Virat Kohli: 12 ವರ್ಷಗಳ ಕನಸು: ವಿರಾಟ್ ಕೊಹ್ಲಿಗೆ ಇದುವೇ ಕೊನೆಯ ಚಾನ್ಸ್​

|

Updated on: Jun 29, 2024 | 8:04 AM

T20 World Cup 2024: ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಟಿ20 ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿದ್ದಾರೆ ವಿರಾಟ್ ಕೊಹ್ಲಿ. 2011 ರಲ್ಲಿ ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಆದರೆ ಈವರೆಗೆ ಟಿ20 ವಿಶ್ವಕಪ್ ಮಾತ್ರ ಗೆದ್ದಿಲ್ಲ.

1 / 5
T20 World Cup 2024: ಟಿ20 ವಿಶ್ವಕಪ್​ನ ಮಹಾಸಮರಕ್ಕೆ ವೇದಿಕೆ ಸಿದ್ಧವಾಗಿದೆ. ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ (India vs South Africa) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಟೀಮ್ ಇಂಡಿಯಾದ ಇಬ್ಬರು ದಿಗ್ಗಜರಿಗೆ ಕೊನೆಯ ವಿಶ್ವಕಪ್ ಪಂದ್ಯವಾಗಿರಲಿದೆ. ಅಂದರೆ ಈ ಬಾರಿಯ ಟಿ20 ವಿಶ್ವಕಪ್​ನೊಂದಿಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಟಿ20 ಅಂತಾರಾಷ್ಟ್ರೀಯ ಕೆರಿಯರ್ ಕೊನೆಗೊಳ್ಳುವುದು ಬಹುತೇಕ ಖಚಿತ.

2 / 5
ಹೀಗಾಗಿ ಟಿ20 ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿಯಲು ವಿರಾಟ್ ಕೊಹ್ಲಿ ಪಾಲಿಗೆ ಇದುವೇ ಕೊನೆಯ ಚಾನ್ಸ್. ರೋಹಿತ್ ಶರ್ಮಾ 2007 ರಲ್ಲಿ ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಭಾಗವಾಗಿದ್ದರು. ಆದರೆ ಕಳೆದ 5 ಆವೃತ್ತಿಗಳಲ್ಲಿ ಕಣಕ್ಕಿಳಿದರೂ ಕೊಹ್ಲಿ ಪಾಲಿಗೆ ಟಿ20 ವಿಶ್ವಕಪ್ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ.

3 / 5
2012 ರಲ್ಲಿ ಶುರುವಾರ ವಿರಾಟ್ ಕೊಹ್ಲಿಯ ಟಿ20 ವಿಶ್ವಕಪ್​ ಕನಸು, 2014 ರಲ್ಲಿ ಅಂತಿಮ ಹಂತಕ್ಕೆ ಬಂದಿತ್ತು. ಆದರೆ ಫೈನಲ್​ನಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿದ ಕಾರಣ ಟ್ರೋಫಿ ಎತ್ತಿ ಹಿಡಿಯುವ ಕೊಹ್ಲಿಯ ಕನಸು ಕನಸಾಗಿಯೇ ಉಳಿಯಿತು. ಇದಾದ ಬಳಿಕ 2016, 2021 ಮತ್ತು 2022 ರ ಟಿ20 ವಿಶ್ವಕಪ್​ಗಳಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡರೂ, ಭಾರತ ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲು ವಿಫಲವಾಗಿದೆ.

4 / 5
ಇದೀಗ 10 ವರ್ಷಗಳ ಬಳಿಕ ಟೀಮ್ ಇಂಡಿಯಾ ಅಂತಿಮ ಸುತ್ತಿಗೆ ಪ್ರವೇಶಿಸಿದೆ. ಅಲ್ಲದೆ ಟಿ20 ವಿಶ್ವಕಪ್​ ಎತ್ತಿ ಹಿಡಿಯಲು ವಿರಾಟ್ ಕೊಹ್ಲಿಗೆ ಇದುವೇ ಕೊನೆಯ ಚಾನ್ಸ್ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಈ ಬಾರಿಯಾದರೂ ಭಾರತ ತಂಡ ಟಿ20 ವಿಶ್ವಕಪ್ ಎತ್ತಿ ಹಿಡಿಯಲಿ ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಯ 12 ವರ್ಷಗಳ ಕನಸು ಕೊನೆಗೊಳ್ಳಲಿ ಎಂದು ಬಯಸುತ್ತಿದ್ದಾರೆ.

5 / 5
ಅದರಂತೆ ಬಾರ್ಬಡೋಸ್​ನಲ್ಲಿ ಇಂದು (ಜೂ.29) ನಡೆಯಲಿರುವ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಆಟಗಾರರು ವಿರಾಟ್ ಕೊಹ್ಲಿಯ ಅತೀ ದೊಡ್ಡ ಕನಸನ್ನು ಈಡೇರಿಸಲಿದ್ದಾರಾ ಕಾದು ನೋಡಬೇಕಿದೆ.