 / 8
45 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ 3 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 61 ರನ್ ಬಾರಿಸಿದ್ದರು. ಈ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್ನಲ್ಲಿ ಮೊದಲ 50 ಇನಿಂಗ್ಸ್ಗಳ ಬಳಿಕ ಅತೀ ಹೆಚ್ಚು ರನ್ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಟಾಪ್-5 ನಲ್ಲಿ ಕಾಣಿಸಿಕೊಂಡಿದ್ದಾರೆ.
3 / 8
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಎಂಬುದು ವಿಶೇಷ. ಹಾಗೆಯೇ ಟಾಪ್-5 ನಲ್ಲಿ ಭಾರತದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಹಾಗಿದ್ರೆ ಟಿ20 ಕ್ರಿಕೆಟ್ನಲ್ಲಿ ಮೊದಲ 50 ಇನಿಂಗ್ಸ್ಗಳಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ಗಳು ಯಾರೆಲ್ಲಾ ಎಂದು ನೋಡೋಣ...
4 / 8
1- ವಿರಾಟ್ ಕೊಹ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ರನ್ ಸರದಾರನಾಗಿ ಮೆರೆಯುತ್ತಿರುವ ಕಿಂಗ್ ಕೊಹ್ಲಿ ಮೊದಲ 50 ಟಿ20 ಇನಿಂಗ್ಸ್ನಲ್ಲಿ ಒಟ್ಟು 1943 ರನ್ ಕಲೆಹಾಕಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
5 / 8
2- ಬಾಬರ್ ಆಝಂ: ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಮೊದಲ 50 ಟಿ20 ಇನಿಂಗ್ಸ್ನಲ್ಲಿ ಒಟ್ಟು 1942 ರನ್ ಕಲೆಹಾಕಿದ್ದಾರೆ. ಈ ಮೂಲಕ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.
6 / 8
3- ಮೊಹಮ್ಮದ್ ರಿಝ್ವಾನ್: ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ ಮೊದಲ ಟಿ20 ಇನಿಂಗ್ಸ್ಗಳಿಂದ ಒಟ್ಟು 1888 ರನ್ ಪೇರಿಸಿದ್ದಾರೆ.
7 / 8
4- ಸೂರ್ಯಕುಮಾರ್ ಯಾದವ್: 360 ಡಿಗ್ರಿ ಖ್ಯಾತಿಯ ಹೊಡಿಬಡಿ ದಾಂಡಿಗ ಸೂರ್ಯಕುಮಾರ್ ಯಾದವ್ ಮೊದಲ 50 ಟಿ20 ಇನಿಂಗ್ಸ್ಗಳಿಂದ 1841 ರನ್ ಕಲೆಹಾಕಿದ್ದಾರೆ.
8 / 8
5- ಕೆಎಲ್ ರಾಹುಲ್: ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಮೊದಲ 50 ಟಿ20 ಇನಿಂಗ್ಸ್ಗಳಿಂದ ಒಟ್ಟು 1751 ರನ್ ಗಳಿಸಿದ್ದಾರೆ.