
2024 ರ ಟಿ 20 ವಿಶ್ವಕಪ್‌ನಲ್ಲಿ ಗೆಲುವಿನ ಶುಭಾರಂಭ ಮಾಡಬೇಕು ಎಂದುಕೊಂಡಿದ್ದ ಇಂಗ್ಲೆಂಡ್‌ಗೆ ನಿರಾಸೆ ಎದುರಾಗಿದೆ. ಸ್ಕಾಟ್ಲೆಂಡ್ ವಿರುದ್ಧದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಯುರೋಪಿಯನ್ ತಂಡವನ್ನು ಸೋಲಿಸುವ ಆಂಗ್ಲರ ಆಕಾಂಕ್ಷೆಯೂ ನುಚ್ಚುನೂರಾಗಿದೆ.

ಇದೆಲ್ಲದರ ಹೊರತಾಗಿ ಆಂಗ್ಲರು ಆಡಿದ ಮೊದಲ ಪಂದ್ಯದಲ್ಲಿ ಬೇಡದ ದಾಖಲೆಯೊಂದನ್ನು ತಮ್ಮ ಖಾತೆ ಹಾಕಿಕೊಂಡಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ 3000 ದಿನಗಳ ನಂತರ ಅಂದರೆ 2016 ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಎದುರಿಸಿದ್ದ ಮುಜುಗರವನ್ನು ಮತ್ತೊಮ್ಮೆ ಅನುಭವಿಸಿದೆ.

ವಾಸ್ತವವಾಗಿ ನಿನ್ನೆ ನಡೆದ ಟಿ20 ವಿಶ್ವಕಪ್ 6ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡದ ಆರಂಭಿಕರಿಬ್ಬರು ಒಟ್ಟಾಗಿ ಮೊದಲ 10 ಓವರ್‌ಗಳಲ್ಲಿ ಸ್ಕೋರ್ ಬೋರ್ಡ್‌ನಲ್ಲಿ 90 ರನ್ ದಾಖಲಿಸಿದರು. ಅಂದರೆ ಈ 10 ಓವರ್‌ಗಳಲ್ಲಿ ಸ್ಕಾಟ್ಲೆಂಡ್‌ನ ಯಾವುದೇ ವಿಕೆಟ್ ಬೀಳಲಿಲ್ಲ.

ಇದಾದ ನಂತರ ಮಳೆಯಿಂದ ನಿಂತಿ ಪಂದ್ಯ ಮತ್ತೆ ಆರಂಭವಾಗಲೇ ಇಲ್ಲ. ಆದರೆ, ಈ 10 ಓವರ್‌ಗಳಲ್ಲಿ ಸ್ಕಾಟ್ಲೆಂಡ್ ತಂಡದ ಒಂದೇ ಒಂದು ವಿಕೆಟ್ ತೆಗೆಯುವುದರಲ್ಲಿ ವಿಫಲರಾದ ಇಂಗ್ಲೆಂಡ್ ವೇಗಿಗಳು 3000 ದಿನಗಳ ನಂತರ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗುವಂತ್ತಾಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್‌ನ ಇನ್ನಿಂಗ್ಸ್‌ನ ಮೊದಲ 6 ಓವರ್‌ಗಳಲ್ಲಿ ಅಂದರೆ ಪವರ್‌ಪ್ಲೇನಲ್ಲಿ ಯಾವುದೇ ವಿಕೆಟ್ ಪತನವಾಗಲಿಲ್ಲ. ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ವಿಕೆಟ್ ಪಡೆಯಲು ತಂಡದ 5 ಬೌಲರ್‌ಗಳನ್ನು ಬಳಸಿದರೂ ಯಾವುದೇ ಯಶಸ್ಸು ಸಿಗಲಿಲ್ಲ.

2016ರ ಟಿ20 ವಿಶ್ವಕಪ್‌ನಲ್ಲಿ ಅಂದರೆ ನಿಖರವಾಗಿ 3000 ದಿನಗಳ ಹಿಂದೆ ಇದೇ ಮುಜುಗರಕ್ಕೆ ಇಂಗ್ಲೆಂಡ್ ಒಳಗಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಂದಿನ ಪಂದ್ಯದ ಪವರ್‌ಪ್ಲೇಯಲ್ಲಿ ಇಂಗ್ಲೆಂಡ್ ವಿಕೆಟ್ ಪಡೆಯುವಲ್ಲಿ ವಿಫಲವಾಗಿತ್ತು. 18 ಮಾರ್ಚ್ 2016 ರಂದು ನಡೆದ ಆ ಪಂದ್ಯದ ಪವರ್‌ಪ್ಲೇ ಅಂದರೆ ಮೊದಲ 6 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ಯಾವುದೇ ವಿಕೆಟ್ ನಷ್ಟವಿಲ್ಲದೆ 83 ರನ್ ಕಲೆಹಾಕಿತ್ತು.

ಉಭಯ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಆಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 229 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ 2 ಎಸೆತಗಳು ಬಾಕಿ ಇರುವಂತೆ 230 ರನ್‌ಗಳ ಗುರಿಯನ್ನು ಸಾಧಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತ್ತು.