Updated on: Oct 26, 2022 | 7:31 PM
ಟಿ20 ವಿಶ್ವಕಪ್ನ ಸೂಪರ್-12 ಪಂದ್ಯಗಳ ನಡುವೆಯೇ ಐಸಿಸಿ ನೂತನ ಟಿ20 ಬೌಲರ್ಗಳ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ವಿಶೇಷ ಎಂದರೆ ಈ ಪಟ್ಟಿಯಲ್ಲಿ ಕೇವಲ ಮೂವರು ವೇಗಿಗಳು ಮಾತ್ರ ಸ್ಥಾನ ಪಡೆದಿದ್ದಾರೆ.
ಅಂದರೆ ಟಾಪ್-10 ಪಟ್ಟಿಯಲ್ಲಿ 7 ಸ್ಪಿನ್ನರ್ಗಳಿದ್ದರೆ, ಮೂವರು ವೇಗದ ಬೌಲರ್ಗಳಿದ್ದಾರೆ. ಅದರಲ್ಲಿ ಟೀಮ್ ಇಂಡಿಯಾದ ವೇಗಿ ಕೂಡ ಸ್ಥಾನ ಪಡೆದಿರುವುದು ವಿಶೇಷ. ಹಾಗಿದ್ರೆ ನೂತನ ಟಿ20 ಬೌಲರ್ಗಳ ರ‍್ಯಾಕಿಂಗ್ ಸ್ಥಾನ ಪಡೆದಿರುವವರು ಯಾರೆಲ್ಲಾ ನೋಡೋಣ....
1- ರಶೀದ್ ಖಾನ್ (ಅಫ್ಘಾನಿಸ್ತಾನ್)- 702 ಅಂಕ
2- ಜೋಶ್ ಹ್ಯಾಝಲ್ವುಡ್ (ಆಸ್ಟ್ರೇಲಿಯಾ)- 699 ಅಂಕ
3- ತಬ್ರೇಝ್ ಶಂಸಿ (ಸೌತ್ ಆಫ್ರಿಕಾ)- 681 ಅಂಕ
4- ಮುಜೀಬ್ ಉರ್ ರೆಹಮಾನ್ (ಅಫ್ಘಾನಿಸ್ತಾನ್)- 677 ಅಂಕ
5- ಮಹೇಶ್ ತೀಕ್ಷಣ (ಶ್ರೀಲಂಕಾ)- 669 ಅಂಕ
6- ವನಿಂದು ಹಸರಂಗ (ಶ್ರೀಲಂಕಾ)- 668 ಅಂಕ
7- ಆ್ಯಡಂ ಝಂಪಾ (ಆಸ್ಟ್ರೇಲಿಯಾ)- 659 ಅಂಕ
8- ಸ್ಯಾಮ್ ಕರನ್ (ಇಂಗ್ಲೆಂಡ್)- 657 ಅಂಕ
9- ಆದಿಲ್ ರಶೀದ್ (ಇಂಗ್ಲೆಂಡ್)- 652 ಅಂಕ
10- ಭುವನೇಶ್ವರ್ ಕುಮಾರ್ (ಭಾರತ)- 647 ಅಂಕ