Tim Southee: 24 ಎಸೆತಗಳಲ್ಲಿ ಹೊಸ ಇತಿಹಾಸ ನಿರ್ನಿಸಿದ ಟಿಮ್ ಸೌಥಿ
T20 World Cup 2024: ಟಿ20 ವಿಶ್ವಕಪ್ನಿಂದ ನ್ಯೂಝಿಲೆಂಡ್ ತಂಡ ಹೊರಬಿದ್ದಿದೆ. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಸೋತಿದ್ದ ನ್ಯೂಝಿಲೆಂಡ್ 2ನೇ ಮ್ಯಾಚ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪರಾಜಯಗೊಂಡಿತ್ತು. ಅತ್ತ ಮೂರು ಪಂದ್ಯಗಳಲ್ಲೂ ಜಯ ಸಾಧಿಸುವ ಮೂಲಕ ಅಫ್ಘಾನಿಸ್ತಾನ್ ಮತ್ತು ವೆಸ್ಟ್ ಇಂಡೀಸ್ ತಂಡಗಳು 6 ಅಂಕಗಳೊಂದಿಗೆ ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ.
1 / 6
T20 World Cup 2024: ಟಿ20 ವಿಶ್ವಕಪ್ನ 32ನೇ ಪಂದ್ಯದಲ್ಲಿ ನ್ಯೂಝಿಲೆಂಡ್ ವೇಗಿ ಟಿಮ್ ಸೌಥಿ (Tim Southee) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ 4 ಓವರ್ಗಳ ಮೂಲಕ ಎಂಬುದು ವಿಶೇಷ. ಉಗಾಂಡ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು.
2 / 6
ಅದರಂತೆ ಮೊದಲು ಬ್ಯಾಟ್ ಮಾಡಿದ ಉಗಾಂಡ ತಂಡವು ಬಲಗೈ ವೇಗಿ ಟಿಮ್ ಸೌಥಿ ಎಸೆತಗಳನ್ನು ಗುರುತಿಸುವಲ್ಲಿ ತಡಕಾಡಿದರು. ಅತ್ತ ಬ್ಯಾಟರ್ಗಳು ಪರದಾಡುತ್ತಿದ್ದರೆ, ಇತ್ತ ಸೌಥಿ ಕರಾರುವಾಕ್ ದಾಳಿ ಸಂಘಟಿಸಿದರು. ಪರಿಣಾಮ ಉಗಾಂಡ ತಂಡವು 18.4 ಓವರ್ಗಳಲ್ಲಿ ಕೇವಲ 40 ರನ್ಗಳಿಗೆ ಆಲೌಟ್ ಆಯಿತು.
3 / 6
ಈ ವೇಳೆ 4 ಓವರ್ಗಳನ್ನು ಎಸೆದಿದ್ದ ಟಿಮ್ ಸೌಥಿ ನೀಡಿದ್ದು ಕೇವಲ 4 ರನ್ಗಳು ಮಾತ್ರ ಎಂದರೆ ನಂಬಲೇಬೇಕು. ಅಲ್ಲದೆ ಒಂದು ಮೇಡನ್ನೊಂದಿಗೆ 3 ವಿಕೆಟ್ಗಳನ್ನು ಕೂಡ ಕಬಳಿಸಿದರು. ಇದರೊಂದಿಗೆ ಟಿ20 ವಿಶ್ವಕಪ್ನಲ್ಲಿ 4 ಓವರ್ಗಳಲ್ಲಿ ಅತೀ ಕಡಿಮೆ ರನ್ ನೀಡಿದ ಬೌಲರ್ ಎಂಬ ವಿಶ್ವ ದಾಖಲೆ ಟಿಮ್ ಸೌಥಿ ಪಾಲಾಯಿತು.
4 / 6
ಇದಕ್ಕೂ ಮುನ್ನ ಈ ದಾಖಲೆ ಉಗಾಂಡ ತಂಡದ ಹಿರಿಯ ಸ್ಪಿನ್ನರ್ ಫ್ರಾಂಕ್ ನ್ಸುಬುಗಾ ಹೆಸರಿನಲ್ಲಿತ್ತು. ಟಿ20 ವಿಶ್ವಕಪ್ 2024ರಲ್ಲಿ ಪಪುವಾ ನ್ಯೂ ಗಿನಿಯಾ ವಿರುದ್ಧದ ಪಂದ್ಯದಲ್ಲಿ ನ್ಸುಬುಗಾ 4 ಓವರ್ಗಳಲ್ಲಿ 4 ರನ್ ನೀಡಿ 2 ವಿಕೆಟ್ ಕಬಳಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು.
5 / 6
ಇದೀಗ ಉಗಾಂಡ ವಿರುದ್ಧ 4 ಓವರ್ಗಳಲ್ಲಿ ಕೇವಲ 4 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಟಿಮ್ ಸೌಥಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ನಲ್ಲಿ 4 ಓವರ್ಗಳಲ್ಲಿ ಅತೀ ಕಡಿಮೆ ರನ್ ನೀಡಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
6 / 6
ಇನ್ನು ಈ ಪಂದ್ಯದಲ್ಲಿ ಉಗಾಂಡ ತಂಡ ನೀಡಿದ 41 ರನ್ಗಳ ಟಾರ್ಗೆಟ್ ಅನ್ನು ನ್ಯೂಝಿಲೆಂಡ್ ತಂಡವು 5.2 ಓವರ್ಗಳಲ್ಲಿ ಚೇಸ್ ಮಾಡಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಹೊರತಾಗಿಯೂ ನ್ಯೂಝಿಲೆಂಡ್ ತಂಡಕ್ಕೆ ಸೂಪರ್-8 ಹಂತಕ್ಕೇರಲು ಸಾಧ್ಯವಾಗುವುದಿಲ್ಲ. ಏಕೆಂದರೆ ಗ್ರೂಪ್-ಸಿ ಯಿಂದ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ್ ತಂಡಗಳು ಈಗಾಗಲೇ ದ್ವಿತೀಯ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.
Published On - 12:09 pm, Sat, 15 June 24