T20 World Cup 2021: ಮೊದಲ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಶಕೀಬ್ ಅಲ್ ಹಸನ್
TV9 Web | Updated By: ಝಾಹಿರ್ ಯೂಸುಫ್
Updated on:
Oct 17, 2021 | 11:02 PM
T20 World Cup 2021: ಈ ಹಿಂದೆ ಈ ದಾಖಲೆ ಶ್ರೀಲಂಕಾದ ಯಾರ್ಕರ್ ಮಾಂತ್ರಿಕ ಲಸಿತ್ ಮಾಲಿಂಗ ಹೆಸರಿನಲ್ಲಿತ್ತು. ಇದೀಗ ಮಾಲಿಂಗ ದಾಖಲೆಯನ್ನು ಮುರಿದು ಮೊದಲ ಪಂದ್ಯದಲ್ಲೇ ಶಕೀಬ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
1 / 7
ಟಿ20 ವಿಶ್ವಕಪ್ ಶುರುವಾಗಿದೆ. ಅರ್ಹತಾ ಸುತ್ತಿನ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಸ್ಕಾಟ್ಲೆಂಡ್ ವಿರುದ್ದ ಆಡಿದೆ. ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ಶಕೀಬ್ 4 ಓವರ್ನಲ್ಲಿ 17 ರನ್ ನೀಡಿ 2 ವಿಕೆಟ್ ಕಬಳಿಸಿದ್ದಾರೆ. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ.
2 / 7
ಈ ಹಿಂದೆ ಈ ದಾಖಲೆ ಶ್ರೀಲಂಕಾದ ಯಾರ್ಕರ್ ಮಾಂತ್ರಿಕ ಲಸಿತ್ ಮಾಲಿಂಗ ಹೆಸರಿನಲ್ಲಿತ್ತು. ಇದೀಗ ಮಾಲಿಂಗ ದಾಖಲೆಯನ್ನು ಮುರಿದು ಮೊದಲ ಪಂದ್ಯದಲ್ಲೇ ಶಕೀಬ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್ನ ಟಾಪ್ 5 ಬೌಲರುಗಳ ಪಟ್ಟಿ ಹೀಗಿದೆ.
3 / 7
1- ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ): 89 ಪಂದ್ಯಗಳಿಂದ 108 ವಿಕೆಟ್
4 / 7
2- ಲಸಿತ್ ಮಾಲಿಂಗ (ಶ್ರೀಲಂಕಾ): 84 ಪಂದ್ಯಗಳಿಂದ 107 ವಿಕೆಟ್
5 / 7
3- ಟಿಮ್ ಸೌಥಿ (ನ್ಯೂಜಿಲೆಂಡ್): 83 ಪಂದ್ಯಗಳಿಂದ 99 ವಿಕೆಟ್
6 / 7
4- ಶಹೀದ್ ಅಫ್ರಿದಿ (ಪಾಕಿಸ್ತಾನ್): 99 ಪಂದ್ಯಗಳಿಂದ 98 ವಿಕೆಟ್
7 / 7
5- ರಶೀದ್ ಖಾನ್ (ಅಫ್ಘಾನಿಸ್ತಾನ್) 51 ಪಂದ್ಯಗಳಿಂದ 95 ವಿಕೆಟ್
Published On - 10:01 pm, Sun, 17 October 21