T20 World Cup 2024: ಸೂಪರ್-8 ಹಂತಕ್ಕೇರಲು ಪಾಕಿಸ್ತಾನ್ ತಂಡಕ್ಕೆ ಇನ್ನೂ ಇದೆ ಚಾನ್ಸ್
T20 World Cup 2024: ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯುತ್ತಿದೆ. ಈ ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಗ್ರೂಪ್ಗಳಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೂಪರ್-8 ಹಂತಕ್ಕೇರಲಿದೆ. ಅದರಂತೆ ಇದೀಗ ಗ್ರೂಪ್-ಎ ಅಂಕ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದರೆ, ಯುಎಸ್ಎ ತಂಡ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಪಾಕಿಸ್ತಾನ್ ತಂಡ 4ನೇ ಸ್ಥಾನದಲ್ಲಿದೆ.
1 / 6
T20 World Cup 2024: ಈ ಬಾರಿಯ ವಿಶ್ವಕಪ್ನಲ್ಲಿ ಕಪ್ ಗೆದ್ದೇ ಗೆಲ್ಲುತ್ತೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ಆಗಮಿಸಿದ ಪಾಕಿಸ್ತಾನ್ (Pakistan) ತಂಡ ಬ್ಯಾಕ್ ಟು ಬ್ಯಾಕ್ ಸೋಲನುಭವಿಸಿದೆ. ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಹೀನಾಯವಾಗಿ ಸೋತಿದ್ದ ಪಾಕ್ ಪಡೆ ಇದೀಗ ಭಾರತದ ವಿರುದ್ಧ ಕೂಡ ಮಂಡಿಯೂರಿದೆ.
2 / 6
ಈ ಎರಡು ಸೋಲುಗಳೊಂದಿಗೆ ಸೂಪರ್-8 ಹಂತಕ್ಕೇರುವ ಪಾಕಿಸ್ತಾನ್ ತಂಡದ ಹಾದಿ ಮತ್ತಷ್ಟು ಕ್ಲಿಷ್ಟಕರವಾಗಿದೆ. ಇದಾಗ್ಯೂ ಟಿ20 ವಿಶ್ವಕಪ್ನಿಂದ ಹೊರಬಿದ್ದಿಲ್ಲ. ಅಂದರೆ ಪಾಕ್ ತಂಡಕ್ಕೆ ಇನ್ನೂ ಎರಡು ಪಂದ್ಯಗಳಿದ್ದು, ಈ ಮ್ಯಾಚ್ಗಳಲ್ಲಿ ಪಾಕಿಸ್ತಾನ್ ತಂಡ ಗೆಲ್ಲಲೇಬೇಕು.
3 / 6
ಆದರೆ ಈ ಮ್ಯಾಚ್ಗಳಲ್ಲಿ ಗೆದ್ದರೆ ಮಾತ್ರ ಸಾಲಲ್ಲ. ಬದಲಾಗಿ ಉಳಿದ ತಂಡಗಳ ಫಲಿತಾಂಶವನ್ನು ಸಹ ಎದುರು ನೋಡಬೇಕು. ಅಂದರೆ ಮುಂದಿನ ಪಂದ್ಯಗಳಲ್ಲಿ ಯುಎಸ್ಎ ತಂಡ ಗೆಲ್ಲಬಾರದು. ಒಂದು ವೇಳೆ ಯುಎಸ್ಎ ಹಾಗೂ ಭಾರತ ಮುಂದಿನ ಪಂದ್ಯಗಳಲ್ಲಿ ಒಂದು ಜಯ ಸಾಧಿಸಿದರೆ ಪಾಕಿಸ್ತಾನ್ ತಂಡ ಅಧಿಕೃತವಾಗಿ ಟಿ20 ವಿಶ್ವಕಪ್ನಿಂದ ಹೊರಬೀಳಲಿದೆ.
4 / 6
ಭಾರತ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದರೆ ಸೂಪರ್-8 ಹಂತಕ್ಕೇರಲಿದೆ. ಇನ್ನು ಯುಎಸ್ಎ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದ್ದು, ಈ ಮ್ಯಾಚ್ನಲ್ಲಿ ಸೋತರೆ ಮಾತ್ರ ಪಾಕಿಸ್ತಾನ್ ತಂಡಕ್ಕೆ ಸೂಪರ್-8 ಹಂತಕ್ಕೇರಲು ಅವಕಾಶ ಇರಲಿದೆ.
5 / 6
ಅಂದರೆ ಇಲ್ಲಿ ಐರ್ಲೆಂಡ್ ವಿರುದ್ಧ ಯುಎಸ್ಎ ತಂಡ ಸೋತರೆ ಮಾತ್ರ ಪಾಕ್ ತಂಡಕ್ಕೆ ಅವಕಾಶ ಇರಲಿದೆ. ಅದರಂತೆ ಕೆನಡಾ ಮತ್ತು ಐರ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಪಾಕಿಸ್ತಾನ್ ತಂಡವು ಭರ್ಜರಿ ಜಯ ಸಾಧಿಸುವ ಮೂಲಕ 4 ಅಂಕಗಳೊಂದಿಗೆ ಉತ್ತಮ ನೆಟ್ ರನ್ ರೇಟ್ ನೆರವಿನಿಂದ ಸೂಪರ್-8 ಹಂತಕ್ಕೇರಬಹುದು.
6 / 6
ಹೀಗಾಗಿ ಪಾಕಿಸ್ತಾನ್ ತಂಡದ ಟಿ20 ವಿಶ್ವಕಪ್ ಭವಿಷ್ಯ ಈಗ ಯುಎಸ್ಎ ತಂಡದ ಕೈಯಲ್ಲಿದೆ ಎನ್ನಬಹುದು. ಏಕೆಂದರೆ ಭಾರತ ತಂಡ ಯುಎಸ್ಎ ವಿರುದ್ಧ ಜಯ ಸಾಧಿಸುವುದು ಬಹುತೇಕ ಖಚಿತ. ಇನ್ನು ಐರ್ಲೆಂಡ್ ಮತ್ತು ಯುಎಸ್ಎ ನಡುವಣ ಪಂದ್ಯದಲ್ಲಿ ಐರ್ಲೆಂಡ್ ಗೆಲುವು ದಾಖಲಿಸಿದರೆ, ಮಾತ್ರ ಪಾಕಿಸ್ತಾನ್ ತಂಡಕ್ಕೆ ಮುಂದಿನ ಹಂತಕ್ಕೇರಲು ಅವಕಾಶ ಇರಲಿದೆ. ಹೀಗಾಗಿ ಜೂನ್ 14 ರಂದು ಪಾಕ್ ತಂಡದ ಟಿ20 ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ ಎನ್ನಬಹುದು.
Published On - 11:04 am, Mon, 10 June 24