
ಕೆರಿಬಿಯನ್ ಆಲ್ ರೌಂಡರ್ ಆಂಡ್ರೆ ರಸೆಲ್ ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಅವರು ಕಣದಲ್ಲಿಲ್ಲ. ಕ್ರಿಕೆಟ್ ವೆಸ್ಟ್ ಇಂಡೀಸ್ ಮುಖ್ಯ ಆಯ್ಕೆಗಾರ ಡೆಸ್ಮಂಡ್ ಹೇನ್ಸ್ ಅವರು ರಸೆಲ್ ಅವರ ಪ್ರದರ್ಶನ ಮತ್ತು ಫಾರ್ಮ್ ಮಂಡಳಿಯನ್ನು ಇಂಪ್ರೆಸ್ ಮಾಡುವಲ್ಲಿ ವಿಫಲವಾಗಿದೆ. ಆದ್ದರಿಂದ ಅವರಿಗೆ ಅವಕಾಶ ಸಿಗಲಿಲ್ಲ ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಅವಕಾಶ ವಂಚಿತರಾಗಿದ್ದಾರೆ. ಈ ವರ್ಷ ಭಾರತ ಪರ ಸಂಜು 6 ಟಿ20 ಪಂದ್ಯಗಳನ್ನು ಆಡಿದ್ದು, ಅವರ 5 ಇನ್ನಿಂಗ್ಸ್‌ಗಳಲ್ಲಿ 39, 18, 77, 30*, 15 ರನ್‌ಬಾರಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಮೂರು ಇನ್ನಿಂಗ್ಸ್‌ಗಳಲ್ಲಿ 150+, ಎರಡರಲ್ಲಿ 130+ ಆಗಿದೆ. ಆದರೂ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಸಂಜುಗೆ ಸ್ಥಾನ ಸಿಕ್ಕಿಲ್ಲ.

ಪಾಕಿಸ್ತಾನ ತಂಡ ತನ್ನ ಅತ್ಯಂತ ಅನುಭವಿ ಆಲ್‌ರೌಂಡರ್ ಶೋಯೆಬ್ ಮಲಿಕ್‌ಗೆ ತಂಡದಲ್ಲಿ ಅವಕಾಶ ನೀಡಲಿಲ್ಲ. ಅವರು ಒಟ್ಟು 124 ಟಿ20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು ತಮ್ಮ ಹೆಸರಲ್ಲಿ 2435 ರನ್ ಬಾರಿಸಿದ್ದಾರೆ. ಮಲಿಕ್ ಅವರ ಅನುಭವ ತಂಡಕ್ಕೆ ತುಂಬಾ ಉಪಯುಕ್ತವಾಗುತ್ತಿತ್ತು. ಶೋಯೆಬ್ ಮಲಿಕ್ ಅನುಪಸ್ಥಿತಿಯಿಂದ ಅನುಭವಿ ಆಟಗಾರರು ಅತೃಪ್ತರಾಗಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ನಿಂದ ಶೋಯೆಬ್ ಮಲಿಕ್ ಜೊತೆಗೆ ಇಮಾದ್ ವಾಸಿಂ ಕೂಡ ಕಾಣೆಯಾಗಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಬ್ಬರ ಸೃಷ್ಟಿಸಿದ್ದ ತಾರೆಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಇಮಾದ್ ಸಿಪಿಎಲ್ ಸೀಸನ್ 7 ಪಂದ್ಯಗಳಲ್ಲಿ 10 ವಿಕೆಟ್ ಪಡೆಯುವ ಮೂಲಕ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಆದರೂ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.

ಏಷ್ಯಾಕಪ್‌ನಲ್ಲಿ ಟಿ20 ತಂಡಕ್ಕೆ ಪುನರಾಗಮನ ಮಾಡಿದ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ದಿನೇಶ್ ಚಾಂಡಿಮಾಲ್ ಗೂಡ ಸ್ಟ್ಯಾಂಡ್‌ಬೈ ಆಟಗಾರರಲ್ಲಿ ಮಾತ್ರ ಸ್ಥಾನ ಪಡೆದಿದ್ದಾರೆ. ಚಂಡಿಮಾಲ್‌ಗೆ ಏಷ್ಯಾಕಪ್‌ನಲ್ಲಿ ಆಡುವ ಅವಕಾಶವೂ ಸಿಕ್ಕಿರಲಿಲ್ಲ. ಆದರೆ ಚಾಂಡಿಮಾಲ್ ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನ ಸದಸ್ಯರಾಗಿದ್ದರು.