IND vs AUS 3rd T20I: ನೂತನ ದಾಖಲೆಯತ್ತ ಸೂರ್ಯಕುಮಾರ್ ಯಾದವ್: ಬೇಕಿರುವುದು ಕೇವಲ 60 ರನ್
Suryakumar Yadav T20I record: ಇಂದು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯಾ ಮೂರನೇ ಟಿ20 ಪಂದ್ಯ ಆಯೋಜಿಸಲಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ 60 ರನ್ ಗಳಿಸಿದರೆ ನೂತನ ದಾಖಲೆ ನಿರ್ಮಾಣವಾಗಲಿದೆ.
1 / 7
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಮೊದಲ ಎರಡು ಪಂದ್ಯ ಜಯಿಸಿ 2-0 ಮುನ್ನಡೆ ಪಡೆದುಕೊಂಡಿರುವ ಭಾರತ (India vs Australia) ಇದೀಗ ತೃತೀಯ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಇಂದು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರನೇ ಟಿ20 ಪಂದ್ಯ ಆಯೋಜಿಸಲಾಗಿದೆ.
2 / 7
ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ 60 ರನ್ ಗಳಿಸಿದರೆ ನೂತನ ದಾಖಲೆ ನಿರ್ಮಾಣವಾಗಲಿದೆ. ದಿಗ್ಗಜರ ಸಾಲಿನಲ್ಲಿ ಸೂರ್ಯಕುಮಾರ್ ಹೆಸರು ಸೇರಲಿದ್ದು, ಇಲ್ಲಿಯವರೆಗೆ ಕೇವಲ ಮೂವರು ಭಾರತೀಯ ಕ್ರಿಕೆಟಿಗರ ಮಾತ್ರ ಈ ಸಾಧನೆ ಮಾಡಿದ್ದಾರೆ.
3 / 7
ಸೂರ್ಯಕುಮಾರ್ ಯಾದವ್ ಇಂದಿನ ಪಂದ್ಯದಲ್ಲಿ 60 ರನ್ ಗಳಿಸಿದರೆ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 2000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಗೆ ಸೇರಲಿದ್ದಾರೆ. ಈ ಮಾದರಿಯ ಕ್ರಿಕೆಟ್‌ನಲ್ಲಿ 55 ಪಂದ್ಯಗಳನ್ನು ಆಡಿರುವ ಸೂರ್ಯ 3 ಶತಕ ಮತ್ತು 16 ಅರ್ಧ ಶತಕಗಳೊಂದಿಗೆ 1940 ರನ್ ಗಳಿಸಿದ್ದಾರೆ.
4 / 7
ಸೂರ್ಯಕುಮಾರ್ ಅವರು ಆಸ್ಟ್ರೇಲಿಯಾ ವಿರುದ್ಧ ಗುವಾಹಟಿಯಲ್ಲಿ ಅಥವಾ ಮುಂದಿನ ಎರಡು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 60 ರನ್ ಗಳಿಸಿದರೆ, 2000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಆಗುತ್ತಾರೆ. ಅವರಿಗಿಂತ ಮುಂಚೆ ಮೂವರು ಈ ಸಾಧನೆ ಮಾಡಿದ್ದರು.
5 / 7
ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪೈಕಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ಹೆಸರುಗಳು ಮಾತ್ರ ಇವೆ. ಕೊಹ್ಲಿ 115 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 1 ಶತಕ ಮತ್ತು 37 ಅರ್ಧಶತಕಗಳೊಂದಿಗೆ 4008 ರನ್ ಗಳಿಸಿದ್ದಾರೆ.
6 / 7
ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದು, 148 ಪಂದ್ಯಗಳಲ್ಲಿ 3853 ರನ್ ಗಳಿಸಿದ್ದಾರೆ. 72 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 2265 ರನ್ ಗಳಿಸಿರುವ ಕೆಎಲ್ ರಾಹುಲ್ ಈ ಪಟ್ಟಿಯಲ್ಲಿರುವ ಮೂರನೇ ಭಾರತೀಯರಾಗಿದ್ದಾರೆ.
7 / 7
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಅವರು ಇಲ್ಲಿಯವರೆಗೆ ಆಡಿರುವ ಎರಡು ಪಂದ್ಯಗಳಲ್ಲಿ 99 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಮತ್ತು 190.38 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.