T20 World Cup 2021: ಸಿಕ್ಸರ್ ಕಿಂಗ್ ದಾಖಲೆ ಮೇಲೆ ಹಿಟ್ಮ್ಯಾನ್ ಕಣ್ಣು
TV9 Web | Updated By: ಝಾಹಿರ್ ಯೂಸುಫ್
Updated on:
Oct 20, 2021 | 10:38 PM
T20 World Cup 2021: ಭಾರತ ಮೊದಲ ಪಂದ್ಯವನ್ನು ಅಕ್ಟೋಬರ್ 24 ರಂದು ಆಡಲಿದ್ದು, ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ. ಹಾಗೆಯೇ ಅಕ್ಟೋಬರ್ 31 ರಂದು ಭಾರತ ನ್ಯೂಜಿಲೆಂಡ್ ವಿರುದ್ದ ಆಡಲಿದೆ.
1 / 5
ಟಿ20 ವಿಶ್ವಕಪ್ ಶುರುವಾದ ಬೆನ್ನಲ್ಲೇ ಹೊದ ದಾಖಲೆಗಳು ನಿರ್ಮಾಣವಾಗುತ್ತಿದೆ. ಈ ಬಾರಿ ಕೂಡ ಹಲವು ದಾಖಲೆಗಳು ನಿರ್ನಾಮವಾಗುವ ಸಾಧ್ಯತೆಯಿದ್ದು, ಅದರಲ್ಲೊಂದು ರೋಹಿತ್ ಶರ್ಮಾ ಬ್ಯಾಟ್ನಿಂದ ರೆಕಾರ್ಡ್ ಕ್ರಿಯೇಟ್ ಆಗುವ ನಿರೀಕ್ಷೆಯಿದೆ.
2 / 5
ಯುವರಾಜ್ ಸಿಂಗ್: ಈ ಪಟ್ಟಿಯಲ್ಲಿರುವ ಮತ್ತೊರ್ವ ಅನುಭವಿ ಆಲ್ ರೌಂಡರ್ ಯುವರಾಜ್ ಸಿಂಗ್. ಯುವಿ ಪಾಕ್ ವಿರುದ್ದ 8 ಪಂದ್ಯಗಳಲ್ಲಿ 155 ರನ್ ಗಳಿಸಿದ್ದಾರೆ. 2012 ರಲ್ಲಿ ಪಾಕಿಸ್ತಾನದ ವಿರುದ್ಧ 72 ಬಾರಿಸಿದ್ದು ಅವರ ಅತ್ಯುತ್ತಮ ಸ್ಕೋರ್. ಇನ್ನು ಯುವರಾಜ್ 2007 ರ ಟಿ20 ವಿಶ್ವಕಪ್ ವಿಜೇತ ತಂಡದ ಉಪನಾಯಕರಾಗಿದ್ದರು. ಆದರೆ ಪ್ರಸ್ತುತ ತಂಡದಲ್ಲಿ ಯುವರಾಜ್ ಸಿಂಗ್ ಇಲ್ಲ ಎಂಬುದು ಇಲ್ಲಿ ಗಮನಿಸಬೇಕು.
3 / 5
ಆದರೆ ಯುವಿಯ ಈ ದಾಖಲೆ ಮುರಿಯಲು ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ಇನ್ನು ಬೇಕಿರುವುದು ಕೇವಲ 10 ಸಿಕ್ಸ್ಗಳು ಮಾತ್ರ. 28 ಪಂದ್ಯಗಳಿಂದ 24 ಸಿಕ್ಸ್ ಸಿಡಿಸಿರುವ ರೋಹಿತ್ ಶರ್ಮಾ ಈ ಬಾರಿ 10 ಸಿಕ್ಸ್ ಬಾರಿಸಿದ್ರೆ, ಟೀಮ್ ಇಂಡಿಯಾ ಪರ ವಿಶ್ವಕಪ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ.
4 / 5
ಅದರಲ್ಲೂ ಲೀಗ್ ಹಂತದಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳನ್ನು ಆಡಲಿದ್ದು, ಈ ವೇಳೆ ಹಿಟ್ಮ್ಯಾನ್ ಬ್ಯಾಟ್ನಿಂದ 9 ಸಿಕ್ಸ್ ಸಿಡಿದರೆ ಯುವಿ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಇನ್ನು 10 ಸಿಕ್ಸ್ ಬಾರಿಸಿದ್ರೆ ಹೊಸ ದಾಖಲೆ ನಿರ್ಮಾಣವಾಗಲಿದೆ.
5 / 5
ಭಾರತ ಮೊದಲ ಪಂದ್ಯವನ್ನು ಅಕ್ಟೋಬರ್ 24 ರಂದು ಆಡಲಿದ್ದು, ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ. ಹಾಗೆಯೇ ಅಕ್ಟೋಬರ್ 31 ರಂದು ಭಾರತ ನ್ಯೂಜಿಲೆಂಡ್ ವಿರುದ್ದ ಆಡಲಿದೆ. ನವೆಂಬರ್ 3 ರಂದು ಅಫಘಾನಿಸ್ತಾನ್ ವಿರುದ್ದ, ಹಾಗೂ ನವೆಂಬರ್ 5 ಮತ್ತು ನವೆಂಬರ್ 8 ರಂದು ಅರ್ಹತಾ ಗುಂಪಿನಿಂದ ಆಯ್ಕೆಯಾಗುವ 2 ತಂಡಗಳ ವಿರುದ್ದ ಆಡಲಿದೆ.