IND vs AUS: ಆಸೀಸ್ ವಿರುದ್ಧದ ಮೊದಲ ಹಣಾಹಣಿಗಾಗಿ ಮೊಹಾಲಿ ತಲುಪಿದ ಟೀಂ ಇಂಡಿಯಾ; ಫೋಟೋ ನೋಡಿ
IND vs AUS: ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಇತರ ಆಟಗಾರರು ಕೂಡ ಶನಿವಾರ ರಾತ್ರಿಯ ವೇಳೆಗೆ ಮೊಹಾಲಿ ತಲುಪಲಿದ್ದಾರೆ.

1 / 5

2 / 5

3 / 5

4 / 5

5 / 5
By signing in or creating an account, you agree with Associated Broadcasting Company's Terms & Conditions and Privacy Policy.
Updated on: Sep 17, 2022 | 7:40 PM
ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಇದೀಗ ಪಂದ್ಯಾವಳಿ ಆರಂಭಕ್ಕೆ ಕಾಯಬೇಕಾಗಿದ್ದು, ಇನ್ನೂ ಸುಮಾರು ಒಂದು ತಿಂಗಳು ಬಾಕಿ ಉಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡಕ್ಕೆ ತನ್ನ ಸಿದ್ಧತೆಯನ್ನು ಪರೀಕ್ಷಿಸಿಕೊಳ್ಳುವ ಅವಕಾಶವಿದ್ದು, ಇದಕ್ಕಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಹೀಗಾಗಿ ಟೀಂ ಇಂಡಿಯಾ ಆಟಗಾರರು ಮೊದಲ ಹಣಾಹಣಿಗಾಗಿ ಮೊಹಾಲಿ ತಲುಪಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ T20 ಸರಣಿಯೊಂದಿಗೆ ಭಾರತ ತಂಡದ ಸಿದ್ಧತೆಗಳು ಪ್ರಾರಂಭವಾಗುತ್ತವೆ. ಇದಕ್ಕಾಗಿ ಅನೇಕ ಭಾರತೀಯ ಆಟಗಾರರು ಮೊಹಾಲಿಗೆ ಎಂಟ್ರಿಕೊಡುತ್ತಿದ್ದಾರೆ. ಅಲ್ಲಿ ಸೆಪ್ಟೆಂಬರ್ 20 ಮಂಗಳವಾರ ಮೊದಲ ಪಂದ್ಯ ನಡೆಯಲಿದೆ. ತಂಡದ ದಿನೇಶ್ ಕಾರ್ತಿಕ್ ಹೊರತಾಗಿ, ಕೋಚ್ ರಾಹುಲ್ ದ್ರಾವಿಡ್ ಕೂಡ ಮೊಹಾಲಿಗೆ ಕಾಲಿಟ್ಟವರಲ್ಲಿ ಮೊದಲಿಗರು.
ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ತಮ್ಮ ಟ್ವಿಟರ್ ಖಾತೆಯಲ್ಲಿ ಆಟಗಾರರು ಆಗಮಿಸುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದೆ. ಇವರಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಹರ್ಷಲ್ ಪಟೇಲ್ ಗಾಯಗೊಂಡ ನಂತರ ಮೊದಲ ಬಾರಿಗೆ ತಂಡಕ್ಕೆ ಮರಳಿದ್ದಾರೆ. ಮೊಹಾಲಿಗೆ ಆಗಮಿಸಿದ ಇವರೆಲ್ಲರನ್ನು ಹೋಟೆಲ್ ಸಿಬ್ಬಂದಿ ಸ್ವಾಗತಿಸಿದರು.
ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಇತರ ಆಟಗಾರರು ಕೂಡ ಶನಿವಾರ ರಾತ್ರಿಯ ವೇಳೆಗೆ ಮೊಹಾಲಿ ತಲುಪಲಿದ್ದಾರೆ. ಮೂರು ಪಂದ್ಯಗಳ ಸರಣಿಯು ಮೊಹಾಲಿ (ಸೆಪ್ಟೆಂಬರ್ 20), ನಾಗ್ಪುರ (ಸೆಪ್ಟೆಂಬರ್ 23) ಮತ್ತು ಹೈದರಾಬಾದ್ (ಸೆಪ್ಟೆಂಬರ್ 25) ನಲ್ಲಿ ನಡೆಯಲಿದೆ.
ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಇತರ ಆಟಗಾರರು ಕೂಡ ಶನಿವಾರ ರಾತ್ರಿಯ ವೇಳೆಗೆ ಮೊಹಾಲಿ ತಲುಪಲಿದ್ದಾರೆ. ಮೂರು ಪಂದ್ಯಗಳ ಸರಣಿಯು ಮೊಹಾಲಿ (ಸೆಪ್ಟೆಂಬರ್ 20), ನಾಗ್ಪುರ (ಸೆಪ್ಟೆಂಬರ್ 23) ಮತ್ತು ಹೈದರಾಬಾದ್ (ಸೆಪ್ಟೆಂಬರ್ 25) ನಲ್ಲಿ ನಡೆಯಲಿದೆ.