IND vs USA: ಟೀಮ್ ಇಂಡಿಯಾ ಪಾಲಿಗೆ ವರವಾದ ಹೊಸ ನಿಯಮ
T20 World Cup 2024: ಈ ಬಾರಿಯ ಟಿ20 ವಿಶ್ವಕಪ್ ಮೂಲಕ ಐಸಿಸಿ ಹೊಸ ನಿಯಮವನ್ನು ಪರಿಚಯಿಸಿದೆ. ಈ ನಿಯಮದ ಪ್ರಕಾರ ಒಂದು ಓವರ್ ಮುಗಿಸಿ ಮತ್ತೊಂದು ಓವರ್ ಪ್ರಾರಂಭಿಸಲು ಕೇವಲ 60 ಸೆಕೆಂಡ್ಸ್ ಮಾತ್ರ ಇರಲಿದೆ. ಈ 60 ಸಕೆಂಡ್ಗಳ ಒಳಗೆ ಮತ್ತೊಂದು ಓವರ್ ಅನ್ನು ಶುರು ಮಾಡಬೇಕಾಗುತ್ತದೆ. ಹೀಗೆ ಒಂದೇ ತಪ್ಪನ್ನು ಮೂರು ಬಾರಿ ಮಾಡಿದರೆ 5 ರನ್ಗಳ ಪೆನಾಲ್ಟಿ ವಿಧಿಸಲಾಗುತ್ತದೆ.
1 / 7
T20 World Cup 2024: ಟಿ20 ವಿಶ್ವಕಪ್ನ 25ನೇ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಟೀಮ್ ಇಂಡಿಯಾ (Team India) ಪ್ರಯಾಸದ ಗೆಲುವು ದಾಖಲಿಸಿದೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಸ್ಎ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 110 ರನ್ ಕಲೆಹಾಕಿತ್ತು.
2 / 7
ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಆರಂಭಿಕ ಆಘಾತ ನೀಡುವಲ್ಲಿ ಯುಎಸ್ಎ ಬೌಲರ್ಗಳು ಯಶಸ್ವಿಯಾಗಿದ್ದರು. ಅಲ್ಲದೆ 15 ಓವರ್ಗಳಲ್ಲಿ ನೀಡಿದ್ದು ಕೇವಲ 76 ರನ್ಗಳು ಮಾತ್ರ. ಹೀಗಾಗಿಯೇ ಕೊನೆಯ ಐದು ಓವರ್ಗಳ ವೇಳೆ ಪಂದ್ಯವು ರೋಚಕ ತಿರುವಿನತ್ತ ಸಾಗಿತು.
3 / 7
ಕೊನೆಯ 30 ಎಸೆತಗಳಲ್ಲಿ ಟೀಮ್ ಇಂಡಿಯಾಗೆ 35 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಐಸಿಸಿಯ ಹೊಸ ನಿಯಮ ಟೀಮ್ ಇಂಡಿಯಾ ಪಾಲಿಗೆ ವರವಾಗಿದ್ದು ವಿಶೇಷ. ಈ ನಿಯಮದಂತೆ ಭಾರತ ತಂಡವು ಕೊನೆಯ 30 ಎಸೆತಗಳಲ್ಲಿ 30 ರನ್ಗಳ ಗುರಿ ಪಡೆಯಿತು.
4 / 7
ಅಂದರೆ ಈ ಬಾರಿಯ ಟಿ20 ವಿಶ್ವಕಪ್ ಮೂಲಕ ಐಸಿಸಿ ಸ್ಟಾಪ್ ಕ್ಲಾಕ್ ನಿಯಮ ಪರಿಚಯಿಸಿದೆ. ಈ ನಿಯಮದ ಪ್ರಕಾರ, ಒಂದು ಓವರ್ ಮುಗಿಸಿ ಮತ್ತೊಂದು ಓವರ್ ಪ್ರಾರಂಭಿಸಲು ಕೇವಲ 60 ಸೆಕೆಂಡ್ಗಳ ಸಮಯವಕಾಶ ಇರಲಿದೆ. ಈ 60 ಸೆಕೆಂಡ್ಗಳ ಒಳಗೆ ಮತ್ತೊಂದು ಓವರ್ ಅನ್ನು ಶುರು ಮಾಡಬೇಕಾಗುತ್ತದೆ.
5 / 7
ಒಂದು ವೇಳೆ 60 ಸೆಕೆಂಡ್ಗಳ ಒಳಗೆ ಓವರ್ ಪ್ರಾರಂಭಿಸದಿದ್ದರೆ ಅಂಪೈರ್ ಮೊದಲ ಎಚ್ಚರಿಕೆ ನೀಡುತ್ತಾರೆ. ಎರಡನೇ ಬಾರಿ ಅದೇ ತಪ್ಪನ್ನು ಪುನರಾವರ್ತಿಸಿದರೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಗುತ್ತದೆ. ಇನ್ನು ಮೂರನೇ ಬಾರಿ ಕೂಡ 60 ಸೆಕೆಂಡ್ಗಳ ಒಳಗೆ ಓವರ್ ಶುರು ಮಾಡದಿದ್ದರೆ, ಫೀಲ್ಡಿಂಗ್ ತಂಡಕ್ಕೆ 5 ರನ್ಗಳ ಪೆನಾಲ್ಟಿ ವಿಧಿಸಲಾಗುತ್ತದೆ. ಅಂದರೆ ಬ್ಯಾಟಿಂಗ್ ತಂಡಕ್ಕೆ 5 ರನ್ಗಳನ್ನು ನೀಡಲಾಗುತ್ತದೆ.
6 / 7
ಭಾರತದ ವಿರುದ್ಧದ ಪಂದ್ಯದಲ್ಲಿ ಯುಎಸ್ಎ ತಂಡವು ಮೂರು ಬಾರಿ ಈ ತಪ್ಪನ್ನು ಮಾಡಿದೆ. ಹೀಗಾಗಿ ನಿರ್ಣಾಯಕ ಹಂತದಲ್ಲಿ ಭಾರತ ತಂಡಕ್ಕೆ 5 ರನ್ಗಳು ಹೆಚ್ಚುವರಿಯಾಗಿ ಸಿಕ್ಕಿದ್ದವು. ಇದರಿಂದ ಭಾರತ ತಂಡದ ಗುರಿಯು 35 ರನ್ಗಳಿಂದ 30 ರನ್ಗಳಿಗೆ ಇಳಿಯಿತು.
7 / 7
ಈ ಮೂಲಕ ಟೀಮ್ ಇಂಡಿಯಾ 18.2 ಓವರ್ಗಳಲ್ಲಿ ಗುರಿ ಬೆನ್ನತ್ತಲು ಸಾಧ್ಯವಾಯಿತು. ಅಂದರೆ ಕೇವಲ 10 ಎಸೆತಗಳು ಬಾಕಿ ಇರುವಂತೆ ಜಯ ಸಾಧಿಸಿತ್ತು. ಒಂದು ವೇಳೆ ಪೆನಾಲ್ಟಿ ರೂಪದಲ್ಲಿ ಭಾರತಕ್ಕೆ 5 ರನ್ಗಳು ಸಿಗದಿದ್ದರೆ ಪಂದ್ಯವು ಮತ್ತಷ್ಟು ರೋಚಕ ಹಂತದತ್ತ ಸಾಗುವ ಸಾಧ್ಯತೆಯಿತ್ತು. ಆದರೆ ಐಸಿಸಿಯ ಹೊಸ ನಿಯಮವು ಯುಎಸ್ಎ ಪಾಲಿಗೆ ಕಂಟಕವಾಗಿ ಪರಿಣಮಿಸಿದರೆ, ಟೀಮ್ ಇಂಡಿಯಾ ಪಾಲಿಗೆ ವರವಾಯಿತು. (ALL PC: ICC/Getty Images)