T20 World Cup 2024: ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯುತ್ತಾ ನ್ಯೂಜಿಲೆಂಡ್?

|

Updated on: Jun 13, 2024 | 10:11 PM

T20 World Cup 2024: ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಹೀನಾಯವಾಗಿ ಸೋತಿದ್ದ ಕಿವೀಸ್ ತಂಡ ನಿನ್ನೆ ಅಂದರೆ, ಗುರುವಾರದಂದು ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 13 ರನ್‌ಗಳಿಂದ ಸೋಲೊಪ್ಪಿಕೊಂಡಿದೆ. ಈ ಸೋಲಿನ ನಂತರ ಕಿವೀ ತಂಡವು ವಿಶ್ವಕಪ್‌ನಿಂದ ಬಹುತೇಕ ಹೊರಗುಳಿಯುವ ಹೊಸ್ತಿಲಿನಲ್ಲಿದೆ. ಆದಾಗ್ಯೂ ತಂಡಕ್ಕೆ ಈಗಲೂ ಸೂಪರ್ 8 ಸುತ್ತಿಗೇರುವ ಅವಕಾಶವಿದೆ. ಆದರೆ ಇದಕ್ಕಾಗಿ ಪವಾಡವೇ ನಡೆಯಬೇಕಿದೆ.

1 / 7
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಬಲಿಷ್ಠ ತಂಡಗಳು ಎಂದು ಕರೆಸಿಕೊಳ್ಳುತ್ತಿದ್ದ ಕೆಲವು ತಂಡಗಳ ಪ್ರದರ್ಶನ ತೀರ ಕಳಪೆಯಾಗಿದೆ. ಅಂತಹ ತಂಡಗಳಲ್ಲಿ ನ್ಯೂಜಿಲೆಂಡ್ ತಂಡ ಕೂಡ ಒಂದಾಗಿದೆ. ಲೀಗ್​ ಸುತ್ತಿನಲ್ಲಿ ಇದುವರೆಗೆ 2 ಪಂದ್ಯಗಳನ್ನು ಆಡಿರುವ ಕೇನ್ ವಿಲಿಯಮ್ಸನ್ ಪಡೆ ಎರಡರಲ್ಲೂ ಸೋಲು ಕಂಡಿದೆ.

2 / 7
ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಹೀನಾಯವಾಗಿ ಸೋತಿದ್ದ ಕಿವೀಸ್ ತಂಡ ನಿನ್ನೆ ಅಂದರೆ, ಗುರುವಾರದಂದು ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 13 ರನ್‌ಗಳಿಂದ ಸೋಲೊಪ್ಪಿಕೊಂಡಿದೆ. ಈ ಸೋಲಿನ ನಂತರ ಕಿವೀ ತಂಡವು ವಿಶ್ವಕಪ್‌ನಿಂದ ಬಹುತೇಕ ಹೊರಗುಳಿಯುವ ಹೊಸ್ತಿಲಿನಲ್ಲಿದೆ. ಆದಾಗ್ಯೂ ತಂಡಕ್ಕೆ ಈಗಲೂ ಸೂಪರ್ 8 ಸುತ್ತಿಗೇರುವ ಅವಕಾಶವಿದೆ. ಆದರೆ ಇದಕ್ಕಾಗಿ ಪವಾಡವೇ ನಡೆಯಬೇಕಿದೆ.

3 / 7
ಸಿ ಗುಂಪಿನಲ್ಲಿರುವ ವೆಸ್ಟ್ ಇಂಡೀಸ್ 3 ಪಂದ್ಯಗಳನ್ನು ಗೆದ್ದು 6 ಅಂಕಗಳೊಂದಿಗೆ ಸೂಪರ್-8ಗೆ ಅರ್ಹತೆ ಪಡೆದಿದೆ. ಈ ಗುಂಪಿನಲ್ಲಿ ಅಫ್ಘಾನಿಸ್ತಾನ ಎರಡನೇ ಸ್ಥಾನದಲ್ಲಿದೆ. ಈ ತಂಡ 4 ಅಂಕ ಮತ್ತು +5.225 ನೆಟ್ ರನ್ ರೇಟ್ ಹೊಂದಿದೆ.

4 / 7
ಇದೇ ಗುಂಪಿನಲ್ಲಿರುವ ಉಗಾಂಡ 3 ಪಂದ್ಯಗಳಲ್ಲಿ ಒಂದನ್ನು ಗೆದ್ದು 2 ಅಂಕ ಮತ್ತು ನಿವ್ವಳ ರನ್ ರೇಟ್ -4.217 ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಪಪುವಾ ನ್ಯೂಗಿನಿ ಆಡಿರುವ 2 ಪಂದ್ಯಗಳಲ್ಲಿ 2ರಲ್ಲೂ ಸೋತು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಇದರ ಜೊತೆಗೆ ಎರಡು ಪಂದ್ಯಗಳಲ್ಲಿ ಸೋತಿರುವ ನ್ಯೂಜಿಲೆಂಡ್ ತಂಡ ಶೂನ್ಯ ಅಂಕ ಹಾಗೂ ನಿವ್ವಳ ರನ್ ರೇಟ್ -2.425ದೊಂದಿಗೆ ಐದನೇ ಸ್ಥಾನಕ್ಕೆ ತಲುಪಿದೆ.

5 / 7
ಇದೀಗ ನ್ಯೂಜಿಲೆಂಡ್ ತಂಡ ಸೂಪರ್-8ಗೆ ಅರ್ಹತೆ ಪಡೆಯಲು, ಜೂನ್ 15 ರಂದು ಉಗಾಂಡಾ ಮತ್ತು ಜೂನ್ 17 ರಂದು ಪಪುವಾ ನ್ಯೂಗಿನಿಯಾ ವಿರುದ್ಧದ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕು. ಆದಾಗ್ಯೂ, ಇದರ ಹೊರತಾಗಿಯೂ, ಅಫ್ಘಾನಿಸ್ತಾನ ತಂಡ, ಪಪುವಾ ನ್ಯೂಗಿನಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ತನ್ನ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಸೋಲಬೇಕು.

6 / 7
ಇದರ ಜೊತೆಗೆ ಉಗಾಂಡಾ ಮತ್ತು ಪಪುವಾ ನ್ಯೂಗಿನಿಯಾ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಸೋಲಬೇಕು. ಇದರೊಂದಿಗೆ, ನ್ಯೂಜಿಲೆಂಡ್ ತಂಡವು ಈ ಮೂರು ತಂಡಗಳಿಗಿಂತ 4 ಅಂಕ ಮತ್ತು ಉತ್ತಮ ನೆಟ್ ರನ್ ರೇಟ್‌ನೊಂದಿಗೆ ಸೂಪರ್-8 ಗೆ ಅರ್ಹತೆ ಪಡೆಯಬಹುದು.

7 / 7
ಆದರೆ, ಅಫ್ಘಾನಿಸ್ತಾನ, ಪಪುವಾ ನ್ಯೂಗಿನಿ ಎದುರು ಸೋಲುವುದು ಅಸಾಧ್ಯ. ಅಂತಹ ಪರಿಸ್ಥಿತಿಯಲ್ಲಿ, ವೆಸ್ಟ್ ಇಂಡೀಸ್ ಜೊತೆಗೆ ಅಫ್ಘಾನಿಸ್ತಾನವು ಸಿ ಗುಂಪಿನಿಂದ ಅರ್ಹತೆ ಪಡೆಯಬಹುದು ಎಂದು ನಂಬಲಾಗಿದೆ. ಒಟ್ಟಾರೆ, ನ್ಯೂಜಿಲೆಂಡ್‌ ತಂಡದ ಭವಿಷ್ಯವು ಇತರ ತಂಡಗಳ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಕಿವೀಸ್ ಪಡೆ ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯಲು ಪವಾಡವೇ ನಡೆಯಬೇಕಿದೆ.