INDW vs AUSW: ಭಾರತ-ಆಸ್ಟ್ರೇಲಿಯಾ ಪಂದ್ಯದ ವೇಳೆ ಮಳೆ ಬಂದರೆ ಯಾರು ಫೈನಲ್​ಗೆ? ಇಲ್ಲಿದೆ ಮಾಹಿತಿ

| Updated By: ಝಾಹಿರ್ ಯೂಸುಫ್

Updated on: Feb 23, 2023 | 5:50 PM

T20 World Cup 2023 Semi Final: ಭಾರತ-ಐರ್ಲೆಂಡ್ ನಡುವಣ ಪಂದ್ಯವು ಮಳೆಯ ಕಾರಣ ಸ್ಥಗಿತವಾಗಿತ್ತು. ಇದಾಗ್ಯೂ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಿದ್ದರಿಂದ ಟೀಮ್ ಇಂಡಿಯಾ 5 ರನ್​ಗಳ ರೋಚಕ ಜಯದೊಂದಿಗೆ ಸೆಮಿಫೈನಲ್​ಗೆ ಪ್ರವೇಶಿಸಿದೆ.

1 / 5
ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್​ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಿದರೆ ಫಲಿತಾಂಶ ಏನಾಗಲಿದೆ ಎಂಬ ಆತಂಕವೊಂದು ಕ್ರಿಕೆಟ್ ಪ್ರೇಮಿಗಳಲ್ಲಿದೆ.

2 / 5
ಏಕೆಂದರೆ ಭಾರತ-ಐರ್ಲೆಂಡ್ ನಡುವಣ ಪಂದ್ಯವು ಮಳೆಯ ಕಾರಣ ಸ್ಥಗಿತವಾಗಿತ್ತು. ಇದಾಗ್ಯೂ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಿದ್ದರಿಂದ ಟೀಮ್ ಇಂಡಿಯಾ 5 ರನ್​ಗಳ ರೋಚಕ ಜಯದೊಂದಿಗೆ ಸೆಮಿಫೈನಲ್​ಗೆ ಪ್ರವೇಶಿಸಿದೆ.

3 / 5
ಇದೀಗ ಸೆಮಿಫೈನಲ್ ಪಂದ್ಯದ ವೇಳೆ ಮಳೆಯಾದರೆ ಫಲಿತಾಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಸಾಮಾನ್ಯವಾಗಿ ಐಸಿಸಿ ಟೂರ್ನಿಗಳ ನಾಕೌಟ್ ಪಂದ್ಯದ ವೇಳೆ ಮೀಸಲು ದಿನ ನೀಡಲಾಗುತ್ತದೆ. ಆದರೆ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಯಾವುದೇ ಮೀಸಲು ದಿನವನ್ನು ಘೋಷಿಸಿಲ್ಲ.

4 / 5
ಇದಾಗ್ಯೂ ಈ ನಿಯಮವನ್ನು ಜಾರಿಗೊಳಿಸಿದರೆ, ಸೆಮಿಫೈನಲ್ ಪಂದ್ಯವನ್ನು ಮರುದಿನಕ್ಕೆ ಮುಂದೂಡಬಹುದು. ಒಂದು ವೇಳೆ ಪಂದ್ಯ ನಡೆಯುತ್ತಿದ್ದ ವೇಳೆ ಮಳೆ ಬಂದರೆ ಫಲಿತಾಂಶ ನಿರ್ಧರಿಸಲು ಎರಡೂ ತಂಡಗಳು ಕನಿಷ್ಠ 10 ಓವರ್‌ಗಳನ್ನು ಆಡಿರಬೇಕಾಗುತ್ತದೆ. ಉಭಯ ತಂಡಗಳು 20 ಓವರ್​ ಆಡಿದ್ದರೆ ಮಾತ್ರ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲಾಗುತ್ತದೆ. ಇನ್ನು ಎರಡು ತಂಡಗಳು 10 ಕ್ಕಿಂತ ಕಡಿಮೆ ಓವರ್ ಆಡಿದ್ದರೆ ಮರುದಿನ (ಮೀಸಲು ದಿನ) ಪಂದ್ಯ ನಡೆಯಲಿದೆ.

5 / 5
ಇನ್ನು ಮರುದಿನ ಕೂಡ ಮಳೆಯ ಕಾರಣ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಒಂದು ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇಲ್ಲಿ ಲೀಗ್ ಹಂತದಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆದ್ದ ತಂಡ ಫೈನಲ್​ಗೆ ಪ್ರವೇಶಿಸಲಿದೆ. ಇದೀಗ ಭಾರತ-ಆಸ್ಟ್ರೇಲಿಯಾ ನಡುವಣ ಲೀಗ್ ಹಂತದ ಪಂದ್ಯಗಳ ಲೆಕ್ಕಾಚಾರ ತೆಗೆದುಕೊಂಡರೆ, ಆಸೀಸ್ ತಂಡವು ಒಂದೇ ಒಂದು ಪಂದ್ಯ ಸೋತಿಲ್ಲ. ಆದರೆ ಲೀಗ್​ ಹಂತದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿತ್ತು. ಹೀಗಾಗಿ ಮಳೆಯಿಂದ ಪಂದ್ಯ ರದ್ದಾದರೆ ಆಸ್ಟ್ರೇಲಿಯಾ ತಂಡವು ಫೈನಲ್​ಗೆ ಪ್ರವೇಶಿಸಲಿದೆ.

Published On - 5:45 pm, Thu, 23 February 23