T20 World Cup 2024: ಸಮಸ್ಯೆಗಳ ಆಗರವಾಗಿರುವ ಮೈದಾನದಲ್ಲಿ ಭಾರತ- ಪಾಕ್ ಪಂದ್ಯ..!
T20 World Cup 2024: ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಭಾರತ ಒಟ್ಟು 3 ಪಂದ್ಯಗಳನ್ನಾಡಿದೆ. ಅದರಲ್ಲಿ ಟೀಂ ಇಂಡಿಯಾ ಜೂನ್ 5 ರಂದು ಐರ್ಲೆಂಡ್ ತಂಡವನ್ನು ಎದುರಿಸಿದರೆ, ಜೂನ್ 9 ರಂದು ಪಾಕ್ ತಂಡವನ್ನು ಎದುರಿಸುತ್ತಿದೆ. ಬಳಿಕ ಜೂನ್ 12 ರಂದು ಯುಎಸ್ಎ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಗಳಿಗೂ ಮುನ್ನ ಈ ಮೈದಾನದಲ್ಲಿನ ಅವ್ಯವಸ್ಥೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.
1 / 7
ಟಿ20 ವಿಶ್ವಕಪ್ಗೆ ಅದ್ಧೂತರಿ ಚಾಲನೆ ಸಿಕ್ಕಿದೆ. ಜೂನ್ 5 ರಿಂದ ತನ್ನ ಅಭಿಯಾನ ಆರಂಭಿಸಲಿರುವ ಟೀಂ ಇಂಡಿಯಾ ಜೂನ್ 9 ರಂದು ಹೈವೋಲ್ಟೇಜ್ ಕದನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ನ್ಯೂಯಾರ್ಕ್‌ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ನಸ್ಸೌ ಕೌಂಟಿ ಸ್ಟೇಡಿಯಂ ಆತಿಥ್ಯವಹಿಸುತ್ತಿದೆ.
2 / 7
ಇದೇ ಮೈದಾನದಲ್ಲಿ ಭಾರತ ಇನ್ನೂ ಎರಡು ಪಂದ್ಯಗಳನ್ನು ಆಡಲಿದೆ. ಒಂದು ಪಾಕಿಸ್ತಾನವನ್ನು ಎದುರಿಸುವ ಮೊದಲು ಮತ್ತು ಇನ್ನೊಂದು ಅದನ್ನು ಎದುರಿಸಿದ ನಂತರ. ಇದರರ್ಥ ಟೀಂ ಇಂಡಿಯಾ ಜೂನ್ 5 ರಂದು ಐರ್ಲೆಂಡ್ ವಿರುದ್ಧ ಮತ್ತು ಜೂನ್ 12 ರಂದು ಯುಎಸ್ಎ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಗಳಿಗೂ ಮುನ್ನ ಈ ಮೈದಾನದಲ್ಲಿನ ಅವ್ಯವಸ್ಥೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.
3 / 7
ನ್ಯೂಯಾರ್ಕ್‌ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ನಸ್ಸೌ ಮಾಡ್ಯುಲರ್ ಸ್ಟೇಡಿಯಂ ಕಂಟೈನರ್‌ಗಳಿಂದ ಸಿದ್ಧವಾಗಿದೆ. ವಾಶ್‌ರೂಮ್‌ಗಳು ಕೂಡ ಕಂಟೈನರ್‌ಗಳಿಂದ ಮಾಡಲ್ಪಟ್ಟಿದೆ. ಹೀಗಾಗಿ ಹೆಚ್ಚಿನ ನೀರಿನ ಸೌಲಭ್ಯ ಈ ಕ್ರೀಡಾಂಗಣದಲ್ಲಿಲ್ಲ.
4 / 7
ಈ ಕ್ರೀಡಾಂಗಣದ ಮೈದಾನದ ಮೇಲಿನ ಹುಲ್ಲು ಸಹ ನೈಸರ್ಗಿಕವಾಗಿಲ್ಲ. ಅಂದರೆ ಕೃತಕ ಹುಲ್ಲನ್ನು ಬಳಸಲಾಗಿದೆ. ಹೀಗಾಗಿ ಇಡೀ ಕ್ರೀಡಾಂಗಣದಲ್ಲಿ ಹುಲ್ಲಿನ ಚಾಪೆ ಹಾಸಿದಂತೆ ಕಾಣುತ್ತದೆ. ಬರ್ಮುಡಾ ಹುಲ್ಲಿನ ಹೊದಿಕೆಯನ್ನು ಬಳಸಿದ್ದು, ಇದನ್ನು ಬೇಸ್‌ಬಾಲ್ ಮತ್ತು ಫುಟ್‌ಬಾಲ್ ಮೈದಾನಗಳಲ್ಲಿ ಬಳಸಲಾಗುತ್ತದೆ.
5 / 7
ಈ ಮೈದಾನಕ್ಕೆ ಕೃತಕ ಹುಲ್ಲನ್ನು ಬಳಸಿರುವುದರಿಂದ ಮೈದಾನದ ಔಟ್ ಫೀಲ್ಡ್ನಲ್ಲಿ ಬೌನ್ಸ್ ಇಲ್ಲ. ಸಾಮಾನ್ಯವಾಗಿ ಇತರ ಮೈದಾನಗಳಲ್ಲಿ ಚೆಂಡು, ಫೀಲ್ಡರ್ ಕೈ ತಪ್ಪಿದರೆ ಸುಲಭವಾಗಿ ಬೌಂಡರಿ ಆಚೆ ಹೋಗುತ್ತದೆ. ಆದರೆ ಇಲ್ಲಿ ಹಾಗಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಚೆಂಡನ್ನು ಎಷ್ಟೇ ರಬಸವಾಗಿ ಹೊಡೆದರೂ ಚೆಂಡು ನೆಲಕ್ಕೆ ಬಿದ್ದ ಬಳಿಕ ಅದರ ವೇಗ ತುಂಬಾ ಕಡಿಮೆಯಾಗುತ್ತದೆ. ಇದರಿಂದ ಈ ಮೈದಾನದಲ್ಲಿ ಸುಲಭವಾಗಿ ಬೌಂಡರಿಗಳಿಸಲು ಅವಕಾಶವಿಲ್ಲ.
6 / 7
ಟೀಂ ಇಂಡಿಯಾದ ಪಂದ್ಯಗಳು ಹಗಲಿನಲ್ಲಿ ನಡೆಯಲಿವೆ. ಸಿಕ್ಕಿರುವ ಮಾಹಿತಿ ಪ್ರಕಾರ ನ್ಯೂಯಾರ್ಕ್‌ನಲ್ಲಿ ಈಗ ಸಾಕಷ್ಟು ಬಿಸಿಲಿದೆ. ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ದುಬಾರಿ ಬೆಲೆಯ ಟಿಕೆಟ್ ಖರೀದಿಸಿದ ಹೊರತಾಗಿಯೂ ಬಿಸಿಲಲ್ಲಿ ಕುಳಿತು ಪಂದ್ಯ ವೀಕ್ಷಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸ್ಟೇಡಿಯಂನಲ್ಲಿ ಮೇಲ್ಛಾವಣಿಯ ವ್ಯವಸ್ಥೆ ಮಾಡಲಾಗಿಲ್ಲ.
7 / 7
ಸಮಾಧಾನಕರ ಸಂಗತಿಯೆಂದರೆ ಈ ಕ್ರೀಡಾಂಗಣಕ್ಕೆ ನೀಡಿರುವ ಭದ್ರತೆ. ಪಂದ್ಯದ ಅಧಿಕಾರಿಗಳು ಕೂಡ ಸುಲಭವಾಗಿ ಒಳಗೆ ಹೋಗಲು ಸಾಧ್ಯವಾಗುತ್ತಿಲ್ಲ. ಭಾರತ-ಬಾಂಗ್ಲಾದೇಶ ಅಭ್ಯಾಸ ಪಂದ್ಯದ ವೇಳೆ ರಸೆಲ್ ಅರ್ನಾಲ್ಡ್ ಕೂಡ ಎರಡೂವರೆ ಗಂಟೆಗಳ ಕಾಲ ಹೊರಗೆ ನಿಲ್ಲಬೇಕಾಯಿತು. ಭದ್ರತೆಗಾಗಿ ಹೆಚ್ಚಾಗಿ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ. ಅವರ ಹೊರತಾಗಿ ಎಫ್‌ಬಿಐ ತಂಡ ಕೂಡ ಭದ್ರತೆ ಒದಗಿಸುತ್ತಿದೆ.