Rohit Sharma: 8 ಸಿಕ್ಸರ್, 7 ಬೌಂಡರಿ, 92 ರನ್! ಕಾಂಗರೂಗಳ ಸೊಕ್ಕಡಗಿಸಿದ ರೋಹಿತ್ ಶರ್ಮಾ
IND vs AUS, T20 World Cup 2024: ಆರಂಭದಿಂದಲೂ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ, ಕ್ರೀಸ್ನಲ್ಲಿರುವವರೆಗೂ ಕಾಂಗರೂ ಬೌಲರ್ಗಳ ಸೊಕ್ಕಡಗಿಸುವ ಕೆಲಸ ಮಾಡಿದರು. ಅಂತಿಮವಾಗಿ ರೋಹಿತ್ 41 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 224.38 ಸ್ಟ್ರೈಕ್ ರೇಟ್‌ನಲ್ಲಿ 92 ರನ್ ಗಳಿಸಿ ಔಟಾದರು.
1 / 6
ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಸೂಪರ್ 8 ಸುತ್ತಿನ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ತಂಡದ ಇನ್ನಿಂಗ್ಸ್ಗೆ ಬಲ ತುಂಬಿದ್ದಾರೆ.
2 / 6
ಈ ಪಂದ್ಯದಲ್ಲಿ ಎಂದಿನಂತೆ ವಿರಾಟ್ ಕೊಹ್ಲಿ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ, ಮೊದಲ ಓವರ್ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವುದರೊಂದಿಗೆ ತಮ್ಮ ಖಾತೆ ತೆರೆದರು. ಇಲ್ಲಿಂದ ರೋಹಿತ್ರನ್ನು ಕಟ್ಟಿಹಾಕಲು ಯಾವ ಆಸೀಸ್ ವೇಗಿಗೂ ಸಾಧ್ಯಾವಾಗಲಿಲ್ಲ.
3 / 6
ಮಿಚೆಲ್ ಸ್ಟಾರ್ಕ್ ಎಸೆದ ಮೂರನೇ ಓವರ್ನಲ್ಲಿ ಬರೋಬ್ಬರಿ 4 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 28 ರನ್ ಸಿಡಿಸಿದ ರೋಹಿತ್ ಶರ್ಮಾ ಕೇವಲ 19 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಇಲ್ಲಿಗೆ ನಿಲ್ಲದ ರೋಹಿತ್ ಕಾಂಗರೂ ಬೌಲರ್ಗಳ ಬೆವರಿಳಿಸಿದರು.
4 / 6
ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡವನ್ನು ಕೇವಲ 10 ಓವರ್ಗಳಲ್ಲಿ 100 ರನ್ಗಳ ಗಡಿ ದಾಟಿಸಿದ ರೋಹಿತ್ ಶತಕದತ್ತ ದಾಪುಗಾಲಿಡುತ್ತಿದ್ದರು. ಅಲ್ಲದೆ ಸೂರ್ಯಕುಮಾರ್ ಜೊತೆಗೆ ಒಳ್ಳೇಯ ಜೊತೆಯಾಟವನ್ನು ಕಟ್ಟುತ್ತಿದ್ದರು. ಆದರೆ ಸ್ಟಾರ್ಕ್ ಓವರ್ನಲ್ಲಿ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದರು.
5 / 6
ಮೇಲೆ ಹೇಳಿದಂತೆ ಆರಂಭದಿಂದಲೂ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ, ಕ್ರೀಸ್ನಲ್ಲಿರುವವರೆಗೂ ಕಾಂಗರೂ ಬೌಲರ್ಗಳ ಸೊಕ್ಕಡಗಿಸುವ ಕೆಲಸ ಮಾಡಿದರು. ಅಂತಿಮವಾಗಿ ರೋಹಿತ್ 41 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 224.38 ಸ್ಟ್ರೈಕ್ ರೇಟ್‌ನಲ್ಲಿ 92 ರನ್ ಗಳಿಸಿ ಔಟಾದರು.
6 / 6
ಇದಲ್ಲದೆ ಈ ಪಂದ್ಯದಲ್ಲಿ ಬರೋಬ್ಬರಿ 8 ಸಿಕ್ಸರ್ಗಳನ್ನು ಸಿಡಿಸಿದ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 200 ಸಿಕ್ಸರ್ಗಳ ಗಡಿಯನ್ನೂ ದಾಟಿದರು.